Connect with us

    ತಳ ಸಮುದಾಯ ಒಗ್ಗಟ್ಟಾಗಿದ್ದರೆ ಅಭಿವೃದ್ಧಿ ಸಾಧ್ಯ | ಈಶ್ವರಾನಂದಪುರಿ ಸ್ವಾಮಿಜಿ

    ಹೊಳಲ್ಕೆರೆ

    ತಳ ಸಮುದಾಯ ಒಗ್ಗಟ್ಟಾಗಿದ್ದರೆ ಅಭಿವೃದ್ಧಿ ಸಾಧ್ಯ | ಈಶ್ವರಾನಂದಪುರಿ ಸ್ವಾಮಿಜಿ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 21 MARCH 2025

    ಹೊಳಲ್ಕೆರೆ: ಕುರುಬರು ಕೂಡಿ ಬಾಳುಹುದನ್ನು ಕಲಿಯಬೇಕು, ತಳ ಸಮುದಾಯದವರು ಅಣ್ಣ, ತಮ್ಮಂದಿರಂತೆ ಒಗ್ಗಟ್ಟಾಗಿರಬೇಕು ಆಗ ಮಾತ್ರ ತಳ ಸಮಯದಾಯಗಳ ಏಳ್ಗೆ ಸಾಧ್ಯ ಎಂದು ಕನಕ ಗುರುಪೀಠ ಹೊಸದುರ್ಗ ಶಾಖಾ ಮಠದ ಶ್ರೀ ಈಶ್ವರಾನಂದ ಪುರಿ ಸ್ವಾಮಿಜಿ  ತಿಳಿಸಿದರು.

    Also Read: SSLC ಪರೀಕ್ಷೆಗೆ 943 ವಿದ್ಯಾರ್ಥಿಗಳು ಗೈರು | ಗುಲಾಬಿ ಹೂ ಕೊಟ್ಟು ಸ್ವಾಗತಿಸಿದ ಡಿಸಿ

    ತಾಲೂಕಿನ ತಾಳಿಕಟ್ಟೆ ಗ್ರಾಮದಲ್ಲಿ ನಡೆಯುತ್ತಿರುವ ಶ್ರೀ ಬೀರಲಿಂಗೇಶ್ವರ ಸ್ವಾಮಿ ( ಹಳ್ಳದ ಜಂಗಮ ) ತೋಪು ಜಾತ್ರೆಯ 5 ನೇ ದಿನವಾದ ಗುರುವಾರ ಸಂಜೆಯ ಕಾರ್ಯಕ್ರಮದಲ್ಲಿ ಸಾನಿದ್ಯವಹಿಸಿ ಮಾತನಾಡಿದರು.

    ಮಡಿವಾಳ ಸಮುದಾಯ ಅತ್ಯಂತ ಶ್ರೇಷ್ಟ ಸಮುದಾಯವಾಗಿದ್ದು, ಇಂದಿನ ದಿನಗಳಲ್ಲಿ ಅವರನ್ನು ಅತ್ಯಂತ ಕೀಳವಾಗಿ ಕಾಣುವಂತಹ ಪ್ರೌರುತ್ತಿಯನ್ನು ನಾವೆಲ್ಲರೂ ಇಂದು ನೋಡುತಿದ್ದೇವೆ.

     ಶ್ರೀ ಬೀರಲಿಂಗೇಶ್ವರ ಸ್ವಾಮಿ ದೇವಾಲಯದಿಂದ ಹೊರಬರಬೇಕಾದರೆ ಮಡಿವಾಳರು ಪಂಜು ಹಿಡಿದು ನಮಸ್ಕರಿಸಿ ಕರೆತರಬೇಕು, ಇದು ಎಲ್ಲಾ ದೇವರಿಗೂ ಸಲ್ಲುತ್ತದೆ ಅಂತಹ ಸಮಾಜವನ್ನು ನಾವು ಉನ್ನತಿಗೆ ಬೆಳೆಸಲು ಕೈ ಜೋಡಿಸಬೇಕು.

