CHITRADURGA NEWS | 06 OCTOBER 2025
ಚಿತ್ರದುರ್ಗ: ಕರ್ನಾಟಕ ರಾಜ್ಯ ರೈತೋದಯ ಹಸಿರು ಸೇನೆ ವತಿಯಿಂದ ಚಿತ್ರದುರ್ಗದಲ್ಲಿ ಡಿಸೆಂಬರ್ 07 ರಂದು ನಡೆಯಲಿರುವ 1008 ರೈತ ಕುಟುಂಬಕ್ಕೆ ಉಚಿತ ಸಾಮೂಹಿಕ ವಿವಾಹ ಸಮಾವೇಶಕ್ಕೆ ಭರದ ಸಿದ್ಧತೆ ನಡೆಯುತ್ತಿದೆ ಎಂದು ಕರ್ನಾಟಕ ರಾಜ್ಯ ರೈತೋದಯ ಹಸಿರು ಸೇನೆಯ ಸಂಸ್ಥಾಪಕ ಅಧ್ಯಕ್ಷರಾದ ಬಿ.ಟಿ.ಚಂದ್ರಶೇಖರ್ ತಿಳಿಸಿದರು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಅಕ್ಟೋಬರ್ 06 | ಮೆಕ್ಕೆಜೋಳ, ಶೇಂಗಾ, ಸೂರ್ಯಕಾಂತಿ ರೇಟ್ ಎಷ್ಟಿದೆ?
ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ನಡೆದ 1008 ರೈತ ಕಲ್ಯಾಣೋತ್ಸವ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿವಿಧ ಜಿಲ್ಲೆಗಳಿಂದ ವಿವಾಹಕ್ಕಾಗಿ ಗಂಡು-ಹೆಣ್ಣನ್ನು ನೊಂದಾಯಿಸುವವರು ಶೀಘ್ರವಾಗಿ ನೊಂದಾಯಿಸುವಂತೆ ತಿಳಿಸಿದರು.
ಕಳೆದ ಹಲವಾರು ತಿಂಗಳುಗಳಿಂದ ಈ ಕಾರ್ಯಕ್ರಮಕ್ಕಾಗಿ ಸಕಲ ಸಿದ್ದತೆ ಮಾಡಲಾಗುತ್ತಿದೆ, ಇಂದಿನ ದಿನಮಾನದಲ್ಲಿ ಒಂದು ಮದುವೆ ಎಂದು ಲಕ್ಷಾಂತರ ರೂ ವೆಚ್ಚವಾಗುತ್ತದ. ಇದಕ್ಕಾಗಿ ಸಾಲ ಮಾಡಬೇಕು, ಇಲ್ಲವೆ ಇದ್ದ ಹೊಲ ಮಾರಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.
ಇದನ್ನು ತಪ್ಪಿಸುವ ಸಲುವಾಗಿ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಏರ್ಪಡಿಸಲಾಗಿದೆ. ಇದರಲ್ಲಿ ಭಾಗವಹಿಸಿ ಯಾವುದೇ ಖರ್ಚು ಇಲ್ಲದೆ ಮದುವೆ ಮಾಡಿಕೊಳ್ಳಬಹುದಾಗಿದೆ ಎಂದರು.
ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಸುಮಾರು 12 ಕೋಟಿ ವೆಚ್ಚವಾಗಲಿದೆ. ಈಗಾಗಲೇ ಹಲವಾರು ದಾನಿಗಳು ಹಲವಾರು ವಸ್ತುಗಳನ್ನು ನೀಡಲು ಮುಂದೆ ಬಂದಿದ್ದಾರೆ.
