
CHITRADURGA NEWS | 05 OCTOBER 2025
ಚಿತ್ರದುರ್ಗ: ರಾಜ್ಯ ಸಂಶೋಧನಾ ಮತ್ತು ತರಬೇತಿ ಇಲಾಖೆ ಬೆಂಗಳೂರು ವತಿಯಿಂದ ಅಕ್ಟೋಬರ್ 4 ರಂದು DSERT ಆವರಣದಲ್ಲಿ ನಡೆಸಲಾಗಿದ್ದ ರಾಜ್ಯ ಮಟ್ಟದ ಸ್ತರೀಯ ಬಾಲ ವೈಜ್ಞಾನಿಕ ಪ್ರದರ್ಶಿನಿ ಕಾರ್ಯಕ್ರಮ ಸ್ಪರ್ಧೆಯಲ್ಲಿ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ರೇಖಲಗೆರೆ ಲಂಬಾಣಿ ಹಟ್ಟಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ಎನ್.ಪಲ್ಲವಿ ದ್ವಿತೀಯ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ: ಕಥೆಗಾರ ಮೊಗಳ್ಳಿ ನಿಧನಕ್ಕೆ ಸಾಹಿತಿ ಜಡೆಕುಂಟೆ ಸಂತಾಪ
ತ್ಯಾಜ್ಯ ನಿರ್ವಹಣೆ ಎಂಬ ವಿಷಯದಲ್ಲಿ ಪ್ಲಾಸ್ಟಿಕ್ ಕವರ್ ಗಳಿಂದ ಜೆಲ್ಲಿ ಕಲ್ಲು ತಯಾರಿಕೆ ಹಾಗೂ ಥರ್ಮೋ ಕೂಲ್ ತ್ಯಾಜ್ಯದಿಂದ ತಯಾರಿಸಲಾದ ರಾಳ ಮಾದರಿಯು ವಿನೂತನವಾಗಿದ್ದು ಪ್ರಸ್ತುತ ಸನ್ನಿವೇಶದಲ್ಲಿ ಪ್ಲಾಸ್ಟಿಕ್ ನ ತ್ಯಾಜ್ಯ, ಹಾಗೂ ಅದರ ವಿಲೇವಾರಿ ಬಹು ದೊಡ್ಡ ಸಮಸ್ಯೆಯಾಗಿದ್ದು ಅದನ್ನು ಮರುಬಳಕೆ ಮಾಡುವ ತಂತ್ರವನ್ನು ಬಾಲ ವಿಜ್ಞಾನಿಯಾದ ಪಲ್ಲವಿ ಸಾಧಿಸಿ ತೋರಿಸಿದ್ದಾಳೆ.
ಪರಿಸರಕ್ಕೆ ಮಾಲಿನ್ಯಕಾರಕ ವಾಗದಂತೆ ಅದನ್ನು ಜೆಲ್ಲಿಕಲ್ಲಾಗಿ ನಿರ್ಮಾಣ ಮಾಡಿ ಮರುಬಳಕೆ ಮಾಡುವ ವಿಧಾನವನ್ನು ಪ್ರಾಯೋಗಿಕವಾಗಿ ಸಾಬೀತು ಮಾಡಿ ತೋರಿಸಿದ ಮಾದರಿಯು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದೆ ಎಂದು ರಾಷ್ಟ್ರ ಸಂಶೋಧನೆ ಮತ್ತು ತರಬೇತಿ ಇಲಾಖೆಯ ಪ್ರಾಧ್ಯಾಪಕರಾದ ರುಚಿ ವರ್ಮ ಮಾದರಿಯನ್ನು ಶ್ಲಾಘಿಸಿದ್ದಾರೆ.
ಪ್ಲಾಸ್ಟಿಕ್ ಜೆಲ್ಲಿಕಲ್ ಅನ್ನು ಸಿಮೆಂಟ್ ಕಾಂಕ್ರಿಟ್ ತಯಾರಿಕೆಯಲ್ಲಿ ಉಪಯೋಗಿಸಿ ಕಟ್ಟಡ, ರಸ್ತೆ ನಿರ್ಮಾಣದಲ್ಲಿ ಬಳಸಬಹುದಾಗಿದೆ.
ನವಂಬರ್ ತಿಂಗಳಲ್ಲಿ ದೆಹಲಿಯಲ್ಲಿ ನಡೆಯಲಿರುವ 52ನೇ ರಾಷ್ಟ್ರಮಟ್ಟದ ಬಾಲ ವೈಜ್ಞಾನಿಕ್ ಪ್ರದರ್ಶಿನಿ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾಳೆ.
ಇದನ್ನೂ ಓದಿ: ರುಡ್‍ಸೆಟ್ ಸಂಸ್ಥೆಯಿಂದ ಟ್ಯಾಲಿ(Tally) ತರಬೇತಿ
ರಾಜ್ಯ ಪ್ರಶಸ್ತಿ ಪುರಸ್ಕೃತ ವಿಜ್ಞಾನ ಶಿಕ್ಷಕ ನಾಗಭೂಷಣ್ ಮಾರ್ಗದರ್ಶನ ಮಾಡಿದ್ದಾರೆ.
ಗ್ರಾಮೀಣ ಭಾಗದ ವಿದ್ಯಾರ್ಥಿನಿಯ ಈ ಸಾಧನೆಗೆ ಜಿಲ್ಲೆಯ ಉಪನಿರ್ದೇಶಕರಾದ ಮಂಜುನಾಥ್, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಕೆ.ಎಸ್ ಸುರೇಶ್, ಶಾಲೆಯ ಮುಖ್ಯ ಶಿಕ್ಷಕ ವೆಂಕಟೇಶ್, ಎಸ್.ಡಿ. ಎಂ.ಸಿ ಅಧ್ಯಕರಾದ ಕಾಟಯ್ಯ, ಶಾಲಾ ಸಿಬ್ಬಂದಿ ಹಾಗೂ ಊರಿನ ಗ್ರಾಮಸ್ಥರು ಅಭಿನಂದಿಸಿದ್ದಾರೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
