CHITRADURGA NEWS | 21 NOVEMBER 2025
ಚಿತ್ರದುರ್ಗ: ಚಿತ್ರದುರ್ಗ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ಚಿತ್ರದುರ್ಗ ತಾಲ್ಲೂಕು ವ್ಯಾಪ್ತಿಯ ಎಲ್ಲ ಬಟವಾಡೆ ಅಧಿಕಾರಿಗಳು (ಡಿಡಿಓ) ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಹೆಚ್‍ಆರ್‍ಎಂಎಸ್-2 ಹಾಗೂ ಖಜಾನೆ-2 ತಂತ್ರಾಂಶ ಕುರಿತು ಕಾರ್ಯಾಗಾರ ನಡೆಸಲಾಯಿತು.

ಇದನ್ನೂ ಓದಿ: ರೈತ ಸಂಘದಿಂದ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳಿಗೆ ಸನ್ಮಾನ
ಜಿಲ್ಲಾ ಖಜಾನೆ ಉಪನಿರ್ದೇಶಕ ಹೆಚ್.ಟಿ. ಅಶೋಕ ಅವರು ಸಸಿಗೆ ನೀರೆರೆಯುವುದರ ಮೂಲಕ ಕಾರ್ಯಾಗಾರಕ್ಕೆ ಚಾಲನೆ ನೀಡಿ, ಖಜಾನೆ-2ರಲ್ಲಿ ಬಿಲ್ಲನ್ನು ಸೃಜಿಸಿ ಸಲ್ಲಿಸುವಾಗ ಅನುಸರಿಸಬೇಕಾದ ನಿಯಮಾಳಿಗಳ ಬಗ್ಗೆ ತಿಳಿಸಿದರು. ಪ್ರತಿ ಮಾಹೆ ವೆಚ್ಚ ತಖ್ತೆಃ, ಜಿ.ಎಸ್.ಟಿ. ಸಮನ್ವಯೀಕರಣ, ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಲೆಕ್ಕ ಸಮನ್ವಯೀಕರಣವನ್ನು ನಿಗದಿತ ಅವಧಿಯೊಳಗೆ ಮಾಡುವಂತೆ ಸಲಹೆ ನೀಡಿದರು.
ವರ್ಷಾಂತ್ಯ ಸಮೀಪಿಸುತ್ತಿರುವುದರಿಂದ ಡಿ.ಎಸ್.ಸಿ ನವೀಕರಣ, ಪ್ರಯಾಣ ಭತ್ಯೆ ಬಿಲ್ಲುಗಳು, ಜಿ.ಪಿ.ಎಫ್ ಬಿಲ್ಲುಗಳು, ಹೆಚ್‍ಆರ್‍ಎಂಎಸ್-2, ಎನ್.ಪಿ.ಎಸ್ ಹಾಗೂ ಆನ್‍ಲೈನ್ ಕಚೇರಿ ಆದೇಶ ಸೃಜನೆ ಬಗ್ಗೆ ವಿವರಿಸಿದರು.
ದಾವಣಗೆರೆ ಇ-ಪ್ರಕ್ಯೂರ್‍ಮೆಂಟ್ ಸೆಲ್‍ನ ಸಂಪನ್ಮೂಲ ವ್ಯಕ್ತಿ ವೀರೇಶ್ ಅವರು, ಇ-ಪ್ರಕ್ಯೂರ್‍ಮೆಂಟ್ ಪೋರ್ಟಲ್‍ನಲ್ಲಿ ವರ್ಕ್ ಬಿಲ್ ಸೃಜನೆಯ ಬಗ್ಗೆ ತರಬೇತಿ ನೀಡಿದರು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ನವೆಂಬರ್ 21 | ಮೆಕ್ಕೆಜೋಳ, ಶೇಂಗಾ, ಸೂರ್ಯಕಾಂತಿ ರೇಟ್ ಎಷ್ಟಿದೆ?
ಈ ಸಂದರ್ಭದಲ್ಲಿ ಜಿಲ್ಲಾ ಖಜಾನೆ ಇಲಾಖೆಯ ಸಹಾಯಕ ನಿರ್ದೇಶಕ ಎನ್.ಬೋರಯ್ಯ, ಸಹಾಯಕ ಖಜನಾಧಿಕಾರಿ ಬಿ.ವೀರಭದ್ರಪ್ಪ, ಕಾರ್ಯಪಾಲಕ ಅಭಿಯಂತರ ಹೆಚ್.ಪಿ.ಅಮರನಾಥ್ ಜೈನ್, ಅರಣ್ಯ ಇಲಾಖೆ ಎಸಿಎಫ್ ಎಂ.ಎಸ್.ನ್ಯಾಮತಿ ಇದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
