
CHITRADURGA NEWS | 06 AUGUST 2025
ಚಿತ್ರದುರ್ಗ: ವಿವಾಹದ ಹೆಸರಿನಲ್ಲಿ ದುಂದುವೆಚ್ಚ ಮಾಡುವುದು ಒಂದು ರೀತಿಯ ಭ್ರಷ್ಟಾಚಾರ. ಸಾಮೂಹಿಕ ವಿವಾಹದ ಮುಖಾಂತರ ಗುರುಗಳ ಆಶೀರ್ವಾದ ಪಡೆದು ವಿವಾಹವಾಗುವುದು ಶ್ರೇಷ್ಠ ಎಂದು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಆಡಳಿತ ಮಂಡಳಿ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿ ನುಡಿದರು.
ಇದನ್ನೂ ಓದಿ: ನಿಯಂತ್ರಣ ತಪ್ಪಿ ಡಿವೈಡರ್ ಗೆ ಕಾರು ಡಿಕ್ಕಿ | ಕಾರಿನಲ್ಲಿದ್ದವರು ಪ್ರಾಣಪಾಯದಿಂದ ಪಾರು

ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿಂದು ನಡೆದ 35 ವರ್ಷದ ಎಂಟನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು,
ಶ್ರೀಮಠವು ಕಳೆದ 35 ವರ್ಷಗಳಿಂದ ಸಾಮೂಹಿಕ ವಿವಾಹಗಳಿಗೆ ಸಾಕ್ಷಿಯಾಗಿದೆ, ಸತಿ-ಪತಿಗಳು ಒಂದಾದ ಭಕ್ತಿ ಹಿತವಾಗುವುದು ಶಿವಂಗೆ ಎಂದು ಬಸವಣ್ಣ ಹೇಳಿದ್ದಾರೆ. ಒಳ್ಳೆಯ ಮಾತುಗಳನ್ನು ಪ್ರಸನ್ನತೆಯಿಂದ ಕೇಳಿದರೆ ಅದು ಪ್ರಸಾದ. ಯಾರೂ ಸಹ ಕೆಟ್ಟ ಪದಗಳನ್ನು ಕೇಳಬಾರದು. ಕಿವಿಗೆ ಪ್ರಸಾದ ಲಿಂಗ ಎಂದಿದ್ದಾರೆ ಶರಣರು.
ನಾಲಿಗೆಯು ಕೆಟ್ಟದಾಗಿ ಮಾತನಾಡುತ್ತದೆ ಅದನ್ನು ತಡೆಯಬೇಕು. ಮಾತಿಗೆ ಮಾತು ಬೆಳೆಸಬಾರದು. ಅದು ಸಂಸ್ಕಾರಯುತವಾಗಿರಬೇಕು ಆದ್ದರಿಂದ ನಾಲಿಗೆಯನ್ನು ಗುರುಲಿಂಗ ಎಂದಿದ್ದಾರೆ ಶರಣರು. ಮನೆಯಲ್ಲಿ ಪ್ರತಿಯೊಬ್ಬರನ್ನು ಪ್ರೀತಿಯಿಂದ ಕಾಣಬೇಕು. ಎಲ್ಲವೂ ನಿಮ್ಮದೇ ಎಂಬ ಪದ ಬಳಸಿದರೆ ಎಲ್ಲವೂ ಒಳ್ಳೆಯದಾಗುತ್ತದೆ. ನನ್ನದೇ ಎಲ್ಲಾ ಎಂದರೆ ದಾರಿಯೇ ಬೇರೆಯಾಗುತ್ತದೆ. ಮೂರನೆಯ ಲಿಂಗ ಕಣ್ಣು. ಅದನ್ನು ಇಷ್ಟಲಿಂಗ ಎನ್ನುತ್ತಾರೆ. ಒಳ್ಳೆಯದನ್ನೇ ನೋಡಲು ಪ್ರಯತ್ನಿಸಬೇಕು ಎಂದು ತಿಳಿಸಿದರು.
ಇದನ್ನೂ ಓದಿ: ಚಿತ್ರದುರ್ಗ ಮಾರುಕಟ್ಟೆಯಲ್ಲಿ ಇಂದಿನ ಹತ್ತಿ ರೇಟ್ ಎಷ್ಟಿದೆ?
