
CHITRADURGA NEWS | 02 AUGUST 2025
ಚಳ್ಳಕೆರೆ: ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಯೋನಿವೃತ್ತಿ, ಮುಂಬಡ್ತಿ ಹೊಂದಿದವರಿಗೆ ಬೀಳ್ಕೊಡುಗೆ ಹಾಗೂ ಕಾಲೇಜಿಗೆ ವರ್ಗಾವಣೆಯಾಗಿ ಬಂದಿರುವ ಪ್ರಾಂಶುಪಾಲರು ಮತ್ತು ಉಪನ್ಯಾಸಕರಿಗೆ ಸ್ವಾಗತ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ |ಶನಿವಾರದ ಹತ್ತಿ ರೇಟ್ ಎಷ್ಟಿದೆ?
ಕಾಲೇಜಿನಲ್ಲಿ ಸುಮಾರು 22 ವರ್ಷಗಳ ಕಾಲ ಭೌತಶಾಸ್ತ್ರ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ಜಿ.ಟಿ ಪುಷ್ಪಲತಾ ವೀರೇಶ್ ರವರನ್ನು ಕಾಲೇಜ್ ವತಿಯಿಂದ ಸನ್ಮಾನಿಸಿ ” ರಾಜಮಾತೆ ” ಎಂಬ ಬಿರುದು ನೀಡಲಾಯಿತು.
ಈ ವೇಳೆ ಉಪನ್ಯಾಸಕಿ ಜಿ.ಟಿ ಪುಷ್ಪಲತಾ ಮಾತನಾಡಿ, ನನ್ನ ಉಪನ್ಯಾಸಕ ವೃತ್ತಿ ನನಗೆ ತೃಪ್ತಿ ತಂದಿದೆ. ಈ ಕಾಲೇಜು ನನಗೆ ಎಲ್ಲಾ ರೀತಿಯ ಗೌರವವನ್ನು ದೊರಕಿಸಿಕೊಟ್ಟಿದೆ. ನನ್ನ ಸೇವಾ ಅವಧಿಯಲ್ಲಿ ಪ್ರಾಮಾಣಿಕ ಕರ್ತವ್ಯ ನಿರ್ವಹಿಸಿ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಮತ್ತು ಫಲಿತಾಂಶ ಹೆಚ್ಚಿಸುವುದಕ್ಕೆ ಶ್ರಮಿಸಿದ್ದೇನೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪ ನಿರ್ದೇಶಕ ಕೆ.ತಿಮ್ಮಯ್ಯ ಮಾತನಾಡಿ, ವೃತ್ತಿ ಜೀವನದಲ್ಲಿ ಸಾಕಷ್ಟು ಸವಾಲುಗಳಿವೆ ಆ ಸವಾಲುಗಳನ್ನು ಹೆದರಿಸಿದಾಗ ಮಾತ್ರ ನಾವು ಉತ್ತಮ ವ್ಯಕ್ತಿಯಾಗಿ ಹೊರಹೊಮ್ಮುತ್ತೇವೆ ಅದರಲ್ಲಿ ಪುಷ್ಪಲತಾ ಸಹ ಒಬ್ಬರು ಎಂದರು.
ಇದನ್ನೂ ಓದಿ: ಕೀಲು ನೋವಿನಿಂದ ಬಳಲುತ್ತಿರುವವರು ನಿಮ್ಮ ಆಹಾರದಲ್ಲಿ ಈ ಬದಲಾವಣೆಗಳನ್ನು ಮಾಡಿಕೊಳ್ಳಿ
ನನ್ನ ಅದೃಷ್ಟ ಆರಂಭ ಮತ್ತು ಮುಕ್ತಾಯದ ಕಾಲೇಜು ಅಂದರೆ ಅದು ಚಳ್ಳಕೆರೆ ಕಾಲೇಜು, ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಹತ್ತಿರವಾದಾಗ ಮಾತ್ರ ಫಲಿತಾಂಶ ಹೆಚ್ಚಾಗುತ್ತದೆ. ನಾನು ಈ ವರ್ಷ ಫಲಿತಾಂಶ ಹೆಚ್ಚಿಸುವುದಕ್ಕಾಗಿ ಹಲವು ಕಠಿಣ ಕ್ರಮಗಳನ್ನು ಕೈಗೊಂಡಿದ್ದೇನೆ. ಇಲಾಖೆ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತಿದ್ದೇನೆ ಹಾಗಾಗಿ ಪ್ರಾಂಶುಪಾಲರು ಮತ್ತು ಉಪನ್ಯಾಸಕರು ಸಹಕರಿಸಬೇಕೆಂದು ತಿಳಿಸಿದರು.
