ಮುಖ್ಯ ಸುದ್ದಿ
DCC ಬ್ಯಾಂಕ್ ಅಧ್ಯಕ್ಷರಾಗಿ ಡಿ.ಸುಧಾಕರ್ ಅವಿರೋಧ ಆಯ್ಕೆ
CHITRADURGA NEWS | 23 SEPTEMBER 2024
ಚಿತ್ರದುರ್ಗ: ಜಿಲ್ಲೆಯ ಪ್ರತಿಷ್ಠಿತ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (DCC) ಅಧ್ಯಕ್ಷರಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಹಾಲಿ ಅಧ್ಯಕ್ಷರಾಗಿದ್ದ ಡಿ.ಸುಧಾಕರ್ ಮತ್ತೊಂದು ಅವಧಿಗೆ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಹೊಸದುರ್ಗದ ಎಚ್.ಬಿ.ಮಂಜುನಾಥ್ ಅವಿರೋಧವಾಗಿ ಆಯ್ಕೆ ಆಗಿದ್ದಾರೆ.
2004 ರಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಚುಕ್ಕಾಣಿ ಹಿಡಿದಿದ್ದ ಸುಧಾಕರ್ ಸತತ ನಾಲ್ಕು ಅವಧಿಗೆ ಅಂದರೆ 20 ವರ್ಷಗಳ ಕಾಲ ಅಧ್ಯಕ್ಷರಾಗಿ ದಾಖಲೆ ಬರೆದಿದ್ದಾರೆ.
12 ಜನ ನಿರ್ದೇಶಕರು:
ಡಿಸಿಸಿ ಬ್ಯಾಂಕಿನ 12 ನಿರ್ದೇಶಕರ ಸ್ಥಾನಗಳ ಪೈಕಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಚಳ್ಳಕೆರೆ ತಾಲ್ಲೂಕು ‘ಎ’ ಕ್ಷೇತ್ರದಿಂದ ಡಿ.ಸುಧಾಕರ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹೊಳಲ್ಕೆರೆ ತಾಲ್ಲೂಕು ‘ಎ’ ಕ್ಷೇತ್ರದಿಂದ ಎಸ್.ಆರ್.ಗಿರೀಶ್, ಕೃಷಿ ಪತ್ತಿನ ಸಹಕಾರ ಸಂಘ ಹಿರಿಯೂರು ತಾಲ್ಲೂಕು ‘ಎ’ ಕ್ಷೇತ್ರದಿಂದ ಓ.ಮಂಜುನಾಥ್, ತಾಲ್ಲೂಕು ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘಗಳ ‘ಬಿ’ ಕ್ಷೇತ್ರದಿಂದ ಹೆಚ್.ಬಿ.ಮಂಜುನಾಥ್, ನೇಕಾರಿಕೆ ಸಹಕಾರ ಸಂಘಗಳ ‘ಇ’ ಕ್ಷೇತ್ರದಿಂದ ಕೆ.ಜಗಣ್ಣ, ಪಟ್ಟಣ ಸಹಕಾರ ಬ್ಯಾಂಕುಗಳ ಮತ್ತು ವ್ಯವಸಾಯೇತರ ಪತ್ತಿನ ಸಹಕಾರ ಸಂಘಗಳ ‘ಸಿ’ ಕ್ಷೇತ್ರ ದಿಂದ ರಘುರಾಮ ರೆಡ್ಡಿ, ಹೊಸದುರ್ಗ ಮತ್ತು ಹೊಳಲ್ಕೆರೆ ತಾಲ್ಲೂಕುಗಳ ಹಾಲು ಉತ್ಪಾದಕರ ಸಹಕಾರ ಸಂಘಗಳ ‘ಡಿ’ಕ್ಷೇತ್ರದಿಂದ ಪಿ.ತಿಪ್ಪೇಸಾಮಿ ಆಯ್ಕೆಯಾಗಿದ್ದಾರೆ. ಅವಿರೋಧವಾಗಿ ಆಯ್ಕೆಯಾಗಿದ್ದರು.
ಸೆಪ್ಟೆಂಬರ್ 12 ರಂದು ನಡೆದ ಚುನಾವಣೆಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಚಿತ್ರದುರ್ಗ ತಾಲ್ಲೂಕು ‘ಎ’ ಕ್ಷೇತ್ರದಿಂದ ಹೆಚ್. ಎಂ.ದ್ಯಾಮಣ್ಣ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹೊಸದುರ್ಗ ತಾಲ್ಲೂಕು ‘ಎ’ ಕ್ಷೇತ್ರದಿಂದ
ಕೆ.ಆನಂತ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮೊಳಕಾಲ್ಲೂರು ತಾಲ್ಲೂಕು ‘ಎ’ ಕ್ಷೇತ್ರ ದಿಂದ ಹೆಚ್.ಟಿ.ನಾಗರೆಡ್ಡಿ, ಚಳ್ಳಕೆರೆ, ಹಿರಿಯೂರು ಮತ್ತು ಮೊಳಕಾಲೂರು ತಾಲ್ಲೂಕುಗಳ ಹಾಲು ಉತ್ಪಾದಕರ ಸಹಕಾರ ಸಂಘಗಳ ಡಿ.ಕ್ಷೇತ್ರದಿಂದ ಪಿ.ವಿನೋದಸ್ವಾಮಿ, ಇನ್ನಿತರೆ ಸಹಕಾರ ಸಂಘಗಳ ‘ಎಫ್’ ಕ್ಷೇತ್ರದಿಂದ ಎಂ.ನಿಶಾನಿ ಜಯಣ್ಣ ಗೆದ್ದಿದ್ದರು.