    Also Read: ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಮೀಸಲಾತಿ ಖಂಡಿಸಿ ಬಿಜೆಪಿ ಪ್ರತಿಭಟನೆ

    ಮಡಿವಾಳ ಗುರುಪೀಠದ ಶ್ರೀ ಬಸವ ಮಾಚೀದೇವ ಸ್ವಾಮೀಜಿ ಮಾತನಾಡಿ, ನಮ್ಮ ಹಿರಿಯರು ನಡೆಸಿಕೊಂಡು ಬಂದಿರುವ ಜಾತ್ರೆ, ಪರಿಸೆ, ತೋಪು ಜಾತ್ರೆಗಳು ಸಂಬಂದಗಳನ್ನು ಬೆಸೆಯುವ ಕೆಲಸ ಮಾಡುತ್ತವೆ.  ಸಾಮಾಜಿಕ ವ್ಯವಸ್ಥೆಯಲ್ಲಿ ಯಾವುದೇ ಹಳ್ಳಿ, ನಗರವಾಗಿರಲಿ ಕುಲ ಹದಿನೆಂಟು ಜಾತಿಗಳು ಇರಬೇಕು.

    ಅವುಗಳ ಕುಲ ಕಸುಬು, ವೃತ್ತಿ ಪರವಾದ, ಕಾಯಕ ಪ್ರಧಾನವಾದ ಕೆಲಸಗಳು ಆ ವ್ಯವಸ್ಥೆಯಡಿ ನಡೆಯಬೇಕು ಆಗ ಮಾತ್ರ ಆ ಹಳ್ಳಿ ಸ್ವರ್ಗಮಯವಾಗಿರುತ್ತದೆ. ಆಯಾ ಸಮುದಾಯಗಳ ಅವರವರ ಕಾಯಕವನ್ನು ಅಚ್ಚುಕಟ್ಟಾಗಿ ಮಾಡುವಂತಹ ಪ್ರೌರುತ್ತಿ ನಿರಂತರವಾಗಿರಬೇಕು.

    ಕುಲ ಹದಿನೆಂಟು ಜಾತಿಗಳನ್ನು ಗೌರವದಿಂದ ಕಂಡಾಗ ಮಾತ್ರ ಆ ಊರಿನ ಸ್ವಾತ್ಸವನ್ನು ಕಾಪಾಡಲು ಸಾಧ್ಯವಿದೆ ಎಂದರು.

    Also Read: ಮಾರುಕಟ್ಟೆ ಧಾರಣೆ | ಇಂದಿನ ಮೆಕ್ಕೆಜೋಳ, ಶೇಂಗಾ ರೇಟ್ ಎಷ್ಟಿದೆ?

    ವಿಚಾರ ಸಂಕಿರಣದಲ್ಲಿ ಹೊಸದುರ್ಗ ಗಿರಿದರ ತಿಮ್ಮಪ್ಪ ತಾಳಿಕಟ್ಟೆ ಪರಿಸರ ಶ್ರೀ ಬೀರದೇವರ ಪಥ ಪ್ರಭಾವ ಕುರಿತು, ಶಿಕ್ಷಕ ಕೆ. ಲಿಂಗೇಶ್ ಏಳೂರು ದೇವರ ಕಾಳಗ ಮೌಖಿಕ ಸಂಕಥನ ಕುರಿತು, ಬಾಗಲಕೋಟೆ ಡಾ. ವಿರೂಪಾಕ್ಷ ತೋಪು ಜಾತ್ರೆ ಆಚರಣೆಗಳು ಕುರಿತು ಉಪನ್ಯಾಸ ನೀಡಿದರು.

    ಹೊಸದುರ್ಗ ಕನಕದಾಸ ಮಹಿಳಾ ಸಮಾಜದ ವತಿಯಿಂದ ಕನಕದಾಸರ ನೃತ್ಯ ರೂಪಕಗಳನ್ನು ಪ್ರಸ್ತುತ ಪಡಿಸಲಾಯಿತು. ಸಾಣಿಹಳ್ಳಿ ಶಿವಕುಮಾರ ಕಲಾ ಸಂಘವು ಉರಿಲಿಂಗ ಪೆದ್ದಿ ನಾಟಕ ಪ್ರದರ್ಶಿಸಿತು. ಚಿತ್ರದುರ್ಗ ಹಾಸ್ಯ ಕವಿ ಜಗನ್ನಾಥ್ ರ ಹಾಸ್ಯ ಚಟಾಕಿಗಳು ಜನರನ್ನು ನಗೆಗಡಲಲ್ಲಿ ತೇಲಿಸಿದವು.

    Click to comment

    Leave a Reply

    Your email address will not be published. Required fields are marked *

    More in ಹೊಳಲ್ಕೆರೆ

    To Top