Chitradurga news | 11 may 2025
ಚಿತ್ರದುರ್ಗ: ಇಂಜಿನಿಯರಿಂಗ್ ವಿದ್ಯಾರ್ಥಿಗಳ ನಾಲ್ಕು ವರ್ಷದ ಶ್ರಮ ನಿಮ್ಮ ಮುಂದಿನ 40 ವರ್ಷದ ಬದುಕಿಗೆ ದಾರಿಯಾಗುತ್ತದೆ. ಈಗಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ 4 ವರ್ಷದ ಶ್ರಮ ಸಾಕಾಗುವುದಿಲ್ಲ ಎಂದು ಸಿಐಟಿ ಇಂಜಿನಿಯರಿಂಗ್ ಕಾಲೇಜು ನಿರ್ದೇಶಕ ಡಾ.ಸುರೇಶ್ ಡಿ.ಎಸ್ ಹೇಳಿದರು.
Also Read: ಭಾರತ-ಪಾಕ್ ಸಮರ | ವಿವಿ ಸಾಗರ ಜಲಾಶಯ ಪ್ರವಾಸಕ್ಕೆ ಪ್ರವೇಶ ನಿಷೇಧ | ಡ್ಯಾಂ ಭದ್ರತೆಗೆ ಯೋಜನೆ

ನಗರದ ಎಸ್‌ಜೆಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಸ್ಫೂರ್ತಿ-2025 ಕ್ರೀಡಾ ಮತ್ತು ಸಾಂಸ್ಕೃತಿಕ ಉತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಬದಲಾಗುತ್ತಿರುವ ತಂತ್ರಜ್ಞಾನದ ಜೊತೆ ನಾವು ಸಾಗಬೇಕು, ಕೃತಕ ಬುದ್ಧಿಮತ್ತೆ ಮಾನವ ಸಂಪನ್ಮೂಲವನ್ನು ಕಡಿಮೆ ಮಾಡಿ ತಂತ್ರಜ್ಞಾನವನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತಿದೆ. ನಮ್ಮ ನಿಲುವು ನಮ್ಮ ಬದುಕನ್ನು ನಿರ್ಧರಿಸುತ್ತದೆ. ನಾವು ವಿಶ್ವಮಟ್ಟದ ವಿಶ್ವವಿದ್ಯಾಲಯ ನಿರ್ಮಾಣ ಮಾಡುವ ಮೊದಲು ವಿಶ್ವಮಟ್ಟದ ತರಗತಿಗಳನ್ನು ರೂಪಿಸಬೇಕು ಎಂದು ಹೇಳಿದರು.
ನೀವು ನಿಮ್ಮ ಸ್ವಸ್ಥಳದಲ್ಲಿ ಮೊದಲು ಸಾಧನೆ ಮಾಡಬೇಕು. ಇದು ನಿಮಗೆ ಬೇರೆಡೆ ಸಾಧನೆ ಮಾಡಲು ಪ್ರೇರಣೆಯಾಗುತ್ತದೆ. ಯಾವುದೇ ಕೆಲಸವಿರಲಿ ನಿಮ್ಮನ್ನು ನೀವು ಪರಿಪೂರ್ಣವಾಗಿ ತೊಡಗಿಸಿಕೊಳ್ಳಬೇಕು. ಆಗ ಕೆಲಸದಲ್ಲಿ ಫಲ ಕಾಣಲು ಸಾಧ್ಯ ಎಂದರು.
