
CHITRADURGA NEWS | 10 FEBRUARY 2024
ಚಿತ್ರದುರ್ಗ: ನಿರೀಕ್ಷೆಯಂತೆ ಕೊನೆಗೂ ಶುಕ್ರವಾರ ತಡರಾತ್ರಿ ಮುಖ್ಯ ರಸ್ತೆಯಲ್ಲಿ ಜೆಸಿಬಿ, ಹಿಟಾಚಿ ಜತೆ ಪಟಾಕಿಯೂ ಸದ್ದು ಮಾಡಿತು. ಅವೈಜ್ಞಾನಿಕ ಎಂದು ಕರೆಯುತ್ತಿರುವ ರಸ್ತೆ ವಿಭಜಕ ತೆರವು ಕಾರ್ಯಕ್ಕೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ರಾತ್ರೋ ರಾತ್ರಿ ಚಾಲನೆ ನೀಡುತ್ತಿದ್ದಂತೆ ಅಭಿಮಾನಿಗಳು ಸಂಭ್ರಮಿಸಿದರು.
ಕಳೆದ ವಿಧಾನಸಭೆ ಸಾರ್ವತ್ರಿಕ ಚುನಾವಣೆ ವೇಳೆ ನಗರದ ‘ಅವೈಜ್ಞಾನಿಕ ರಸ್ತೆ ವಿಭಜಕ ತೆರವು’ ಮಾಡುವುದಾಗಿ ಭರವಸೆ ನೀಡಿದ್ದ ಕೆ.ಸಿ.ವೀರೇಂದ್ರ ಪಪ್ಪಿ ಕೆಲವು ಕಡೆ ತೆರವುಗೊಳಿಸುವ ಮೂಲಕ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ. ಶಾಸಕರಾದ ಬಳಿಕ ಇದೇ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಸಚಿವರು, ಮುಖ್ಯಮಂತ್ರಿ ಬಳಿ ಚರ್ಚೆ ನಡೆಸಿದ್ದರು. ಬಳಿಕ ಸದನದಲ್ಲಿ ಸಹ ಧ್ವನಿ ಎತ್ತಿ ತೆರವು ಕಾರ್ಯಕ್ಕೆ ಅನುಮತಿ ಪಡೆದಿದ್ದರು. ಈ ಎಲ್ಲವೂ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡಿದ್ದವು.
ಇದನ್ನೂ ಓದಿ: ‘ಭದ್ರೆ’ ಗೆ ಸ್ತಬ್ಧವಾಯ್ತು ಚಳ್ಳಕೆರೆ | ಮುಂಜಾನೆಯಿಂದಲೇ ಸಂಪೂರ್ಣ ಬಂದ್ | ಜನರ ಸ್ವಯಂಪ್ರೇರಿತ ಬೆಂಬಲ

ನಗರದ ಆರ್‌ಟಿಒ ರಸ್ತೆ ಮುಂಭಾಗ ಶಾಸಕರು ತೆರವು ಕಾರ್ಯಕ್ಕೆ ಚಾಲನೆ ನೀಡುತ್ತಿದ್ದಂತೆ ಅಭಿಮಾನಿಗಳು ಜೈಕಾರ ಹಾಕಿದರು. ಸುಗಮ ಸಂಚಾರಕ್ಕೆ ಸಮಸ್ಯೆಯಾಗಿದ್ದ ಆರ್‌ಟಿಒ ಕಚೇರಿ, ಜೆಸಿಆರ್ ಬಡಾವಣೆ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಸಮೀಪದ ದರ್ಗಾ ರಸ್ತೆ, ಚಳ್ಳಕೆರೆ ಟೋಲ್ ಗೇಟ್ ಸೇರಿ ಕೆಲ ಭಾಗದ ರಸ್ತೆ ವಿಭಜಕಗಳನ್ನು ತೆರವುಗೊಳಿಸಲಾಗುತ್ತಿದೆ.
ರಸ್ತೆ ವಿಭಜಕಗಳು ಅವೈಜ್ಞಾನಿಕವಾಗಿವೆ ಎಂದು ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಆದರೆ ಚಿತ್ರದುರ್ಗ ನಗರದಲ್ಲಿ ರಸ್ತೆ ಒತ್ತುವರಿ ತೆರವು ಕಾರ್ಯ ಮೊದಲು ಆಗಬೇಕಿತ್ತು ಎನ್ನುತ್ತಾರೆ ಚಿತ್ರದುರ್ಗದ ಜನತೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
