
CHITRADURGA NEWS | 5 AUGUST 2024
ಚಿತ್ರದುರ್ಗ: ಹತ್ತಿ ಖರೀಧಿಸಿದ ವರ್ತಕರು ಸಕಾಲಕ್ಕೆ ದಲ್ಲಾಲರಿಗೆ ಹಣ ನೀಡದ ಹಿನ್ನೆಲೆಯಲ್ಲಿ ಆಗಸ್ಟ್ 6 ರಿಂದ ಹತ್ತಿ ಮಾರುಕಟ್ಟೆ ನಡೆಸದಿರಲು ದಲ್ಲಾಲರ ಸಂಘ ತೀರ್ಮಾನಿಸಿದೆ.
ಇದನ್ನೂ ಓದಿ: ವಿವಿ ಸಾಗರದತ್ತ ಭದ್ರೆ ಪಯಣ | ಬೆಟ್ಟದಾವರೆ ಮೋಟರ್ ಪಂಪ್ ಚಾಲನೆ

ಚಿತ್ರದುರ್ಗ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ರೈತರಿಂದ ದಲ್ಲಾಲರು ಹತ್ತಿ ಖರೀಧಿಸಲಿದ್ದು, ಅವರಿಂದ ವರ್ತಕರು ಖರೀಧಿಸಿ ತೆಗೆದುಕೊಂಡು ಹೋಗುತ್ತಾರೆ. ಆದರೆ, ವರ್ತಕರು ದಲ್ಲಾಲರಿಗೆ ಸರಿಯಾದ ಸಮಯಕ್ಕೆ ಪೇಮೆಂಟ್ ಮಾಡದ ಹಿನ್ನೆಲೆಯಲ್ಲಿ ರೈತರಿಗೆ ಹಣ ಪಾವತಿಯಲ್ಲಿ ವಿಳಂಭವಾಗುತ್ತಿದೆ.
ಇದನ್ನೂ ಓದಿ: ಸಿರಿಗೆರೆ, ಸಾಣೇಹಳ್ಳಿ ಮಠಗಳಿಗೆ ಉತ್ತರಾಧಿಕಾರಿ ನೇಮಕಕ್ಕೆ ಭಕ್ತರ ಪಟ್ಟು | ಶಾಮನೂರು ಶಿವಶಂಕರಪ್ಪ ನೇತೃತ್ವದಲ್ಲಿ ನಡೆದ ಸಭೆ
ಈ ಸಂಬ0ಧ ಎಪಿಎಂಸಿ ಮಾರುಕಟ್ಟೆ ಕಾರ್ಯದರ್ಶಿಯವರ ಜೊತೆಗೂ ಚರ್ಚೆ ನಡೆಸಲಾಗಿತ್ತು. ಆದರೂ ಸಮಸ್ಯೆ ಬಗೆಹರಿಯದ ಹಿನ್ನೆಲೆಯಲ್ಲಿ ಆಗಸ್ಟ್ 6 ಅಂದರೆ ನಾಳೆಯಿಂದ ಚಿತ್ರದುರ್ಗದ ಹತ್ತಿ ಮಾರುಕಟ್ಟೆಯಲ್ಲಿ ಹತ್ತಿ ಖರೀಧಿ ನಡೆಸದಿರಲು ದಲ್ಲಾಲರ ಸಂಘ ತೀರ್ಮಾನ ತೆಗೆದುಕೊಂಡಿದೆ.
ಆದ್ದರಿ0ದ ರೈತರು ಆಗಸ್ಟ್ 6 ರಿಂದ ತಾವು ಬೆಳದ ಹತ್ತಿಯನ್ನು ಮಾರುಕಟ್ಟೆ ತರದಿರುವಂತೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
