CHITRADURGA NEWS | 11 AUGUST 2025
ಚಿತ್ರದುರ್ಗ: ಪ್ರತಿಯೊಬ್ಬರೂ ಬುದ್ದನ ಆಶಯಗಳನ್ನು ಅನುಸರಿಸುವ ಮೂಲಕ ಶಾಂತಿ ಸಹಬಾಳ್ವೆಯಿಂದ ಬಾಳಬೇಕು. ಆ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್ ಹೇಳಿದರು.

ಇದನ್ನೂ ಓದಿ: ವಾಣಿವಿಲಾಸ ಸಾಗರ ನೀರಿನ ಮಟ್ಟ | ಕಡಿಮೆ ಆಯ್ತು ಒಳಹರಿವು
ಶ್ರೀ ಶಿವ ಶರಣ ಮಾದಾರ ಚನ್ನಯ್ಯ ಗುರುಪೀಠ, ಶ್ರೀ ಸಂತೋಷ್ ಲಾಡ್ ಫೌಂಡೇಷನ್, ಹಾಗೂ ಇಂಡೋ – ಟಿಬೆಟ್ ಫ್ರೆಂಡ್‌ಶಿಪ್ ಸೊಸೈಟಿ ಇವರ ಸಂಯುಕ್ತಾಶ್ರಯದಲ್ಲಿ ಬೌದ್ಧ ಗುರು ದಲೈಲಾಮ ಅವರ 90ನೇ ಹುಟ್ಟು ಹಬ್ಬದ ಅಂಗವಾಗಿ ಇಲ್ಲಿನ ಮುರುಘಾಮಠದಲ್ಲಿ ಹಮ್ಮಿಕೊಂಡಿದ್ದ ಬಸವೇಶ್ವರರ ನಾಡಿನಲ್ಲಿ ಬುದ್ಧ ಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬುದ್ದ, ಬಸವ ಇಬ್ಬರ ತತ್ವಗಳು ಒಂದೇ ಆಗಿವೆ. ಸಮಾಜದ ಏಳಿಗೆ, ಶಾಂತಿಗಾಗಿ ಶ್ರಮಿಸಿದರು. ಟಿಬೆಟ್ ಜನರಿಗೆ ಚೀನಾ ತೊಂದರೆ ಕೊಟ್ಟಾಗ ಭಾರತ ಆಶ್ರಯ ನೀಡಿತು. ಕಾಯಕ ತತ್ವ ಬಸವಣ್ಣ ಹೇಳಿದರು. ಅಸ್ಪಂಶ್ಯ ಜಿವಾರಣೆಗೆ ಶ್ರಮಿಸಿದರು. ಅನುಭವ ಮಂಟಪದಲ್ಲಿ ಬಸವ ಧರ್ಮ ಸ್ಥಾಪಿಸಿದರು. ಇದು ಜಾತ್ಯಾತೀತ ಧರ್ಮವಾಗಿದೆ. ಆದರೆ ಇಂದು ಬಸವ ಧರ್ಮ ಹರಿದು ಹಂಚಿ ಹೋಗಿದೆ. ಲಿಂಗಾಯತ ಜನಾಂಗ ಛಿದ್ರವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಆಹಾರ ಇಲಾಖೆ ಸಚಿವ ಕೆ.ಹೆಚ್. ಮುನಿಯಪ್ಪ ಮಾತನಾಡಿ, ಬೌದ್ಧ ಧರ್ಮ ತುಂಬಾ ಪ್ರಾಚೀನವಾದುದು. ದೊಡ್ಡಬಳ್ಳಾಪುರ ತಾಲ್ಲೂಕಿನ ದೊಡ್ಡಘಟ್ಟ ಗ್ರಾಮದಲ್ಲಿ ಬುದ್ದನ ಕುರುಹುಗಳು ದೊರೆತಿವೆ.
ಇದನ್ನೂ ಓದಿ: ಮಾದಿಗ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ | ಅರ್ಜಿ ಆಹ್ವಾನ
ಅವುಗಳನ್ನು ಪುನರುಜ್ಜೀವನ ಮಾಡುವ ಮೂಲಕ ಜಗತ್ತಿಗೆ ಬುದ್ಧನ ಸಂದೇಶ ಸಾರಲು ಸರ್ಕಾರ ತೀರ್ಮಾನಿಸಿದೆ. ಜಗತ್ತಿಗೆ ಶ್ರೇಷ್ಠ ಮಾನವತೆ ಸಾರಿದ ಧರ್ಮ. ಬಸವಣ್ಣ 12ನೇ ಶತಮಾನದಲ್ಲಿ ಕಾಯಕ ಕ್ರಾಂತಿ ನಡೆಸಿದರು. ಬಸವಣ್ಣನ ವಚನ, ಬುದ್ದನ ಅಷ್ಟಾಂಗ ಮಾರ್ಗ ಬದುಕಿನ ಸಾರ್ಥಕತೆಗೆ ಸಹಕಾರಿಯಾಗಿವೆ ಎಂದು ಹೇಳಿದರು.
ಕಾರ್ಮಿಕ ಸಚಿವ ಸಂತೋಷ್ ಲಾಡ್ ಮಾತನಾಡಿ, 50 ದೇಶಗಳಲ್ಲಿ ಬುದ್ದನ ತತ್ವ ನಡೆಯುತ್ತಿದೆ. ಭಾರತದಲ್ಲೂ ಇವರನ್ನು ಅನುಷ್ಠಾನಕ್ಕೆ ತರಬೇಕು. ಯಾವ ಧರ್ಮ ಮಾನವನ ಒಳಿತಿನ ಬಗ್ಗೆ ಚಿಂತನೆ ಮಾಡುತ್ತದೋ ಅದು ಉತ್ತಮ ಧರ್ಮ. ಆನರನ್ನು ಒಂದುಗೂಡಿಸುವ ಧರ್ಮ ಬುದ್ದ ಧರ್ಮ.