Also Read: ಹಸಿ ಆಲೂಗಡ್ಡೆಯಿಂದ ಮುಖಕ್ಕೆ ಮಸಾಜ್ ಮಾಡುವುದರಿಂದಾಗುವ ಪ್ರಯೋಜನಗಳು
ನಮ್ಮ ಜೀವನ ಚಿಕ್ಕದು. ನೀವು ಸಮಾಜಮುಖಿಯಾಗಿ ಆಧ್ಯಾತ್ಮಿಕ ಮನಸ್ಥಿತಿಯೊಂದಿಗೆ ಭಾವನೆಗಳನ್ನು ಹಿಡಿತದಲ್ಲಿರಿಸಿಕೊಂಡು, ಸಂತೋಷದಿಂದ ಬದುಕನ್ನು ಅನುಭವಿಸುತ್ತ ಸಾಗಬೇಕು. ಆಗ ಜೀವನದಲ್ಲಿ ನೆಮ್ಮದಿ ಸಾಧ್ಯ. ಸಮಾಜಕ್ಕೆ, ನಿಮ್ಮ ಪೋಷಕರು ಹಾಗೂ ಹಿರಿಯರಿಗೆ ಗೌರವ ನೀಡಿ. ವಿದ್ಯಾರ್ಥಿಗಳು ಐಟಿ ಕ್ಷೇತ್ರದ ಬಗ್ಗೆ ಅಷ್ಟೇ ಯೋಚಿಸದೇ ಭಿನ್ನವಾಗಿ ಯೋಚಿಸಿ ಸ್ವ-ಉದ್ಯಮಿಗಳಾಗಲು ಕೂಡ ಆಸಕ್ತಿ ವಹಿಸಿಬೇಕು ಎಂದು ಸಲಹೆ ನೀಡಿದರು.
ಗುಬ್ಬಿ ಸಿಐಟಿ ಇಂಜಿನಿಯರಿಂಗ್ ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ.ಶಾಂತಲಾ ಸಿ.ಪಿ ಮಾತನಾಡಿ, ಮುರುಘಾ ಮಠದಲ್ಲಿನ ಸಾತ್ವಿಕ ವಾತಾವರಣ ನಮ್ಮಲ್ಲಿನ ಆಧ್ಯಾತ್ಮಿಕ ಚಿಂತನೆಗಳಿಗೆ ಚೈತನ್ಯ ನೀಡುತ್ತದೆ. ವಚನಗಳು ನಮ್ಮ ವ್ಯಕ್ತಿತ್ವ ವಿಕಸನಕ್ಕೆ ದಾರಿಯಾಗುತ್ತವೆ. ನೀವು ಮುಂದಿನ ಪೀಳಿಗೆಯ ಸಂಶೋಧಕರಾಗಿದ್ದೀರಿ.
ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು ಭೌತಿಕವಾಗಿ, ಮಾನಸಿಕವಾಗಿ ನಿಮ್ಮ ದೇಹವನ್ನು ಆರೋಗ್ಯವಾಗಿರಲು ಸಹಕಾರಿಯಾಗುತ್ತವೆ. ಆದ್ದರಿಂದ ಪಠ್ಯಕ್ರಮಕ್ಕಷ್ಟೇ ಸೀಮಿತರಾಗದೇ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಇವು ನಿಮ್ಮ ಆತ್ಮಸ್ಥೈರ್ಯ ಹೆಚ್ಚಿಸುತ್ತದೆ ಎಂದು ತಿಳಿಸಿದರು.
Also Read: ಲವಂಗ ಮತ್ತು ಜೇನುತುಪ್ಪವನ್ನು ಒಟ್ಟಿಗೆ ಸೇವಿಸಿ ಈ ಪ್ರಯೋಜನ ಪಡೆಯಿರಿ
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಭರತ್ ಪಿ.ಬಿ ಮಾತನಾಡಿ, ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಮಧ್ಯ ಕರ್ನಾಟಕದ ಬಡ ಮಕ್ಕಳಿಗೆ ಕಡಿಮೆ ವೆಚ್ಚದಲ್ಲಿ ಇಂಜಿನಿಯರಿಂಗ್ ಶಿಕ್ಷಣ ನೀಡುವ ಸದುದ್ದೇಶದಿಂದ 1980-81ರ ಅಕ್ಟೋಬರ್ 18ರಂದು ಎಸ್.ಜೆ.ಎಂ. ತಾಂತ್ರಿಕ ಮಹಾವಿದ್ಯಾಲಯ ಸ್ಥಾಪನೆ ಮಾಡಿ ಇಲ್ಲಿಯವರೆಗೆ ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು ಕಾರಣೀಭೂತರಾಗಿದ್ದಾರೆ ಎಂದು ಸ್ಮರಿಸಿದರು.
