Connect with us

    ಕೃಷಿ ಪತ್ತಿನ ಸಂಘದ ಅಧ್ಯಕ್ಷರಾಗಿ ಜಿ.ಎಂ.ತಿಪ್ಪೇಸ್ವಾಮಿ (ಎತ್ತಿನಹಟ್ಟಿಗೌಡ್ರು) ಆಯ್ಕೆ

    ಚಳ್ಳಕೆರೆ

    ಕೃಷಿ ಪತ್ತಿನ ಸಂಘದ ಅಧ್ಯಕ್ಷರಾಗಿ ಜಿ.ಎಂ.ತಿಪ್ಪೇಸ್ವಾಮಿ (ಎತ್ತಿನಹಟ್ಟಿಗೌಡ್ರು) ಆಯ್ಕೆ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 18 JANUARY 2024
    ಚಿತ್ರದುರ್ಗ (CHITRADURGA): ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ ಸಮೀಪದ ನೆಲಗೇತನಹಟ್ಟಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಗೊಲ್ಲಹಳ್ಳಿ ಗ್ರಾಮದ ಪಟೇಲ್‌ ಜಿ.ಎಂ.ತಿಪ್ಪೇಸ್ವಾಮಿ (ಎತ್ತಿನಹಟ್ಟಿಗೌಡ್ರು) ಆಯ್ಕೆಯಾಗಿದ್ದಾರೆ.

    ಇದನ್ನೂ ಓದಿ: ಹರಿವಾಯುಸ್ತುತಿ ಪಾರಾಯಣದ ಹರಿದಾಸ ಹಬ್ಬಕ್ಕೆ 23ನೇ ಸಂಭ್ರಮ | ಅಯೋಧ್ಯಾರಾಮನ ಭವ್ಯ ಶೋಭಾಯಾತ್ರೆ

    ನೆಲಗೇತನಹಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಸಂಘದ ಕಾರ್ಯನಿರ್ವಾಹಕ ಮಂಡಳಿಗೆ ಚುನಾವಣೆ ನಡೆಯಿತು. 12 ಸದಸ್ಯರಿರುವ ಸಂಘಕ್ಕೆ ಬುಧವಾರ ಬೆಳಿಗ್ಗೆ 10ಗಂಟೆಗೆ ಚುನಾವಣೆ ಪ್ರಕ್ರಿಯೆ ಆರಂಭವಾಯಿತು. ಅಧ್ಯಕ್ಷ ಸ್ಥಾನಕ್ಕೆ ಪಟೇಲ್ ಜಿ.ಎಂ.ತಿಪ್ಪೇಸ್ವಾಮಿ ಮತ್ತು ಈಶ್ವರಪ್ಪ, ಉಪಾಧ್ಯಕ್ಷ ಸ್ಥಾನಕ್ಕೆ ಎತ್ತಿನಓಬಯ್ಯ ಮತ್ತು ಲೋಕೇಶಪ್ಪ ನಾಮಪತ್ರ ಸಲ್ಲಿಸಿದರು.

    ಇದನ್ನೂ ಓದಿ: ತೇರುಮಲ್ಲೇಶ್ವರಸ್ವಾಮಿ ಜಾತ್ರಾ ಮಹೋತ್ಸವ | ಬ್ರಹ್ಮ ರಥೋತ್ಸವಕ್ಕೆ ಸಿದ್ಧತೆ

    ನಂತರ ನಡೆದ ಮತದಾನ ಪ್ರಕ್ರಿಯೆಯಲ್ಲಿ ಪಟೇಲ್‌ ಜಿ.ಎಂ.ತಿಪ್ಪೇಸ್ವಾಮಿ ಮತ್ತು ಎತ್ತಿನ ಓಬಯ್ಯ ತಲಾ 9 ಮತಗಳನ್ನು ಪಡೆದು ಜಯಗಳಿಸಿದರು. ಅಧ್ಯಕ್ಷರಾಗಿ ಪಟೇಲ್‌ ಜಿ.ಎಂ.ತಿಪ್ಪೇಸ್ವಾಮಿ, ಉಪಾಧ್ಯಕ್ಷರಾಗಿ ಎತ್ತಿನ ಓಬಯ್ಯ ಆಯ್ಕೆಯನ್ನು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ತಾಲ್ಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ ಬಷೀರ್‌ಖಾನ್ ಘೋಷಿಸಿದರು.

    ಇದನ್ನೂ ಓದಿ: ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ

    ಸದಸ್ಯರಾದ ಜಿ.ಸಿ.ಬೋರಯ್ಯ, ಮುತ್ತಯ್ಯ, ನಲ್ಲನ ಸಣ್ಣ ಬೋರಯ್ಯ, ತಿಪ್ಪನ ಬೋರಯ್ಯ, ಬಿ.ದಾದಾಪೀರ್, ಓಬಮ್ಮ, ಕಮಲಮ್ಮ, ಚಿತ್ತಯ್ಯ ಇದ್ದರು.

    Click to comment

    Leave a Reply

    Your email address will not be published. Required fields are marked *

    More in ಚಳ್ಳಕೆರೆ

    To Top