ಜೀವನದ ಧ್ಯೇಯೋದ್ದೇಶ ಕಂಡುಕೊಳ್ಳುವುದೇ ಬುದ್ದಧರ್ಮ. ಸಮಾಜ, ದೇಶ ಕಟ್ಟಲು ಬುದ್ದನ ವಿಚಾರಗಳು ಅಗತ್ಯ. ಬುದ್ದನ ಆದರ್ಶಗಳಿಂದ ಸಮಾಜದಲ್ಲಿ ಶಾಂತಿ. ಬುದ್ದ ಬಸವ ಅಂಬೇಡ್ಕರ್ ತತ್ವಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು. ಯುವ ಸಮುದಾಯಕ್ಕೆ ಬುದ್ದನ ತತ್ವಗಳನ್ನು ತಿಳಿಸಬೇಕು ಎಂದರು.
ಇದನ್ನೂ ಓದಿ: ಅಭಿವೃದ್ಧಿ ನಿಗಮಗಳಿಂದ ವಿವಿಧ ಸೌಲಭ್ಯ | ಯಾರಿಗೆ ಯಾವ ಸೌಲಭ್ಯ, ಇಲ್ಲಿದೆ ಮಾಹಿತಿ…
ರಾಜ್ಯಸಭೆ ಮಾಜಿ ಸದಸ್ಯ ಹಾಗೂ ಎಸ್.ಎನ್.ಸ್ಮಾರಕ ಟ್ರಸ್ಟ್ ಮುಖ್ಯಸ್ಥ ಹೆಚ್.ಹನುಮಂತಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ ಎರಡು ವರ್ಷಗಳ ಹಿಂದೆ ಬುದ್ದ ಸಮಾವೇಶ ಮಾಡಬೇಕೆಂದು ಉದ್ದೇಶಿಸಿದ್ದೆವು. ಆದರೆ ದಲೈಲಾಮ ಅವರ ಆರೋಗ್ಯ ಸರಿ ಇರಲಿಲ್ಲ. ಹಾಗಾಗಿ ಈಗ ಕಾರ್ಯಕ್ರಮ ಮಾಡಬೇಕೆಂದು ಆಸೆಪಟ್ಟರು. ಅದರಂತೆ ಇಂದು ಆಚರಣೆ.
ಚೀನಾ ಸೇರಿದಂತೆ ನಾನಾ ದೇಶಗಳು ಇಂದಿನ ಕಾರ್ಯಕ್ರಮ ನೋಡುತ್ತಿವೆ. ಆಶ್ರಯ ಬೇಡಿ ಬಂದವರಿಗೆ ಸ್ಙೇಹದ ಹಸ್ತ ಚಾಚಿದೆ. ಹಾಗಾಗಿ ಭಾರತ ದೇಶ ಹಾಗೂ ಕರ್ನಾಟಕ ರಾಜ್ಯಕ್ಕೆ ಧನ್ಯವಾದ ಎಂದು ದಲೈಲಾಮ ಹೇಳುತ್ತಿದ್ದಾರೆ ಎಂದು ಹೇಳಿದರು.
ಟಿಬೆಟಿಯನ್ನರ 14 ರಾಷ್ಟçಗಳ ಪ್ರತಿನಿಧಿ ಜಿಗ್ಮೆ ಜಿಗ್ನೆ, ಕಾರ್ಯಕ್ರಮದಲ್ಲಿ ಮಾದಾರ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಕಬೀರಾನಂದಾಶ್ರಮದ ಶಿವಲಿಂಗಾನಂದ ಸ್ವಾಮೀಜಿ, ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ, ಬೋವಿ ಗುರುಪೀಠದ ಇಮ್ಮಡಿ ಸಿದ್ದರಾಮ ಸ್ವಾಮೀಜಿ, ಮುರುಘಾಮಠದ ಬಸವಕುಮಾರ ಸ್ವಾಮೀಜಿ, ಹರಿಹರ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಶಾಸಕರಾದ ಟಿ.ರಘುಮೂರ್ತಿ, ಕೆ.ಸಿ.ವೀರೇಂದ್ರ ಪಪ್ಪಿ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಎಸ್.ಎನ್.ಸ್ಮಾರಕ ಟ್ರಸ್ಟ್ನ ಪ್ರೊ.ಕಿರಣ್ ಶಂಕರ್ ಮತ್ತಿತರರು ಹಾಜರಿದ್ದರು.
ಇದನ್ನೂ ಓದಿ: ಚಳ್ಳಕೆರೆ ರೈಲ್ವೆ ಸಮಸ್ಯೆ | ಅದಿರು ಸಾಗಾಟಕ್ಕೆ ಬ್ರೇಕ್ ಹಾಕಲು ಪತ್ರ | ಡಿಸಿ ಮಾಹಿತಿ
ಕರ್ನಾಟಕದ ಮುಂಡಗೋಡಿನಿಂದ ಆಗಮಿಸಿದ್ದ ಬೌದ್ಧ ಬಿಕ್ಕುಗಳು ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಮೆರಗು ನೀಡಿದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