ಜಗತ್ತಿನಾದ್ಯಂತ ವಿವಿಧ ಕ್ಷೇತ್ರಗಳಲ್ಲಿ ನಮ್ಮ ಹಿರಿಯ ವಿದ್ಯಾರ್ಥಿಗಳು ಉನ್ನತ ಹುದ್ದೆಗಳಲ್ಲಿದ್ದಾರೆ. ಸ್ಫೂರ್ತಿಯಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣ ಬೆಳೆಸುತ್ತದೆ. ಕೇವಲ ತರಗತಿಯಿಂದಷ್ಟೇ ಕಲಿತರೆ ಜೀವನ ಅಲ್ಲ.
ಜೀವನದ ಹೋರಾಟ ನಮ್ಮನ್ನು ಗಟ್ಟಿಗೊಳಿಸುತ್ತದೆ. ಬದುಕಿನ ಕಾಲಘಟ್ಟದಲ್ಲಿ ಕೆಲ ಕಹಿ ಅನುಭವಗಳು ಸಹಜ. ಆದರೆ ಇವೆಲ್ಲವನ್ನು ಮೆಟ್ಟಿ ನಿಂತು ನಮಗೆ ನಾವೇ ಸ್ಪರ್ಧೆ ಮಾಡಿಕೊಂಡು ಸಾಧನೆ ಮಾಡಬೇಕು. ನಿನ್ನೆಯ ಸಾಧನೆಯನ್ನು ಇನ್ನು ಹೆಚ್ಚಿನ ಶ್ರಮ ವಹಿಸಿ ನಾಳೆಗೆ ಉತ್ತಮಪಡಿಸಿಕೊಳ್ಳಬೇಕು ಎಂದರು.
Also Read: ಆಸ್ತಿ ತೆರಿಗೆ | ಶೇ.5ರ ರಿಯಾಯಿತಿ ಅವಧಿ ಜೂನ್ 30 ರವರೆಗೆ ವಿಸ್ತರಣೆ
ಸ್ಫೂರ್ತಿ-2025ರ ಸಂಚಾಲಕ ಡಾ.ಶಿವಕುಮಾರ್ ಎಸ್.ಪಿ, ಇಲಾಖಾ ಮುಖ್ಯಸ್ಥರಾದ ಡಾ.ಸಿದ್ದೇಶ್ ಕೆ.ಬಿ, ಡಾ.ಕುಮಾರಸ್ವಾಮಿ ಬಿ.ಜಿ, ಡಾ.ಕೃಷ್ಣಾರೆಡ್ಡಿ ಕೆ.ಆರ್, ಡಾ.ಶ್ರೀಶೈಲ ಜೆ.ಎಂ, ಡಾ.ಲೋಕೇಶ್ ಹೆಚ್.ಜೆ, ಡಾ.ನಿರಂಜನ್ ಈ, ಪ್ರೊ. ಶಶಿಧರ್ ಎ ಪಿ, ಡಾ.ಕುಮಾರಸ್ವಾಮಿ ಕೆ, ಪ್ರೊ.ಸುಷ್ಮ್ಮಿತಾ ದೇಬ್, ಬೋಧಕ – ಬೋಧಕೇತರ ಸಿಬ್ಬಂದಿ ಹಾಗು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿವಿಧ ಕ್ರೀಡೆಗಳ ವಿಜೇತರಿಗೆ ಗಣ್ಯರು ಪ್ರಶಸ್ತಿ ಪ್ರಧಾನ ಮಾಡಿದರು. ನಂತರ ವಿ-ಫೋರ್ ಮ್ಯುಸಿಕ್ ಬ್ಯಾಂಡ್ ತಂಡದವರು ಸಂಗೀತ ಸಂಜೆ ಕಾರ್ಯಕ್ರಮ ನಡೆಸಿಕೊಟ್ಟರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number
