CHITRADURGA NEWS | 13 JUNE 2025
ಚಿತ್ರದುರ್ಗ: ಹಿರಿಯೂರು ನಗರ ಸಭೆ ವತಿಯಿಂದ 2025-26ನೇ ಸಾಲಿನ ನಗರ ಸಭೆ ನಿಧಿಯಡಿ ಶೇ.24.10, ಶೇ.7.25 ಹಾಗೂ ಶೇ.5 ರ ಯೋಜನೆಯಡಿ ಆರ್ಥಿಕ ನೆರವು ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಎಂ.ಬಿ.ಬಿ.ಎಸ್ ಬಿ.ಇ. ವ್ಯಾಸಾಂಗ ಮಾಡುತ್ತಿರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ ಲ್ಯಾಪಾಟಾಪ್ ಖರೀದಿಸಲು, ಎಲ್.ಎಲ್.ಬಿ ಪದವಿ ಹೊಂದಿರುವ ವೃತ್ತಿ ನಿರತ ವಕೀಲರುಗಳಿಗೆ ಪುಸ್ತಕ ಖರೀದಿಸಲು ಆರ್ಥಿಕ ನೆರವು ನೀಡಲಾಗುವುದು.
Also Read: ಕಾಲ್ತುಳಿತ ಪ್ರಕರಣ ಮರೆಮಾಚಲು ಜಾತಿ ಗಣತಿ ಮರುಸಮೀಕ್ಷೆಯ ಕುತಂತ್ರ | ಛಲವಾದಿ ನಾರಾಯಣಸ್ವಾಮಿ
ಇದರೊಂದಿಗೆ ಇತರೆ ಜನಾಂಗ ಹಾಗೂ ದಿವ್ಯಾಂಗರಿಗೆ ಅನಿಲ ಸಂಪರ್ಕದಡಿ ಒಂದು ಸ್ಟವ್ ಹಾಗೂ ಒಂದು ಸಿಲೆಂಡರ್, ದಿವ್ಯಾಂಗ ವಿಶೇಷ ಚೇತನರಿಗೆ ತ್ರಿಚಕ್ರ ವಾಹನ ಖರೀದಿಸಿ ನೀಡಲಾಗುವುದು. ಹಿರಿಯೂರು ನಗರ ಸಭೆ ವ್ಯಾಪ್ತಿಯ ಅರ್ಹರು ಜೂನ್ 26 ರ ಒಳಗೆ ಅರ್ಜಿ ಸಲ್ಲಿಸುವಂತೆ ಪೌರಾಯುಕ್ತ ಎ.ವಾಸಿಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
