ಮುಖ್ಯ ಸುದ್ದಿ
SSLC ವಿದ್ಯಾರ್ಥಿಗಳೊಂದಿಗೆ ಸಂವಾದ | ಶಾಸಕ ಕೆ.ಸಿ.ವೀರೇಂದ್ರ (ಪಪ್ಪಿ) ಭಾಗೀ

CHITRADURGA NEWS | 18 MARCH 2025
ಚಿತ್ರದುರ್ಗ: ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಪರೀಕ್ಷಾ ಪೂರ್ವ ಸಿದ್ದತೆ ಕುರಿತು ಶನಿವಾರ ಆಯೋಜಿಸಿದ್ದ ಆನ್‌ಲೈನ್ ಸಂವಾದ ಕಾರ್ಯಕ್ರಮದಲ್ಲಿ ಶಾಸಕ ಕೆ.ಸಿ.ವೀರೇಂದ್ರ (ಪಪ್ಪಿ) ಭಾಗವಹಿಸಿದ್ದರು.
Also Read: ವೈದ್ಯರ ಮನೆಯಲ್ಲಿ ಕಳ್ಳತನ | ಮನೆಯ ಬೀಗ ಮುರಿದ ಕಳುವು
ಈ ವೇಳೆ ವಿದ್ಯಾರ್ಥಿಗಳೊಂದಿಗೆ ಮಾತನಾಡಿ, ಆತ್ಮವಿಶ್ವಾಸದಿಂದ ಪರೀಕ್ಷೆ ಬರೆದು ಉತ್ತಮ ಫಲಿತಾಂಶ ಪಡೆದು ಜಿಲ್ಲೆಗೆ ಕೀರ್ತಿ ತರಬೇಕು ಎಂದು ಹೇಳಿದರು.
ಪರೀಕ್ಷೆಗೆ ಭಯ ಪಡದೆ ಪ್ರಾಮಾಣಿಕವಾಗಿ ಆತ್ಮವಿಶ್ವಾಸದಿಂದ ಪರೀಕ್ಷೆ ಬರೆದು ಉತ್ತಮ ಫಲಿತಾಂಶ ಪಡೆಯಲು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಬಿಇಓ ಎಸ್. ನಾಗಭೂಷಣ್ ಮಾತನಾಡಿ, ತಾಲೂಕಿನಲ್ಲಿ 22 ಪರೀಕ್ಷಾ ಕೇಂದ್ರಗಳಿದ್ದು ಎಲ್ಲ ಕೇಂದ್ರಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ತಾಲೂಕು, ಜಿಲ್ಲೆ ಮತ್ತು ರಾಜ್ಯ ಹಂತದಲ್ಲಿ ವೆಬ್‌ಕಾಸ್ಟಿಂಗ್ ನಡೆಯಲಿದೆ.
ಚಿತ್ರದುರ್ಗ ತಾಲೂಕಿನಲ್ಲಿ ಮೊದಲ ಬಾರಿಗೆ ಜನಪ್ರತಿನಿಧಿಗಳೊಂದಿಗೆ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮವನ್ನು ಆನ್‌ಲೈನ್‌ನಲ್ಲಿ ನಡೆಸುತ್ತಿದ್ದು ಸಂತಸ ತಂದಿದೆ ಎಂದರು.
Also Read: ಸಾಲದ ಶೂಲಕ್ಕೆ ಇಂಜಿನಿಯರ್ ಬಲಿ | ಬೆಂಗಳೂರಿನಲ್ಲಿ ಚಿತ್ರದುರ್ಗ ಮೂಲದ ಮಹಿಳೆ ಸಾವು
ಬಿ.ಆರ್.ಸಿ ಸಂಪತ್‌ಕುಮಾರ್, ಜಿಲ್ಲಾ ಸಾಕ್ಷರತಾ ಅಧಿಕಾರಿ ಮಂಜುಳಾ, ಇಸಿಓ ಕೆ.ಆರ್.ಲೋಕೇಶ್, ವಿನುತಾರಾಣಿ, ಮೂರ್ತಾಚಾರ್, ಮಲ್ಲಿಕಾರ್ಜುನ್, ಅಂಜನಪ್ಪ, ರಮೇಶ್‌ರೆಡ್ಡಿ, ರವೀಂದ್ರನಾಥ್, ಸಮೀರಾ, ಶಿಕ್ಷಕ ನಾಗರಾಜ್, ಕಚೇರಿ ಆಧೀಕ್ಷಕ ಸಾಯಿಪ್ರಸಾದ್ ಮತ್ತಿತರರಿದ್ದರು.