ಪ್ರಾಚಾರ್ಯ ಗೋವಿಂದಪ್ಪ, ಜಿಲ್ಲಾ ಉಪನ್ಯಾಸಕರ ಸಂಘದ ಮಾಜಿ ಅಧ್ಯಕ್ಷ ಎಸ್.ಲಕ್ಷ್ಮಣ, ಪ್ರಾಚಾರ್ಯರಾಗಿ ಅಧಿಕಾರ ವಹಿಸಿಕೊಂಡಿರುವ ಕೆ.ಎಚ್.ರಾಜು, ಪ್ರಾಚಾರ್ಯರಾಗಿ ಪದೋನ್ನತಿ ಹೊಂದಿದ ಕೆ.ಎನ್. ವಸಂತ್ ಕುಮಾರ್ ಮತ್ತು ಟಿ.ಲಲಿತಮ್ಮ ಮಾತನಾಡಿದರು.
ಈ ಸಂದರ್ಭದಲ್ಲಿ ಉಪ ನಿರ್ದೇಶಕರಾಗಿ ಮುಂಬಡ್ತಿ ಹೊಂದಿದ ಕೆ.ತಿಮ್ಮಯ್ಯ, ಪ್ರಾಚಾರ್ಯರುಗಳಾಗಿ ಮುಂಬಡ್ತಿ ಹೊಂದಿದ ಕೆ.ಎನ್.ವಸಂತ್ ಕುಮಾರ್, ಟಿ.ಲಲಿತಮ್ಮ ಅವರನ್ನು ಕಾಲೇಜು ವತಿಯಿಂದ ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಕಾಲೇಜಿಗೆ ವರ್ಗಾವಣೆಯಾಗಿ ಬಂದಿರುವ ಪ್ರಾಂಶುಪಾಲ ಕೆ.ಹೆಚ್. ರಾಜು, ಉಪನ್ಯಾಸಕರುಗಳಾದ ಆಶಾ ರಾಣಿ, ಹನುಮಂತಪ್ಪ ಸಹೀದ ಬೇಗಂ ರವರುಗಳನ್ನು ಸ್ವಾಗತಿಸಲಾಯಿತು.
ಇದನ್ನೂ ಓದಿ: ಹೊಳಲ್ಕೆರೆ | ವಸತಿ, ನಿವೇಶ ರಹಿತ ಫಲಾನುಭವಿಗಳ ಆಯ್ಕೆಗೆ ಆಗಸ್ಟ್ 11 ರಿಂದ 22 ರವರೆಗೆ ಗ್ರಾಮಸಭೆ
ಪ್ರಾಚಾರ್ಯ ಭೀಮರೆಡ್ಡಿ, ಸರ್ಕಾರಿ ನೌಕರರ ಸಂಘದ ತಾಲೂಕು ಉಪಾಧ್ಯಕ್ಷ ಎಂ.ಶ್ರೀನಿವಾಸ್, ಕಾಲೇಜಿನ ಸಾಂಸ್ಕೃತಿಕ ಚಟುವಟಿಕೆಗಳ ಕಾರ್ಯದರ್ಶಿ ಸಾಹಿತಿ ನಾಗರಾಜ್ ಬೆಳಗಟ್ಟ, ಯುವ ಸಂಸತ್ ಅಧ್ಯಕ್ಷ ಎಚ್.ಆರ್ ಜಬಿವುಲ್ಲ, ಎನ್ಎಸ್ಎಸ್ ಅಧಿಕಾರಿ ಶಾಂತಕುಮಾರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