ಈ ವಿವಾಹ ಕಾರ್ಯಕ್ರಮವೂ ಜಗದ್ಗುರು ಶಂಕರಚಾರ್ಯ ಶ್ರೀ ಭಾರತಿ ತೀರ್ಥ ಮಹಾ ಸನ್ನಿಧಾನಂನ ಶ್ರೀಗಳ ಆರ್ಶೀವಾದದೊಂದಿಗೆ, ಜಗದ್ಗುರು ಶಂಕರಚಾರ್ಯ ಶ್ರೀ ವಿಧುಶೇಖರ ಭಾರತಿ ಮಹಾ ಸನ್ನಿಧಾನಂನರವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಇದನ್ನೂ ಓದಿ: ಜಾತಿ ಗಣತಿ | ಎಚ್.ಆಂಜನೇಯ ಮನೆ ಮನೆಗೆ ಭೇಟಿ ನೀಡಿ ಜಾಗೃತಿ
ಇದರಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ವಿರೇಂದ್ರ ಹೆಗ್ಗಡೆಯವರು 1008 ತಾಳಿಗಳನ್ನು ನೀಡುವುದಾಗಿ ತಿಳಿಸಿದ್ದಾರೆ. ಇದ್ದಲ್ಲದೆ ರಾಜ್ಯದ ಹಲವಾರು ಜನತೆ ಈ ಕಾರ್ಯಕ್ರಮಕ್ಕೆ ಸಹಾಯವನ್ನು ಮಾಡಿದ್ದಾರೆ.
ಇಲ್ಲಿ ವಿವಾಹವಾಗುವ ಮಧು-ವರರಿಗೆ ಪಾತ್ರೆ, ಬಾಂಡೆ, ಸಾಮಾಗ್ರಿಗಳು, ವಸ್ತ್ರಗಳು, ಬಟ್ಟೆಗಳನ್ನು ನೀಡಲಾಗುವುದು. ಈ ವಧು-ವರರಿಗೆ ಸರ್ಕಾರ ಸುಮಾರು 5 ಲಕ್ಷ ರೂ ವೆಚ್ಚದಲ್ಲಿ ಮನೆ ನಿರ್ಮಾಣ ಮಾಡಿಕೊಂಡುವಂತೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 900 ಅರ್ಜಿಗಳು ಬಂದಿವೆ. ಇದರಲ್ಲಿ ನಮ್ಮ ಸಮಿತಿ ಸರಿಯಾದ ರೀತಿಯಲ್ಲಿ ಮದುವೆಗೆ ನಿಗಧಿಯಾದ ವಯಸ್ಸು ಇದ್ದವರಿಗೆ ಮಾತ್ರ ವಿವಾಹ ಮಾಡಲಾಗುವುದು. ಕಡಿಮೆ ವಯಸ್ಸು ಇದ್ದವರನ್ನು ತಿರಸ್ಕಾರ ಮಾಡಲಾಗುವುದು.
ಡಡಿಸೆಂಬರ್ 07ರಂದು ಬೆಳಿಗ್ಗೆ 10.30 ರಿಂದ 11.30ರವರೆಗೆ ವಿವಾಹ ನಡೆಯಲಿದೆ. ಸುಮಾರು 12 ಕೋಟಿ ವೆಚ್ಚದಲ್ಲಿ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಈಗ 6 ರಿಂದ 7 ಕೋಟಿಯಷ್ಟು ನೆರವು ಸಿಕ್ಕಿದೆ. ಇನ್ನೂ 5 ಕೋಟಿ ಯಷ್ಟು ನೆರವು ದೊರಕಬೇಕಿದೆ. ರಾಜ್ಯದಲ್ಲಿನ ದಾನಿಗಳು ಮುಂದೆ ಬಂದು ಈ ವಿವಾಹ ಕಾರ್ಯಕ್ರಮಕ್ಕೆ ನೆರವಾಗಬೇಕೆಂದು ಮನವಿ ಮಾಡಿದ್ದಾರೆ.
ಕಾರ್ಯಕ್ರಮವನ್ನು ಚಿತ್ರದುರ್ಗ ನಗರದ ಹೊರ ವಲಯದ ಮಾದಾರ ಚನ್ನಯ್ಯಸ್ವಾಮಿ ಮಠದ ಪಕ್ಕದಲ್ಲಿನ ಬಡಗಿ ಕಾರ್ಮಿಕರ ಸಂಘದ ಅಧ್ಯಕ್ಷ ಜಾಕೀರಹುಸೇನ್ ಅವರ ಬಡಗಿ ನಿವೇಶನದ ಜಾಗದಲ್ಲಿ ಹಮ್ಮಿಕೊಳ್ಳಲಾಗಿದೆ.
