
CHITRADURGA NEWS | 05 AUGUST 2024
ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆಯಡಿ ವಾಣಿವಿಲಾಸ ಸಾಗರ ಜಲಾಶಯಕ್ಕೆ ಲಿಫ್ಟ್ ಮೂಲಕ ನೀರು ಹಾಯಿಸುವ ಕಾರ್ಯ ಈ ಬಾರಿ ಮತ್ತೆ ಶುರುವಾಗಿದೆ. ಭಾನುವಾರ ರಾತ್ರಿ ಅಜ್ಜಂಪುರ ಸಮೀಪದ ಬೆಟ್ಟದಾವರೆ ಬಳಿಯ ಪಂಪ್ ಹೌಸ್ ಮೂಲಕ ಭದ್ರೆ ನೀರನ್ನು ಲಿಫ್ಟ್ ಮಾಡಿ ಕಾಲುವೆಗೆ ಬಿಡಲಾಯಿತು.
ಉದ್ದೇಶಿತ ವೇಳಾಪಟ್ಡಿ ಪ್ರಕಾರ ಆಗಸ್ಟ್ ಒಂದರಿಂದಲೇ ನೀರು ಲಿಫ್ಟ್ ಮಾಡಬೇಕಿತ್ತು. ಆದರೆ ಪಂಪ್‌ಹೌಸ್‌ಗೆ ವಿದ್ಯುತ್ ಸಮರ್ಪಕವಾಗಿ ಪೂರೈಕೆಯಾಗದ ಕಾರಣ ಅಡಚಣೆಯಾಗಿತ್ತು. ಹೈದರಾಬಾದ್‌ನಿಂದ ಬಂದ ತಂತ್ರಜ್ಞರು ಕಳೆದ ಎರಡು ದಿನದಿಂದ ದುರಸ್ತಿ ಕಾರ್ಯ ಕೈಗೊಂಡ ಪರಿಣಾಮ ಭಾನುವಾರ ರಾತ್ರಿ 8.30 ರ ವೇಳೆಗೆ ಮೋಟರ್ ಚಾಲನೆಯಾಗಿ ಭದ್ರೆ ಕಾಲುವೆಗೆ ಧುಮುಕಿದ್ದಾಳೆ.
ಇದನ್ನು ಓದಿ: ಮಲ್ಲಿಕಾರ್ಜುನ ಸ್ವಾಮೀಜಿ 30ನೇ ಸ್ಮರಣೋತ್ಸವ | ಒಂಟಿಕಂಬದ ಮಠದಲ್ಲಿ ಸಿದ್ಧತೆ
ಭದ್ರಾ ಜಲಾಶಯದಿಂದ ಎರಡು ಕಡೆ ನೀರು ಮೇಲೇತ್ತಿ ಕಾಲುವೆಗೆ ಬಿಡಲಾಗುತ್ತದೆ. ಶಾಂತಿಪುರದ ಬಳಿ ಮೊದಲ ಲಿಫ್ಟ್ ಇದ್ದರೆ ಮತ್ತೊಂದು ಬೆಟ್ಟದಾವರೆ ಬಳಿ ಇದೆ. ಏಕಕಾಲಕ್ಕೆ 2,800 ಕ್ಯೂಸೆಕ್ ನೀರು ಮೇಲೆತ್ತುವ ಸಾಮರ್ಥ್ಯದ ಮೋಟಾರು ಪಂಪ್‌ಗಳಿದ್ದರೂ ಕಾಮಗಾರಿ ಪೂರ್ಣ ಗೊಳ್ಳದ ಕಾರಣ ಒಂದೇ ಮೋಟರ್ ಚಾಲನೆ ಮಾಡಿ 750 ಕ್ಯೂಸೆಕ್ ನೀರನ್ನು ಮಾತ್ತ ಕಾಲುವೆಗೆ ಹರಿಸಲಾಗುತ್ತಿದೆ. ಸೋಮವಾರ ರಾತ್ರಿ ಭದ್ರೆ ವಿವಿ ಸಾಗರ ಜಲಾಶಯ ಸೇರುವ ನಿರೀಕ್ಷೆ ಇದೆ. ಸತತ ಒಂದು ತಿಂಗಳು ನೀರು ಲಿಫ್ಟ್ ಮಾಡಿದರೆ 1.8 ಟಿಎಂಸಿ ಯಷ್ಟು ನೀರು ವಿವಿ ಸಾಗರ ಜಲಾಶಯ ಸೇರುತ್ತದೆ.
ಭದ್ರಾ ಮೇಲ್ದಂಡೆ ಮುಖ್ಯ ಎಂಜಿನಿಯರ್ ಫಕೀರಪ್ಪ ಹರಿಶ್ಚಂದ್ರ ಲಮಾಣಿ, ಸೂಪರಿಂಟೆಂಡೆಂಟ್ ಎಂಜಿನಿಯರ್ ಕವಿತಾ ಈ ವೇಳೆ ಖುದ್ದು ಹಾಜರಿದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
