CHITRADURGA NEWS | 06 AUGUST 2025
ಚಿತ್ರದುರ್ಗ: ಆ.10 ರಂದು ಡಾ.ಜಿ.ಪಿ.ರಕ್ಷಿತ ಭರತನಾಟ್ಯ ರಂಗ ಪ್ರವೇಶಿಸಲಿದ್ದಾರೆಂದು ಅಂಜನಾ ನೃತ್ಯ ಕಲಾ ಕೇಂದ್ರದ ವಿದುಷಿ ಡಾ.ನಂದಿನಿ ಶಿವಪ್ರಕಾಶ್ ತಿಳಿಸಿದರು.
ಇದನ್ನೂ ಓದಿ: ಕೋಟೆನಾಡು ಚಿತ್ರದುರ್ಗಕ್ಕೂ ತಟ್ಟಿದ ಸಾರಿಗೆ ನೌಕರರ ಮುಷ್ಕರ | ಬಸ್ ಇಲ್ಲದೇ ಸಾರ್ವಜನಿಕರ ಪರದಾಟ
ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕಾಶ್‍ಮೂರ್ತಿ ನಳಿನಾಕ್ಷಿ ದಂಪತಿಗಳ ಪುತ್ರಿ ಡಾ.ರಕ್ಷಿತ ಸಾಧನೆಯ ಪ್ರತಿಭೆಯನ್ನು ಅನಾವರಣಗೊಳಿಸುವುದಕ್ಕಾಗಿ ಭರತನಾಟ್ಯ ರಂಗ ಪ್ರವೇಶಿಸಲಿದ್ದಾರೆ.
ಉದಯೋನ್ಮುಖ ಕಲಾವಿದೆಯಾಗಲು ಭರತನಾಟ್ಯ ಕಲೆಯಲ್ಲಿ ತನ್ನನ್ನು ತೊಡಸಿಕೊಂಡಿದ್ದಾರೆ. ಪ್ರತಿನಿತ್ಯವೂ ಬೆಳಿಗ್ಗೆ 5-30 ರಿಂದ ಹಾಗೂ ಸಂಜೆ ಭರತನಾಟ್ಯ ಅಭ್ಯಾಸ ಮಾಡಿದ್ದಾರೆ. ಸತತವಾಗಿ ಆರು ತಿಂಗಳ ಕಾಲ ತಾಲೀಮು ನಡೆಸಿ ಈಗ ರಂಗ ಪ್ರವೇಶಿಸುತ್ತಿದ್ದಾರೆಂದು ಹರ್ಷ ವ್ಯಕ್ತಪಡಿಸಿದರು.
ಅಂದು ಸಂಜೆ ಐದು ಗಂಟೆಗೆ ಉಮಾಪತಿ ಕಲ್ಯಾಣ ಮಂಟಪದಲ್ಲಿ ನಡೆಯುವ ಕಾರ್ಯಕ್ರಮದ ಸಾನಿಧ್ಯವನ್ನು ಕಬೀರಾನಂದಾಶ್ರಮದ ಶಿವಲಿಂಗಾನಂದಸ್ವಾಮಿ ವಹಿಸಲಿದ್ದಾರೆ. ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್, ಭರತನಾಟ್ಯ ಹಾಗೂ ಕೂಚುಪಡಿ ನರ್ತಕರಾದ ಡಾ.ವಸಂತಕಿರಣ್, ವಿದ್ವಾನ್ ಜಿ.ಎಸ್.ನಾಗೇಶ್, ಮಾಜಿ ಶಾಸಕ ಎ.ವಿ.ಉಮಾಪತಿ ಇವರುಗಳು ಭರತನಾಟ್ಯ ರಂಗ ಪ್ರವೇಶದಲ್ಲಿ ಭಾಗವಹಿಸಲಿದ್ದಾರೆ.
ಇದನ್ನೂ ಓದಿ: ಸೋಮವಾರ ರಾತ್ರಿ ಎಲ್ಲೆಲ್ಲಿ ಎಷ್ಟು ಮಳೆ ಸುರಿಯಿತು ? | 14 ಮನೆಗಳಿಗೆ ಹಾನಿ
ಡಾ.ರಕ್ಷಿತ ಮಾತನಾಡಿ, ಎಂಟನೆ ವಯಸ್ಸಿನಿಂದಲೆ ಭರತ ನಾಟ್ಯ ಕಲಿಯಲು ಆರಂಭಿಸಿದ ನಾನು ಮೊದಲು ಸುಧಾಮೂರ್ತಿಯವರ ಬಳಿ ಕಲಿತೆ. ನಂತರ ಅಂಜನಾ ನೃತ್ಯ ಕಲಾ ಕೇಂದ್ರದಲ್ಲಿ ಭರತ ನಾಟ್ಯ ಕಲಿತು ಈಗ ರಂಗ ಪ್ರವೇಶಿಸುತ್ತಿದ್ದೇನೆ. ಇದು ನನಗೆ ಜೀವನದ ಪಾಠ ಹೇಳಿಕೊಟ್ಟಿದೆ.
ಗಂಗೂಬಾಯಿ ಹಾನಗಲ್ ಮೈಸೂರು ವಿವಿ.ಯಿಂದ ಭರತನಾಟ್ಯದ ಬಗ್ಗೆ ವಿದ್ವತ್‍ಪೂರ್ವ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಶಿಕ್ಷಣ ಮತ್ತು ಭರತನಾಟ್ಯ ಎರಡನ್ನು ನಿಭಾಯಿಸಿದ್ದೇನೆ ಎಂದು ಹೆಮ್ಮೆಯಿಂದ ಹೇಳಿದರು.
ಸುದ್ದಿಗೊಷ್ಟಿಯಲ್ಲಿ ವಿದ್ವಾನ್ ಸಿ.ಆರ್.ಶಿವಪ್ರಕಾಶ್, ಪ್ರಕಾಶ್‍ಮೂರ್ತಿ, ನಳಿನಾಕ್ಷಿ ದಂಪತಿಗಳು ಉಪಸ್ಥಿತರಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