ಇದನ್ನೂ ಓದಿ: ಬಾಲ ವೈಜ್ಞಾನಿಕ್ ಪ್ರದರ್ಶಿನಿ | ಚಳ್ಳಕೆರೆ ತಾಲೂಕಿನ ಸರ್ಕಾರಿ ಶಾಲೆ ವಿದ್ಯಾರ್ಥಿನಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ
ಕರ್ನಾಟಕ ರಾಜ್ಯ ರೈತೋದಯ ಹಸಿರು ಸೇನೆ ವತಿಯಿಂದ ಇದೊಂದು ಕ್ರಾಂತಿಕಾರಿಕ ಕಾರ್ಯಕ್ರಮವಾಗಿದೆ. ರಾಜ್ಯದಲ್ಲಿ ಈ ರೀತಿಯಾದ ಕಾರ್ಯಕ್ರಮವನ್ನು ಯಾರೂ ಸಹಾ ಮಾಡಿಲ್ಲ. ಇದು ಪೂರ್ಣ ಪ್ರಮಾಣದಲ್ಲಿ ರೈತರಿಗಾಗಿಯೇ ಮಾಡಿರುವ ಕಾರ್ಯಕ್ರಮ ಇದ್ದಾಗಿದೆ. ಇದರಲ್ಲಿ ರೈತ ಬಾಂಧವರು ಭಾಗವಹಿಸುವುದರ ಮೂಲಕ ಉಚಿತವಾಗಿ ತಮ್ಮ ಮಕ್ಕಳ ವಿವಾಹ ಮಾಡಬೇಕಿದೆ ಎಂದು ಚಂದ್ರಶೇಖರ್ ಕರೆ ನೀಡಿದರು.
ಸಭೆಯಲ್ಲಿ ಬಡಗಿ ಕಾರ್ಮಿಕರ ಸಂಘದ ಅಧ್ಯಕ್ಷರಾದ ಜಾಕೀರ ಹುಸೇನ್ ಮಾತನಾಡಿದರು.
ಕರ್ನಾಟಕ ರಾಜ್ಯ ರೈತೋದಯ ಹಸಿರು ಸೇನೆಯ ಮಹಿಳಾ ರಾಜ್ಯಾಧ್ಯಕ್ಷರಾದ ದೇವಮ್ಮ, ರಾಜ್ಯ ವರಿಷ್ಠರಾದ ಮೈಸೂರು ರಮಾನಂದ್, ನ್ಯಾಯವಾದಿ ತೇಜಸ್ವಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಗೋವಿಂದರಾಜ್ ಕೆ.ಆರ್. ಪಟೇ, ರಾಜ್ಯ ಸಂಚಾಲಕ ಸಿದ್ದೇಶ್, ರಾಜ್ಯ ಮಹಿಳಾ ಕಾರ್ಯದರ್ಶಿ ಜ್ಯೋತಿ ಪ್ರದೀಪ್, ರಾಜ್ಯ ಕಾರ್ಯದರ್ಶಿ ರಮೇಶ್, ತೇಜು, ರಾಜ್ಯ ಮಹಿಳಾ ಕೃಷಿ ರಾಯಬಾರಿ ಭೂಮಿಕ ದೇಶಪಾಂಡೆ, ಬೆಂಗಳೂರು ಮಹಿಳಾ ನಗರ ಅಧ್ಯಕ್ಷೆ ಲತಾ, ರಾಜ್ಯ ಸಂಚಾಲಕ ಕೃಷ್ಣಮೂರ್ತಿ, ಮಂಜುಳ, ಅಶೋಕ್ ಮಾರುತಿ ಸೇರಿದಂತೆ ಇತರರು ಭಾಗವಹಿಸಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

