
CHITRADURGA NEWS | 01 OCTOBER 2024
ಚಿತ್ರದುರ್ಗ: ಡಿ.ಸಿ.ಆರ್.ಜೆ. ಕಮ್ಯುಟೇಷನ್, ಗಳಿಕೆ ರಜೆ ನಗದೀಕರಣದ ಮೊತ್ತವನ್ನು 7ನೇ ವೇತನ ಆಯೋಗದ ಅನುಸಾರ ನೀಡಲು ಪರಿಷ್ಕøತ ಆದೇಶ ಹೊರಡಿಸುವಂತೆ ಕರ್ನಾಟಕ ನಿವೃತ್ತ ನೌಕರರ(Retired employees) ವೇದಿಕೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ವೃತ್ತದಲ್ಲಿ ಮಂಗಳವಾರ ಕಪ್ಪು ಪಟ್ಟಿ ಧರಿಸಿ ಧರಣಿ ನಡೆಸಲಾಯಿತು.
ಕ್ಲಿಕ್ ಮಾಡಿ ಓದಿ: Videography; ವೀಡಿಯೋಗ್ರಾಫಿ ತರಬೇತಿಗೆ ಅರ್ಜಿ ಆಹ್ವಾನ

ದಿನಾಂಕ : 1-7-2022 ರಿಂದ 31-7-2024 ರ ಅವಧಿಯಲ್ಲಿ ನಿವೃತ್ತರಾದ ನೌಕರರು ಏಳನೆ ವೇತನ ಆಯೋಗದ ಅನುಸಾರ ನಿವೃತ್ತಿ ಆರ್ಥಿಕ ಸೌಲಭ್ಯದಿಂದ ವಂಚಿತರಾಗಿದ್ದು, ಆರನೇ ವೇತನ ಆಯೋಗದಂತೆ ನಿವೃತ್ತಿ ಸೌಲಭ್ಯ ದೊರಕುತ್ತಿದೆ.
ಡಿ.ಸಿ.ಆರ್.ಜಿ. ಕಮ್ಯುಟೇಷನ್, ಗಳಿಕೆ ರಜೆ ನಗದೀಕರಣದ ಮೊತ್ತವನ್ನು ಏಳನೆ ವೇತನ ಆಯೋಗದ ಲೆಕ್ಕಾಚಾರದಂತೆ ನೀಡುವಂತೆ ನಿವೃತ್ತ ನೌಕರರು ತಮ್ಮ ಬೇಡಿಕೆಗಳನ್ನು ರಾಜ್ಯ ಸರ್ಕಾರದ ಮುಂದಿಟ್ಟರು.
ಕ್ಲಿಕ್ ಮಾಡಿ ಓದಿ: Horticulture Department; ತೋಟಗಾರಿಕೆ ಇಲಾಖೆಯಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ
ಕರ್ನಾಟಕ ನಿವೃತ್ತ ನೌಕರರ ವೇದಿಕೆ ರಾಜ್ಯ ಸಂಚಾಲಕ ಹೆಚ್.ಗೋವಿಂದಯ್ಯ, ಜಿಲ್ಲಾ ಸಂಚಾಲಕರುಗಳಾದ ಡಿ.ಟಿ.ಜಗನ್ನಾಥ್, ಸುಗೇಂದ್ರನಾಯ್ಕ, ನಾಗರಾಜಪ್ಪ, ಪದ್ಮಾವತಿ, ಬಿ.ಕೆ.ಹನುಮಂತಪ್ಪ, ನೀಲಕಂಠಾಚಾರ್, ಡಿ.ದಯಾನಂದ, ರಮೇಶ್ ಮಧುರಿ ಸೇರಿದಂತೆ ನೂರಾರು ನಿವೃತ್ತ ನೌಕರರು ಧರಣಿಯಲ್ಲಿ ಪಾಲ್ಗೊಂಡಿದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
