
CHITRADURGA NEWS | 12 JUNE 2025
ಚಿತ್ರದುರ್ಗ: ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ನಿಯಮಿತದಿಂದ 2025-2026ನೇ ಸಾಲಿನ ಸಾಲ ಸೌಲಭ್ಯಕ್ಕೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ವೀರಶೈವ ಲಿಂಗಾಯತ ಸಮುದಾಯ ಮತ್ತು ಅದರ ಉಪ ಜಾತಿಗಳಿಗೆ ಸೇರಿದ ರಾಜ್ಯದ ನಿವಾಸಿಗಳು ಶೈಕ್ಷಣಿಕ ಸಾಲ ಯೋಜನೆ ಬಸವ ಬೆಳಗು, ಜೀವಜಲ ಯೋಜನೆ(ಗಂಗಾ ಕಲ್ಯಾಣ), ಕಾಯಕ ಕಿರಣ ಯೋಜನೆ, ಭೋಜನಾಲಯ ಕೇಂದ್ರ, ವಿಭೂತಿ ನಿರ್ಮಾಣ ಘಟಕ, ವಾಣಿಜ್ಯ ಬ್ಯಾಂಕುಗಳು ಸಹಯೋಗದೊಂದಿಗೆ ಸ್ವಾವಲಂಭಿ ಸಾರಥಿ ಹಾಗೂ ಸ್ವಯಂ ಉದ್ಯೋಗ ಸಾಲ ಸ್ವಾತಂತ್ರ್ಯ ಅಮೃತ ಮಹೋತ್ಸವದ ಮುನ್ನಡೆ ಯೋಜನೆಗಳಿಗೆ ಅರ್ಜಿ ಸಲ್ಲಿಸಬಹುದು.

Also Read: ಹಿರಿಯೂರು ನಗರಸಭೆಯಿಂದ ಆರ್ಥಿಕ ನೆರವು | ಅರ್ಜಿ ಆಹ್ವಾನ
ಚಾಲ್ತಿಯಲ್ಲಿರುವ ಆದಾಯ ಮತ್ತು ಜಾತಿ ಪ್ರಮಾಣ ಪತ್ರ ಕಡ್ಡಯವಾಗಿರುತ್ತದೆ, ವಯೋಮಿತಿ 18 ವರ್ಷಗಳಿಂದ 55 ವರ್ಷಗಳ ಮಿತಿಯಲ್ಲಿರಬೇಕು, ನಿಗಮದ ಅಥವಾ ಸರ್ಕಾರದ ಯವುದಾದರು ಯೋಜನೆಗಳಡಿ ಈ ಹಿಂದೆ ಸೌಲಭ್ಯ ಪಡೆದಿರಬಾರದು, ಕುಟುಂಬದ ಒಬ್ಬರಿಗೆ ಮಾತ್ರ ಸೌಲಭ್ಯ ಒದಗಿಸಲಾಗುವುದು. ಬಸವ ಬೆಳಗು ಯೋಜನೆಗೆ ವಿದ್ಯಾರ್ಥಿಗಳು ಸಿ.ಇ.ಟಿ/ನೀಟ್ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸರ್ಕಾರಿ ಕೋಟಾದ ಸೀಟು ಪಡೆದಿರಬೇಕು.
ಜೀವಜಲ ಯೋಜನೆಗೆ ಕನಿಷ್ಠ 2ಎಕರೆ ಹಾಗೂ 5 ಎಕರೆ ಒಳಗೆ ಜಮಿನು ಹೊಂದಿರಬೇಕು. ಕಾಯಕ ಕಿರಣ ಯೋಜನೆಗೆ ಶೇ.4ರ ಬಡ್ಡಿದರದಲ್ಲಿ ಸಾಲ ಮಂಜೂರು ಮಾಡಲಾಗುವುದು, ಭೋಜನಾಲಯ ಕೇಂದ್ರಕ್ಕೆ ತಮ್ಮ ಸ್ವಂತ ಹೆಸರಿನಲ್ಲಿ ಕನಿಷ್ಠ 20*30 ಅಡಿ ಅಳತೆಯುಳ್ಳನಿವೇಶನ ಹೊಂದಿರಬೇಕು, ವಿಭೂತಿ ಘಟಕಕ್ಕೆ 40 ಸಾವಿರ ಸಹಾಯಧನ ದೊರೆಯುವುದು.
