
CHITRADURGA NEWS | 16 JULY 2025
ಹೊಳಲ್ಕೆರೆ: ದೇಶದಲ್ಲಿ ಭಾರತೀಯ ನ್ಯಾಯ ಸಂಹಿತೆ(BNS) ಕಾಯ್ದೆ ಜಾರಿಯಾದ ಬಳಿಕ ಚಿತ್ರದುರ್ಗ ಜಿಲ್ಲೆಯಲ್ಲಿ ಆರೋಪಿಯೊಬ್ಬನಿಗೆ ಈ ಕಾಯ್ದೆ ಅಡಿ ಶಿಕ್ಷೆಯಾಗಿದೆ. ಇದು ಜಿಲ್ಲೆಯಲ್ಲಿ ಮೊದಲ ಪ್ರಕರಣವಾಗಿ ಗುರುತಿಸಿಕೊಂಡಿದೆ.
ಹೊಳಲ್ಕೆರೆ ಪಟ್ಟಣದ ಸಿದ್ದರಾಮಪ್ಪ ಬಡಾವಣೆಯ 3ನೇ ಅಡ್ಡರಸ್ತೆಯಲ್ಲಿರುವ ಸಂಜೀವಪ್ಪ ಎಂಬುವವರ ಮನೆಯಲ್ಲಿ 2024 ಸೆಪ್ಟಂಬರ್ 23 ರಂದು ಕಳ್ಳತನ ಮಾಡಿದ್ದ ಪ್ರಕರಣದಲ್ಲಿ ಹೊಳಲ್ಕೆರೆ ಸಿ.ಜೆ. ಮತ್ತು ಜೆಎಂಎಫ್ಸಿ ನ್ಯಾಯಾಲಯ ತೀರ್ಪು ನೀಡಿದೆ.

ಇದನ್ನೂ ಓದಿ:ಅಡಿಕೆ ಧಾರಣೆ | ಜುಲೈ 15 | ಯಾವ ಅಡಿಕೆ ರೇಟ್ ಎಷ್ಟು
ಸಿದ್ದರಾಮಪ್ಪ ಬಡಾವಣೆಯ ಸಂಜೀವಪ್ಪ ಅವರ ಮನೆಯಲ್ಲಿ 80 ಸಾವಿರ ನಗದು, 1.47 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಪ್ರಕರಣದಲ್ಲಿ ಪೊಲೀಸರು ಹೊಸದುರ್ಗದ ಸೈಯದ್ ಫಜಲ್ ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸಿ, ಬಂಧಿತನಿಂದ ಆಭರಣ ವಶಪಡಿಸಿಕೊಂಡಿದ್ದರು.
ಸದರಿ ಆರೋಪಿ ವಿರುದ್ಧ ಹೊಳಲ್ಕೆರೆ ಠಾಣೆ ಪಿಎಸ್‌ಐ ಸಚಿನ್ ಪಟೇಲ್ ವಿಚಾರಣೆ ಪೂರ್ಣಗೊಳಿಸಿ, ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದರು.
ಇದನ್ನೂ ಓದಿ: ಹೊಳಲ್ಕೆರೆ, ಅಮೃತಪುರ ರೈಲು ನಿಲ್ದಾಣ | ಹೊಸಪೇಟೆ-ಬೆಂಗಳೂರು ರೈಲು ನಿಲುಗಡೆ ಜನವರಿ 18ರವರೆಗೆ ಮುಂದುವರಿಕೆ
ವಿಚಾರಣೆ ನಡೆಸಿದ ನ್ಯಾಯಾಧೀಶರಾದ ರಘುರಾಮ್ ಎನ್.ಎಸ್ ಅವರು, ಆರೋಪಿ ಸೈಯದ್ ಫಜಲ್ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಎರಡೂವರೆ ವರ್ಷ ಸಾದಾ ಜೈಲು ಶಿಕ್ಷೆ ಹಾಗೂ 15 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕ ಶ್ರೀರಂಗ ಕುಲಕರ್ಣಿ ವಾದ ಮಂಡಿಸಿದ್ದರು. ಹೊಳಲ್ಕೆರೆ ಪೊಲೀಸರ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಶ್ಲಾಘಿಸಿದ್ದಾರೆ.
ಇದನ್ನೂ ಓದಿ: ಪ್ರತಿಭಾ ಪುರಸ್ಕಾರಕ್ಕೆ ಕುಂಚಿಗ ವೀರಶೈವ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ
ಕಳ್ಳತನ ಪ್ರಕರಣದಲ್ಲಿ ಆರೋಪಿ ಪತ್ತೆ ಮಾಡುವಲ್ಲಿ ಪಿಎಸ್‌ಐ ಸಚಿನ್ ಪಟೇಲ್, ಸಿಬ್ಬಂದಿಗಳಾದ ಕುಬೇಂದ್ರಪ್ಪ, ದೇವರಾಜ, ಮಂಜುನಾಥ, ನಿರಂಜನ, ಬಸವರಾಜ, ಕಿರಣ್‌ಕುಮಾರ್, ಸಿದ್ದಪ್ಪ, ಆನಂದ, ದರ್ಶನ್ ಕಾರ್ಯನಿರ್ವಹಿಸಿದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
