CHITRADURGA NEWS | 11 JANUARY 2026
ಚಿತ್ರದುರ್ಗ: ಕಾಂಗ್ರೆಸ್ಸಿಗರು ಗಾಂಧೀಜಿ ಹೆಸರಿನ ಮೇಲೆ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಇಂದಿರಾ ಗಾಂಧಿ, ರಾಜೀವ್ ಗಾಂಧಿ ಹೆಸರಿನಲ್ಲಿ ಹಲವು ಯೋಜನೆ ರೂಪಿಸುವಾಗ ಇವರಿಗೆ ಮಹಾತ್ಮ ಗಾಂಧೀಜಿ ನೆನಪಾಗಲಿಲ್ಲ ಎಂದು ಮಾಜಿ ಡಿಸಿಎಂ ಹಾಗೂ ಸಂಸದ ಗೋವಿಂದ ಕಾರಜೋಳ ಪ್ರಶ್ನಿಸಿದರು.
ಚಿತ್ರದುರ್ಗ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ಗಾಂಧೀಜಿ ಬಗ್ಗೆ ಕಾಳಜಿ ಇಲ್ಲ. ತೋರಿಕೆಗೆ ಮಾತ್ರ ಅವರ ಹೆಸರು ಬಳಕೆ ಮಾಡಿಕೊಳ್ಳುತ್ತಿದೆ. ಅವರ ಕಾಳಜಿ ಇರುವುದೆಲ್ಲಾ ಸೋನಿಯಾ ಹಾಗೂ ರಾಹುಲ್ ಗಾಂಧಿ ಮೇಲೆ ಎಂದರು.
READ ALSO: ತಳುಕಿನಲ್ಲಿ ರಾತ್ರಿ ಅಂಗಡಿಗಳನ್ನು ದೋಚಿದ ಕಳ್ಳರು | ಲಕ್ಷಾಂತರ ಮೌಲ್ಯದ ಸರಕು ಕಳುವು
ಮಹಾತ್ಮ ಗಾಂಧೀಜಿ ಹೆಸರಿನಲ್ಲಿರುವ ಎಲ್ಲರೂ ನಕಲಿ ಗಾಂಧಿಗಳೇ. ಅವರ ಹೆಸರು ಉಳಿಸುವ ಬದಲು ಅಳಿಸಲು ಕೆಲಸ ಮಾಡುತ್ತಿದ್ದಾರೆ. ಗಾಂಧೀಜಿಗೂ ಇವರಿಗೂ ಯಾವುದೇ ಸಂಬಂಧ ಇಲ್ಲ ಎಂದು ವಾಗ್ದಾಳಿ ಮಾಡಿದರು.
ಗಾಂಧೀಜಿ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಸಂದರ್ಭದಲ್ಲಿ ಸ್ವರಾಜ್ಯ ಹಾಗೂ ಗ್ರಾಮಗಳ ಅಭಿವೃದ್ಧಿಯ ಕನಸು ಕಂಡಿದ್ದರು. ಈ ಕನಸನ್ನು ಇಂದಿನ ಪ್ರಧಾನಿ ನರೇಂದ್ರ ಮೋದಿ ಅವರು ಸಾಕಾರ ಮಾಡುತ್ತಿದ್ದಾರೆ. ಇದನ್ನು ಸಹಿಸಲು ಆಗದ ಕಾಂಗ್ರೆಸ್ಸಿಗರು ವಿನಾ ಕಾರಣ ಅಪಪ್ರಚಾರದಲ್ಲಿ ತೊಡಗಿದಿದ್ದಾರೆ ಎಂದರು.
