
CHITRADURGA NEWS | 03 July 2025
ಮನೆಯಲ್ಲಿ ವಾಸ್ತು ನಯಮ ಪಾಲಿಸುವುದು ಅವಶ್ಯಕವಾಗಿದೆ. ಯಾಕೆಂದರೆ ವಾಸ್ತು ಮನೆಯಲ್ಲಿ ಸಕ್ಕರಾತ್ಮಕ ಹರಿವನ್ನು ಹೆಚ್ಚಿಸುತ್ತದೆ. ಒಂದು ವೇಳೆ ಮನೆಯಲ್ಲಿ ವಾಸ್ತುದೋಷವಿದ್ದರೆ ಇದರಿಂದ ನಕರಾತ್ಮಕತೆ ಹೆಚ್ಚಾಗಿ ಮನೆಯ ಸದಸ್ಯರ ಯೋಗಕ್ಷೇಮ, ಹಣಕಾಸು ಮತ್ತು ಸಂಬಂಧಗಳ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ಬೀರಬಹುದು.
ಅಲ್ಲದೇ ಅಡುಗೆಮನೆಯು ಮನೆಯ ಪ್ರಮುಖ ಭಾಗವಾಗಿದ್ದು, ಅಲ್ಲಿ ಅನ್ನಪೂರ್ಣ ದೇವಿ ವಾಸಿಸುತ್ತಾಳೆ ಎಂದು ನಂಬಲಾಗಿದೆ. ಹಾಗಾಗಿ ವಾಸ್ತು ಶಾಸ್ತ್ರವು ಅಡುಗೆಮನೆಯಲ್ಲಿ ಕೆಲವು ವಸ್ತುಗಳನ್ನು ತಲೆಕೆಳಗಾಗಿ ಇಡಬಾರದ ಎಂದು ಹೇಳುತ್ತದೆ. ಹಾಗಾದ್ರೆ ಆ ವಸ್ತುಗಳು ಯಾವುದೆಂಬುದನ್ನು ತಿಳಿದುಕೊಳ್ಳೋಣ.
ಕಡಾಯಿ ಅಥವಾ ಪಾತ್ರೆಗಳು:
ವಾಸ್ತು ಶಾಸ್ತ್ರದ ನಿಯಮಗಳ ಪ್ರಕಾರ, ಅಡುಗೆಮನೆಯಲ್ಲಿ ಕಡಾಯಿಯನ್ನು ಹಾಗೂ ಪಾತ್ರೆಗಳನ್ನು ಎಂದಿಗೂ ತಲೆಕೆಳಗಾಗಿ ಇಡಬಾರದು. ವಾಸ್ತು ಶಾಸ್ತ್ರದಲ್ಲಿ, ಕಡಾಯಿಯನ್ನು ರಾಹುವಿನ ಸಂಕೇತವಾಗಿ ನೋಡಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಅದನ್ನು ತಲೆಕೆಳಗಾಗಿ ಇಟ್ಟರೆ, ನೀವು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಹಾಗೇ ಸಾಮಾನ್ಯವಾಗಿ ಎಲ್ಲರೂ ತೊಳೆದ ಪಾತ್ರೆಗಳನ್ನು ತಲೆಕೆಳಗಾಗಿ ಇಡುತ್ತಾರೆ. ಆದರೆ ಇದು ಮನೆಗೆ ಕೆಟ್ಟದನ್ನು ಆಹ್ವಾನಿಸುತ್ತದೆಯಂತೆ.
ಚಾಕು ಮತ್ತು ಫೋರ್ಕ್
ವಾಸ್ತು ಶಾಸ್ತ್ರದಲ್ಲಿಯೂ ಸಹ ಚಾಕು ಮತ್ತು ಫೋರ್ಕ್‌ಗಳಂತಹ ಚೂಪಾದ ವಸ್ತುಗಳನ್ನು ಅಡುಗೆಮನೆಯಲ್ಲಿ ತಲೆಕೆಳಗಾಗಿ ಇಡಬಾರದು ಎಂದು ನಂಬಲಾಗಿದೆ. ಇಲ್ಲದಿದ್ದರೆ, ನೀವು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಇದು ವಾಸ್ತು ದೋಷಗಳನ್ನು ಹೆಚ್ಚಿಸುತ್ತದೆ ಮತ್ತು ಮನೆಯಲ್ಲಿ ಜಗಳಗಳಿಗೆ ಕಾರಣವಾಗಬಹುದು.
ಪೊರಕೆ
ಶಾಸ್ತ್ರಗಳಲ್ಲಿ ತಿಳಿಸಿದಂತೆ ಪೊರಕೆಯನ್ನು ಲಕ್ಷ್ಮಿದೇವಿಯ ಸ್ವರೂಪವೆಂದು ಪೂಜಿಸಲಾಗುತ್ತದೆ. ಆದರೆ ಕೆಲವರ ಮನೆಯಲ್ಲಿ ಪೊರಕೆಗಳನ್ನು ತಲೆಕೆಳಗಾಗಿ ನಿಲ್ಲಿಸಿಟ್ಟಿರುತ್ತಾರೆ. ಇದು ಲಕ್ಷ್ಮಿದೇವಿಗೆ ಅವಮಾನ ಮಾಡಿದಂತಾಗುತ್ತದೆಯಂತೆ. ಇದರಿಂದ ಲಕ್ಷ್ಮಿದೇವಿ ಕೋಪಗೊಂಡು ಮನೆಬಿಟ್ಟು ಹೋಗುತ್ತಾಳಂತೆ. ಇದು ಆರ್ಥಿಕ ಸಮಸ್ಯೆಗಳಿಗೆ ಕಾರಣವಾಗಬಹುದಂತೆ. ಹಾಗಾಗಿ ಮನೆಯಲ್ಲಿ ಪೊರಕೆಯನ್ನು ನೆಲದ ಮೇಲೆ ಮಲಗಿಸಿಡಿ. ಮತ್ತು ಯಾರಿಗೂ ಕಾಣದಂತಹ ಸ್ಥಳದಲ್ಲಿ ಇಡಬೇಕಂತೆ.
ಈ ರೀತಿಯಲ್ಲಿ ಮನೆಯಲ್ಲಿ ವಾಸ್ತು ನಿಯಮಗಳನ್ನು ಪಾಲಿಸುವ ಮೂಲಕ ಮನೆಯಲ್ಲಿ ಸುಖ, ಸಂಪತ್ತು, ನೆಮ್ಮದಿಯನ್ನು ಕಂಡುಕೊಳ್ಳಿ. ಉತ್ತಮವಾದ ಜೀವನವನನು ಸಾಗಿಸಿ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
