ಹಿರಿಯೂರು
ತೇರುಮಲ್ಲೇಶ್ವರಸ್ವಾಮಿ ಜಾತ್ರಾ ಮಹೋತ್ಸವ | ಬ್ರಹ್ಮ ರಥೋತ್ಸವಕ್ಕೆ ಸಿದ್ಧತೆ

CHITRADURGA NEWS | 17 JANUARY 2024
ಚಿತ್ರದುರ್ಗ (CHITRADURGA): ದಕ್ಷಿಣ ಕಾಶಿ ಎಂದೇ ಖ್ಯಾತಿಗಳಿಸಿರುವ ಹಿರಿಯೂರಿನ ತೇರುಮಲ್ಲೇಶ್ವರಸ್ವಾಮಿಯ ಬ್ರಹ್ಮ ರಥೋತ್ಸವಕ್ಕೆ ಸಿದ್ಧತೆಗಳು ಪ್ರಾರಂಭವಾಗಿವೆ. ಫೆ.13ರಿಂದ ಫೆ. 28ರವರೆಗೆ ಜಾತ್ರಾ ಮಹೋತ್ಸವ ನಡೆಯಲಿದೆ.
ಪ್ರತಿ ವರ್ಷದಂತೆ ಈ ಬಾರಿಯೂ ಜಾತ್ರೆಯನ್ನು ವೈಭವದಿಂದ ಆಚರಿಸಲಾಗುತ್ತದೆ. ಫೆ. 24ರಂದು ಮಧ್ಯಾಹ್ನ 12 ಗಂಟೆಗೆ ಬ್ರಹ್ಮ ರಥೋತ್ಸವ ನಡೆಯಲಿದೆ.
ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಫೆ. 13ರಿಂದ ಪೂಜಾ ಕಾರ್ಯಗಳು ಆರಂಭವಾಗಿ 28ಕ್ಕೆ ಮುಕ್ತಾಯವಾಗಲಿವೆ. ಫೆ.13 ರ ರಾತ್ರಿ 8ಕ್ಕೆ ಕಂಕಣ ಕಲ್ಯಾಣೋತ್ಸವ, ಕಂಕಣಧಾರಣೆ ಮೂಲಕ ಜಾತ್ರೆಗೆ ವಿದ್ಯುಕ್ತ ಚಾಲನೆ ದೊರೆಯಲಿದೆ. ನಿತ್ಯ ರಾತ್ರಿ 8 ಗಂಟೆಯಿಮದ ಉತ್ಸವ ಕಾರ್ಯಗಳು ಭಕ್ತರ ಸಮ್ಮುಖದಲ್ಲಿ ಸಾಗಲಿವೆ.
ಇದನ್ನೂ ಓದಿ: ಜಿಲ್ಲಾಧಿಕಾರಿ ದಿವ್ಯಪ್ರಭು ಅವರಿಗೆ ರಾಷ್ಟ್ರಮಟ್ಟದ ಪ್ರಶಸ್ತಿ


ತೇರುಮಲ್ಲೇಶ್ವರಸ್ವಾಮಿ ಬ್ರಹ್ಮ ರಥೋತ್ಸವ. (Image used for representational purpose only)
14ರಂದು ಮಂಟಪೋತ್ಸವ, 15 ಗಿಳಿ ವಾಹನೋತ್ಸವ, 16 ಗಂಡಭೇರುಂಡ ವಾಹನೋತ್ಸವ, 17 ನವಿಲು ವಾಹನೋತ್ಸವ, 18ಸಿಂಹ ವಾಹನೋತ್ಸವ, 19ನಂದಿ ವಾಹನೋತ್ಸವ, 20ಸರ್ಪ ವಾಹನೋತ್ಸ, 21ರಂದು ಅಶ್ವ ವಾಹನೋತ್ಸವ, 22ರಂದು ಮೂರು ಕಳಸ ಪೂಜೆ– ಗಜವಾಹನೋತ್ಸವ, 23ಕ್ಕೆ ದೊಡ್ಡ ಉತ್ಸವ– ಬಸವ ವಾಹನೋತ್ಸವ ನಡೆಯಲಿದೆ.
24ರಂದು ಸಂಜೆ 5ಕ್ಕೆ ಚಂದ್ರಮೌಳೇಶ್ವರ ಮತ್ತು ಉಮಾಮಹೇಶ್ವರ ರಥೋತ್ಸವ, 25ರಂದು ಸಂಜೆ 4ಕ್ಕೆ ಸಿದ್ದನಾಯಕ ವೃತ್ತದಲ್ಲಿ ಜಂಗಿಕುಸ್ತಿ, 26ರಂದು ರಾತ್ರಿ 8ಕ್ಕೆ ಸುಮಂಗಲಿಯರಿಂದ ಕರ್ಪೂದಾರತಿ, 27ರಂದು ರಾತ್ರಿ 8ಕ್ಕೆ ಉಯ್ಯಾಲೋತ್ಸವ, ವಸಂತೋತ್ಸವ, ಓಕುಳಿ ಪಾರ್ವತೋತ್ಸವ, 28ರಂದು ಮಧ್ಯಾಹ್ನ 12ಕ್ಕೆ ಕಂಕಣ ವಿಸರ್ಜನೆಯೊಂದಿಗೆ ಜಾತ್ರಾ ಮಹೋತ್ಸವಕ್ಕೆ ತೆರೆ ಬೀಳಲಿದೆ.

ಇದನ್ನೂ ಓದಿ: ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ
ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ ದೇವಸ್ಥಾನದಲ್ಲಿ ಮುಜರಾಯಿ ಅಧಿಕಾರಿ ರಾಜೇಶ್ ಕುಮಾರ್ ಪೂರ್ವಭಾವಿ ಸಭೆ ನಡೆಸಿ ಮಾಹಿತಿ ವಿವರಿಸಿದರು.
ದೇವಸ್ಥಾನದ ಮುಖ್ಯಸ್ಥರಾದ ವೀರಪ್ಪ, ವೀರಕರಿಯಣ್ಣ, ಆಡಳಿತಾಧಿಕಾರಿ ಸ್ವಾಮಿ, ವಿ.ಎ.ಮಯವರ್ಮ ಬಸವರಾಜ್, ಪೌರಾಯುಕ್ತ ಎಚ್. ಮಹಾಂತೇಶ್, ಬೆಸ್ಕಾಂ ಅಧಿಕಾರಿಗಳಾದ ರವಿಕುಮಾರ್, ಕೊಟ್ರೇಶ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ್, ಆರೋಗ್ಯಾಧಿಕಾರಿ ಸಂಧ್ಯಾ, ನಗರಠಾಣೆ ಎಎಸ್ಐ ರಾಘವ ರೆಡ್ಡಿ, ನಗರಸಭೆ ಮಾಜಿ ಅಧ್ಯಕ್ಷೆ ಶಿವರಂಜನಿ ಯಾದವ್, ಅರ್ಚಕರಾದ ಪ್ರಸನ್ನ ಕುಮಾರ್ ಜೋಯಿಸ್, ವಿಶ್ವನಾಥಾಚಾರ್ಯ, ನಾಗರಾಜಾಚಾರ್ಯ, ಮಲ್ಲೇಶ್ ಆಚಾರ್ಯ, ವೀರಣ್ಣ, ಬೀರೇನಹಳ್ಳಿ ವೀರಕರಿಯಣ್ಣ ಉಪಸ್ಥಿತರಿದ್ದರು.