ದಾವಣಗೆರೆ ವಿರಕ್ತಮಠದ ಡಾ.ಬಸವಪ್ರಭು ಸ್ವಾಮಿಗಳು ಮಾತನಾಡಿ, ಮುರುಘಾಮಠವು ನಾಡಿನಲ್ಲಿ ತ್ರಿವಿಧ ದಾಸೋಹಕ್ಕೆ ಹೆಸರುವಾಸಿಯಾಗಿದೆ. ಮಠದಲ್ಲಿ ಅನ್ನದಾಸೋಹ ನಿರಂತರವಾಗಿ ನಡೆದಿದೆ. ಅಂತೆಯೇ ಜ್ಞಾನದಾಸೋಹ. ಈ ರೀತಿಯ ಕಾರ್ಯಗಳ ಮೂಲಕ ಅರಿವನ್ನು ನೀಡುತ್ತಿದೆ.
ಜ್ಞಾನ ಎಂದರೆ ತಿಳುವಳಿಕೆ. ಅಕ್ಷರ ದಾಸೋಹ ರೂಪದಲ್ಲಿ ಶಾಲೆ-ಕಾಲೇಜುಗಳನ್ನು ಸ್ಥಾಪಿಸಿ ಶಿಕ್ಷಣವನ್ನು ನೀಡುತ್ತಾ ಬಂದಿದೆ. ತ್ರಿವಿಧ ದಾಸೋಹದ ಜೊತೆಗೆ 4ನೇ ದಾಸೋಹವಾಗಿ ಸಾಮೂಹಿಕ ಕಲ್ಯಾಣ ಮಹೋತ್ಸವವನ್ನು ಮಾಡಿದರೆ, 5ನೇ ದಾಸೋಹವಾಗಿ ಆರೋಗ್ಯ ದಾಸೋಹವನ್ನು ಉಚಿತ ಆರೋಗ್ಯ ತಪಾಸಣೆ ಮಾಡುವುದರ ಮುಖಾಂತರ ಪಂಚದಾಸೋಹದ ಕತೃವಾಗಿ ಮುರುಘಾಮಠ ಸೇವೆ ಸಲ್ಲಿಸುತ್ತಿದೆ.
ದೇವರಿಗೆ ಹಾಲಿನ ಪಂಚಾಮೃತ ಅಭಿಷೇಕ ಮಾಡುತ್ತಾರೆ. ಆದರೆ ಶ್ರೀಮಠವು ಹಸಿದವರಿಗೆ ಅನ್ನ ನೀಡುವ ಕಾರ್ಯವನ್ನು ನಿರಂತರವಾಗಿ ಮಾಡಿಕೊಂಡು ಬಂದಿದೆ. ನವಜೋಡಿಗಳಿಗೆ ಕಿವಿಮಾತಾಗಿ ಅತ್ತೆ-ಸೊಸೆಯರು ಹೊಂದಿಕೊAಡು ಬಾಳಬೇಕು. ಮನುಷ್ಯನಾದ ಮೇಲೆ ಏನಾದರೊಂದು ಸೇವೆ ಸಲ್ಲಿಸುವ, ಒಳ್ಳೆಯದನ್ನು ಮಾಡುವ ಕಾರ್ಯದಲ್ಲಿ ತೊಡಗಬೇಕು ಎಂದು ಹೇಳಿದರು.
ಇದನ್ನೂ ಓದಿ: ವಿವಿ ಸಾಗರಕ್ಕೆ ಹರಿದು ಬಂತು ನೀರು | 1220 ಕ್ಯೂಸೆಕ್ ಒಳಹರಿವು | ಇಗ ಎಷ್ಟಿದೆ ಜಲಾಶಯ ಮಟ್ಟ
ಶ್ರೀ ಬಸವ ಮುರುಘೇಂದ್ರ ಸ್ವಾಮಿಗಳು ಮಾತನಾಡಿದರು. ಮುಂಬೈನ ಕೆ.ಇ.ಎಂ. ಆಸ್ಪತ್ರೆಯ ವೈದ್ಯ ಡಾ. ಬ್ರಿಜೇಶ್ ಕೆ. ಶ್ರೀಮಠದ ಗೌರವವನ್ನು ಸ್ವೀಕರಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ 6 ಜೋಡಿಗಳ ವಿವಾಹ ನೆರವೇರಿಸಲಾಯಿತು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