ಸಾರಥಿ ಯೋಜನೆಗೆ 21 ರಿಂದ 45 ವರ್ಷಗಳ ಒಳಗಿರುವ ಅಭ್ಯಥಿಗಳು ಅರ್ಜಿ ಸಲ್ಲಿಸಬಹುದು, ಸ್ವಾತಂತ್ರ್ಯ ಅಮೃತ ಯೋಜನೆಗೆ ಅಭ್ಯರ್ಥಿಗಳು 18 ರಿಂದ 25 ವರ್ಷಗಳ ಒಳಗಿದ್ದು, ಕುಟುಂಬದ ವಾರ್ಷಿಕ ವರಮಾನ 08 ಲಕ್ಷಗಳಿಗಿಂತ ಕಡಿಮೆ ಇರಬೇಕು.
Also Read: ಸರ್ಕಾರಿ ಶಾಲೆ | D-GROUP ನೌಕರರ ನೇಮಕಕ್ಕೆ ಮನವಿ
ಈ ಯೋಜನೆಗೆ ಪೋರ್ಟ್ಲ್ https://www.kaushalkar.com ಮೂಲಕ ಅರ್ಜಿ ಸಲ್ಲಿಸಬೇಕು. ಉಳಿದ ಯೋಜನೆಗಳಿಗೆ ಸಾಲ-ಸೌಲಭ್ಯ ಧನಸಹಾಯ ಇಚ್ಚಿಸುವವರು ಸೇವಾ ಸಿಂಧು ಗ್ರಾಮಒನ್, ಬೆಂಗಳೂರು ಒನ್, ಕರ್ನಾಟಕ ಒನ್, ಸೇವಾ ಕೇಂದ್ರಗಳಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಒಂದು ಬಾರಿ ಯಾವುದಾದರು ಯೋಜನೆಗಳಲ್ಲಿ ಪ್ರಯೋಜನೆ ಪಡೆದಿದ್ದಲ್ಲಿ ಅಂತವರು ಹಾಗೂ ಅವರ ಕುಟುಂಬದವರು ಮತ್ತೊಮ್ಮೆ ಸೌಲಭ್ಯಕ್ಕೆ ಕೋರಿ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ.
2023-24 ಹಾಗೂ 2024-25ನೇ ಸಾಲಿಗೆ ಅರ್ಜಿ ಸಲ್ಲಿಸಿ ಸೌಲಭ್ಯ ಪಡೆಯದ ಫಲಾಪೇಕ್ಷಿತರು ಪುನಃ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ. ಜುಲೈ 30 ಅರ್ಜಿ ಸಲ್ಲಿಸಲು ಕಡೆಯ ದಿನವಾಗಿದೆ.
Also Read: ಕಾಲ್ತುಳಿತ ಪ್ರಕರಣ ಮರೆಮಾಚಲು ಜಾತಿ ಗಣತಿ ಮರುಸಮೀಕ್ಷೆಯ ಕುತಂತ್ರ | ಛಲವಾದಿ ನಾರಾಯಣಸ್ವಾಮಿ
ಹೆಚ್ಚಿನ ಯೋಜನೆಗಳ ಮಾರ್ಗಸೂಚಿ, ಅಗತ್ಯ ಇರುವ ಶೈಕ್ಷಣಿಕ ಅರ್ಹತೆ, ವಯೋಮಾನ, ಕುಟುಂಬ ಆದಾಯ ಮಿತಿ ಸೇರಿದಂತೆ ಇತರೆ ಮಾಹಿತಿಗಾಗಿ ನಿಗಮದ ವೆಬ್ ಸೈಟ್ https://kvldcl.karnataka.gov.
ನಿಗಮದ ದೂರವಾಣಿ ಸಂಖ್ಯೆ 080-220882 ಕರೆ ಮಾಡಬಹುದು ಎಂದು ಜಿಲ್ಲಾ ವ್ಯವಸ್ಥಾಪಕಿ ಹೆಚ್.ಶಿಲ್ಪಾ ತಿಳಿಸಿದ್ದಾರೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
