CHITRADURGA NEWS | 17 MAY 2026
ಚಿತ್ರದುರ್ಗ: ನಗರದ ರಂಗಯ್ಯನ ಬಾಗಿಲು ಬಳಿಯಿರುವ ಜಿಲ್ಲಾ ಯಾದವ(ಗೊಲ್ಲರ) ಸಂಘದ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಇಂದು (ಭಾನುವಾರ) ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆವರೆಗೆ ಚುನಾವಣೆ ನಡೆಯಲಿದೆ.
ಇದನ್ನೂ ಓದಿ: ಅಡಿಕೆ ಧಾರಣೆ | 16 ಮೇ | ರಾಜ್ಯದ ಅಡಿಕೆ ಮಾರುಕಟ್ಟೆಗಳ ನೋಟ
ನಗರದ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಚುನಾವಣೆ ನಡೆಯಲಿದೆ. ಯಾದವ ಸಂಘದ ಎರಡು ಬಣಗಳ ನಡುವೆ ನಡೆದ ಆರೋಪ-ಪ್ರತ್ಯಾರೋಪಗಳ ಕಾರಣಕ್ಕೆ ಈ ಚುನಾವಣೆ ಮಹತ್ವ ಪಡೆದುಕೊಂಡಿದೆ.
ಪ್ರತಿಷ್ಠಿತರ ಎರಡು ಗುಂಪುಗಳ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿದ್ದು, ಜಿಲ್ಲೆಯಾದ್ಯಂತ ಸಮಾಜಬಾಂಧವರನ್ನು ಭೇಟಿಯಾಗಿ ಭರ್ಜರಿ ಮತಯಾಚನೆ ಮಾಡಲಾಗಿದೆ.
ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು:
ಬಿ.ಅಶೋಕ್ಕುಮಾರ್, ಆಕರ್ಶ್ಯಾದವ್ ಬಿ.ಈ. ಎ.ಚಿತ್ತಪ್ಪ, ಸಿ.ಚಿತ್ತಯ್ಯ ರೇಷ್ಮೆ, ಕೆ.ಚಂದ್ರಶೇಖರಪ್ಪ, ಜಗದೀಶ್ ಆರ್. ಟಿ.ನಾಗಪ್ಪ ಮದ್ದನಕುಂಟೆ, ಪರಮೇಶ್ ಗೊಲ್ಲಹಳ್ಳಿ, ಎಸ್.ಪ್ರಕಾಶ್ ಮುಂಗುಸುವಳ್ಳಿ, ಜಿ.ಆರ್.ಪ್ರಕಾಶ್, ಬಿ.ಡಿ.ಬಸವರಾಜ, ಕೆ.ಜೆ.ರಾಜು, ರೇವಣಸಿದ್ದಪ್ಪ, ಡಿ.ಆರ್.ಲಿಂಗರಾಜು, ಪಿ.ಆರ್.ವೀರೇಶ್ ಈರಜ್ಜನಹಟ್ಟಿ, ಎಂ.ಶಿವಣ್ಣ ಶ್ರವಣಗೆರೆ, ಈರಣ್ಣ, ಕಿರಣ್ಕುಮಾರ್ ಯಾದವ್ ಎನ್, ಟಿ.ಚಂದ್ರಣ್ಣ, ಎಂ.ಜಯಪ್ರಕಾಶ್ ಯಾದವ್, ಸಿ.ತಮ್ಮಣ್ಣ, ಎಸ್.ಟಿ.ಫಲ್ಗುಣೇಶ್ವರ, ಸಿ.ಮಹಾಲಿಂಗಪ್ಪ, ಮಂಜಣ್ಣ ಸಿ., ಕೆ.ರವಿ, ಬೂದಿಹಳ್ಳಿ ರಾಜಣ್ಣ, ರಾಜಶೇಖರಪ್ಪ, ರಾಮಲಿಂಗಪ್ಪ ಯಾದವ್ ಬಿ.ಆರ್. ವಿ.ವೀರಣ್ಣ, ಕೆ.ಶಾಂತಣ್ಣ, ಮೀನಾಕ್ಷಿ ನಂದೀಶ್ ಸೇರಿದಂತೆ ಒಟ್ಟು 32 ಮಂದಿ ಕಣದಲ್ಲಿದ್ದಾರೆ.
ಇದನ್ನೂ ಓದಿ: HPV ಲಸಿಕೆ ಅಭಿಯಾನ ಯಶಸ್ಸಿಗೊಳಿಸಲು ಶಿಕ್ಷಕರು ಮತ್ತು ಪೋಷಕರು ಕೈಜೋಡಿಸಿ
ಚುನಾವಣಾಧಿಕಾರಿಯಾಗಿ ಉಪವಿಭಾಗಾಧಿಕಾರಿ ಡಾ.ಕೆ.ಜೆ.ಕಾಂತರಾಜ್ ಕಾರ್ಯನಿರ್ವಹಿಸಲಿದ್ದಾರೆ.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
