
CHITRADURGA NEWS | 18 MAY 2024
ಚಿತ್ರದುರ್ಗ: ಪ್ರತಿ ಐದು ವರ್ಷಕ್ಕೊಮ್ಮೆ ನಡೆಯುವ ರಕ್ತನಿಧಿ ಕೇಂದ್ರದ ಪರವಾನಗಿ ನವೀಕರಣ ಈ ಬಾರಿ ತಾಂತ್ರಿಕ ಹಾಗೂ ಮೂಲ ಸೌಲಭ್ಯದ ಕೊರತೆ ಕಾರಣಕ್ಕೆ ಸಕಾಲಕ್ಕೆ ಆಗದೆ ರೋಗಿಗಳು ತೊಂದರೆಗೆ ಸಿಲುಕಿದ್ದರು. ಆದರೆ ಇದೀಗ ಪರವಾನಗಿ ನವೀಕರಣವಾಗಿದ್ದು, ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಕೇಂದ್ರ ಸೇವೆಗೆ ಮುಕ್ತವಾಗಿದೆ. ಔಷಧ ನಿಯಂತ್ರಣ ಇಲಾಖೆ ಅಧಿಕಾರಿಗಳು ಕೇಂದ್ರಕ್ಕೆ ಭೇಟಿ ನೀಡಿ ಪರವಾನಗಿ ನವೀಕರಣಗೊಳಿಸಿದ್ದಾರೆ.
ಅಗತ್ಯ ಸೌಲಭ್ಯ, ನಿರ್ವಹಣೆ ಕೊರತೆ ಕಾರಣಕ್ಕೆ ಔಷಧ ನಿಯಂತ್ರಣ ಇಲಾಖೆ ಅಧಿಕಾರಿಗಳು ಕೇಂದ್ರದ ಕಾರ್ಯಚಟುವಟಿಕೆ ಸ್ಥಗಿತಗೊಳಿಸುವಂತೆ ಸೂಚಿಸಿದ್ದರು. ಇದರಿಂದ ಕಳೆದ 15–20 ದಿನದಿಂದ ಗರ್ಭಿಣಿಯರು, ರಕ್ತಹೀನತೆ, ಹಿಮೊಫಿಲಿಯಾ ಸೇರಿ ತುರ್ತು ರಕ್ತದ ಅವಶ್ಯಕತೆ ಇರುವ ರೋಗಿಗಳು ಖಾಸಗಿ ಕೇಂದ್ರಗಳತ್ತ ಮುಖ ಮಾಡಿದ್ದರು. ಅನೇಕ ಬಡ ರೋಗಿಗಳು ಆರ್ಥಿಕ ಸಮಸ್ಯೆ ಕಾರಣ ತೊಂದರೆಗೆ ಸಿಲುಕಿದ್ದರು.
ಕ್ಲಿಕ್ ಮಾಡಿ ಓದಿ: ನಿಮ್ಮ ಮನೆಗೆ ಕೊರಿಯರ್ ಬಂದರೆ ಎಚ್ಚರ | ಸ್ವೀಕರಿಸುವ ಮುನ್ನ ಯೋಚಿಸಿ
ಔಷಧ ನಿಯಂತ್ರಣ ಇಲಾಖೆ ಸೂಚಿಸಿದ ಎಲ್ಲ ನ್ಯೂನತೆ ಸರಿಪಡಿಸಿದ ಬಳಿಕ ಪತ್ರ ಬರೆದಿತ್ತು. ಈ ತಂಡ ಮೇ 21ಕ್ಕೆ ಪರಿಶೀಲನೆಗೆ ಆಗಮಿಸಬೇಕಿತ್ತು. ಆದರೆ ರೋಗಿಗಳ ಸಮಸ್ಯೆ ಅರಿತು ಮೇ 17ಕ್ಕೆ ಆಗಮಿಸಿ ಎಲ್ಲವನ್ನು ಪರಿಶೀಲಿಸಿ ಪರವಾನಗಿ ನವೀಕರಣಗೊಳಿಸಿದೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ ತಿಳಿಸಿದ್ದಾರೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
