CHITRADURGA NEWS | 05 AUGUST 2025
ಚಿತ್ರದುರ್ಗ: ಸಾರಿಗೆ ನೌಕರರು ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಮುಷ್ಕರಕ್ಕೆ ಕರೆ ನೀಡಿದ ಪರಿಣಾಮ ಜಿಲ್ಲೆಯಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ.
ಬೆಳಗ್ಗೆಯಿಂದಲೇ ಬಸ್ ಸಂಚಾರ ಇಲ್ಲದಿದ್ದರಿಂದ ಸಾರ್ವಜನಿಕರು, ವಿದ್ಯಾರ್ಥಿಗಳು ಪರದಾಡಿದರು.
ಇದನ್ನೂ ಓದಿ: ನಿಯಂತ್ರಣ ತಪ್ಪಿ ಡಿವೈಡರ್ ಗೆ ಕಾರು ಡಿಕ್ಕಿ | ಕಾರಿನಲ್ಲಿದ್ದವರು ಪ್ರಾಣಪಾಯದಿಂದ ಪಾರು
ಕೆಎಸ್‍ಆರ್‍ಟಿಸಿ ನೌಕರರು ಕರೆಯಲಾಗಿದ್ದ ಮುಷ್ಕರದ ಪರಿಣಾಮ ಚಿತ್ರದುರ್ಗದಲ್ಲಿ ಬಸ್ ಸಂಚಾರ ಸ್ಥಗಿತ ಗೊಂಡಿತ್ತು.
ಮುಷ್ಕರ ಗೊತ್ತಿಲ್ಲದೆ ಬಂದವರು ಪರದಾಟ ನಡೆಸಿದರು. ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಿಗೆ ಖಾಸಗಿ, ಎಲೆಕ್ಟ್ರಿಕ್ ಬಸ್‍ಗಳ ಮೂಲಕ ಸೇವೆ ಒದಗಿಸಲಾಗುತ್ತಿದೆ.
ಬಸ್ಸುಗಳು ಒಂದು ಸಹ ಸಂಚಾರ ಮಾಡದೆ ಇರುವುದು ಎದ್ದು ಕಾಣುತ್ತಿದ್ದು, ಕೆಎಸ್‍ಆರ್‍ಟಿಸಿ ಡ್ರೈವರ್ ಮತ್ತು ಕಂಡಕ್ಟರ್ ಸಿಬ್ಬಂದಿ ವರ್ಗದವರಿಗೆ ಸರ್ಕಾರ ನೀಡಬೇಕಾದ ಸಂಬಳ, ಇತರ ಭತ್ಯೆಗಳನ್ನು ಸಕಾಲಕ್ಕೆ ನೀಡದಿರುವುದರಿಂದ ಕರೆ ನೀಡಲಾಗಿದ್ದ ಮುಷ್ಕರಕ್ಕೆ ಕೆ.ಎಸ್‍ಆರ್.ಟಿ.ಸಿ ಎಲ್ಲಾ ಸಿಬ್ಬಂದಿ ವರ್ಗದವರು ತಮ್ಮ ವಾಹನವನ್ನು ಚಲಿಸದೆ ನಿಲ್ಲಿಸಿರುವುದು ಕಂಡುಬಂದಿತ್ತು.
ಇದನ್ನೂ ಓದಿ: ಚಿತ್ರದುರ್ಗ ಮಾರುಕಟ್ಟೆಯಲ್ಲಿ ಇಂದಿನ ಹತ್ತಿ ರೇಟ್ ಎಷ್ಟಿದೆ?
ಖಾಸಗಿ ಬಸ್ಸುಗಳು ಓಡಾಡುತ್ತಿದ್ದರಿಂದ ಜನಗಳಿಗೆ ತೊಂದರೆಯಾಗುತ್ತಿರಲಿಲ್ಲ, ಕೆಎಸ್‍ಆರ್.ಟಿ.ಸಿ ಉಚಿತ ಘೋಷಣೆಯಿಂದ ಆ ಬಸ್ಸುಗಳನ್ನು ಖಾಸಗಿಯವರು ನಿಲ್ಲಿಸಿದ್ದರಿಂದ ಎಲ್ಲಾ ಪ್ರಯಾಣಿಕರು ಕೆಎಸ್‍ಆರ್‍ಟಿಸಿ ಬಸ್ಸನ್ನೇ ಅವಲಂಬಿಸಿದ್ದು, ಈಗ ಕೆಎಸ್‍ಆರ್‍ಟಿಸಿ ಬಸ್ ಮುಷ್ಕರದಿಂದ ಅವರಿಗೆ ತೊಂದರೆ ಎದ್ದು ಕಾಣುತ್ತಿತ್ತು.
ಸದಾ ಗಿಜಿಗುಡುತ್ತಿದ್ದ ಚಿತ್ರದುರ್ಗ ಸರ್ಕಾರಿ ಬಸ್ ನಿಲ್ದಾಣ ಇಂದು ಕೆಎಸ್‍ಆರ್‍ಟಿಸಿ ನೌಕರರು ಕರೆಯಲಾಗಿದ್ದ ಮುಷ್ಕರದ ಪರಿಣಾಮ ಬಿಕೋ ಎನ್ನುತ್ತಿತ್ತು.
ಗ್ರಾಮಾಂತರ ಪ್ರದೇಶದಿಂದ ಬಂದತಹ ಪ್ರಯಾಣಿಕರು ಬಸ್ ಇಲ್ಲದೆ ಊರಿಗೆ ಹೋಗಲು ಪರದಾಡುತ್ತಿರುವುದು ಕಂಡು ಬಂದಿತು.
ಇದನ್ನೂ ಓದಿ: ವಿವಿ ಸಾಗರಕ್ಕೆ ಹರಿದು ಬಂತು ನೀರು | 1220 ಕ್ಯೂಸೆಕ್ ಒಳಹರಿವು | ಇಗ ಎಷ್ಟಿದೆ ಜಲಾಶಯ ಮಟ್ಟ
ಕೆಎಸ್‍ಆರ್.ಟಿ.ಸಿ ಮುಷ್ಕರದ ಹಿನ್ನೆಲೆ ವಿದ್ಯಾರ್ಥಿಗಳಿಗೆ ಪ್ರಯಾಣದ ತೊಂದರೆ ಆಗಿರುವುದರಿಂದ ಕಾಲೇಜುಗಳಲ್ಲಿ ನಡೆಸಬೇಕಿದ್ದ ಈ ದಿನದ ಆಂತರಿಕ ಪರೀಕ್ಷೆಗಳನ್ನು ಮುಂದೂಡಿದ್ದಾರೆ.



________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