READ ALSO: ಮತ್ತೊಂದು ಕಾರು ಅಪಘಾತ ಇಬ್ಬರು ಸ್ಥಳದಲ್ಲೇ ಸಾವು | ಕೊಲ್ಲಾಪುರ Dysp ಪ್ರಯಾಣಿಸುತ್ತಿದ್ದ ಕಾರು
ಕೇಂದ್ರ ಸರ್ಕಾರ ಜಾರಿ ಮಾಡಲು ಹೊರಟಿರುವ ಯೋಜನೆ ಇವರಿಗೆ ನುಂಗಲಾರದ ತುತ್ತಾಗಿದೆ. ಕೇಂದ್ರ ಸರ್ಕಾರ ಈ ಯೋಜನೆಗೆ ಹಣವನ್ನು ನೀಡುತ್ತಿದೆ. ಬಳಕೆಯಾದ ಮೇಲೆ ಅದಕ್ಕೆ ಸಂಬಂಧಪಟ್ಟ ಲೆಕ್ಕಗಳನ್ನು ಕೇಂದ್ರಕ್ಕೆ ನೀಡಬೇಕು. ಆದರೆ, ಈವರೆಗೆ ಲೆಕ್ಕ ನೀಡದೆ ನಕಲಿ ಬಿಲ್ ತಯಾರಿಸಿ ಲೂಟಿ ಹೊಡೆಯುತ್ತಿದ್ದರು. ಇದರಿಂದ ಜನಸಾಮಾನ್ಯರಿಗೆ ಅನುಕೂಲ ಆಗಿಲ್ಲ ಎಂದು ವಿವರಿಸಿದರು.
ವಿಬಿ-ರಾಮ್ ಜಿ ಯೋಜನೆಯಡಿ 125 ಉದ್ಯೋಗ:
ಈ ಹಿಂದೆ ನರೇಗಾದಲ್ಲಿ 100 ದಿನಕ್ಕೆ ಇದ್ದ ಕೂಲಿ ದಿನಗಳನ್ನು 125 ದಿನಕ್ಕೆ ಹೆಚ್ಚಳ ಮಾಡಲಾಗಿದೆ. ಕೂಲಿಯ ಮೊತ್ತವನ್ನು ಹೆಚ್ಚಿಸಲಾಗಿದೆ. ಕೂಲಿ ಮಾಡಿದವರಿಗೆ ಮಧ್ಯವರ್ತಿಗಳ ಸಹಾಯವಿಲ್ಲದೇ ವಾರದ ಕೊನೆಯಲ್ಲಿ ಹಣ ಖಾತೆಗೆ ಜಮಾವಣೆ ಆಗಲಿದೆ. ಒಂದು ಕಾಮಗಾರಿ ಕೈಗೆತ್ತಿಕೊಂಡರೆ ಅದು ಪೂರ್ಣಗೊಳ್ಳುವವರೆಗೆ ನಿಲ್ಲುವುದಿಲ್ಲ ಎಂದು ಯೋಜನೆಯ ವಿವರಗಳನ್ನು ನೀಡಿದರು.
ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಹೆಸರಿನಲ್ಲಿ ಒಂದು ಯೋಜನೆಗೂ ತಮ್ಮ ಹೆಸರು ಇಟ್ಟುಕೊಂಡಿಲ್ಲ. ಎಲ್ಲದಕ್ಕೂ ಸರ್ಕಾರದ ಹೆಸರಿಡಲಾಗಿದೆ. ವಿಕಸಿತ ಭಾರತಕ್ಕೆ ಪೂರಕ ವಿಬಿ-ಜಿ ರಾಮ್ ಜಿ ಎಂಬ ಯೋಜನೆ ಜಾರಿಗೊಳಿಸಿ, ಭ್ರಷ್ಟಾಚಾರ ತಡೆ, ಆಸ್ತಿ ನಿರ್ಮಾಣ, ಗ್ರಾಮೀಣ ನಿಜವಾದ ಬಡವರಿಗೆ ಕೂಲಿ ಕೊಡಲು ಅನುಕೂಲ ಆಗುವ ಹೊಸ ವ್ಯವಸ್ಥೆ ಜಾರಿಗೆ ತಂದಿದ್ದಾರೆ ಎಂದರು.
READ ALSO: ಹಿರಿಯೂರು ಬಳಿ ಭೀಕರ ಅಪಘಾತ | ನಾಲ್ವರು ಯುವಕರು ಮೃತ | ಕಾರು – ಲಾರಿ ನಡುವೆ ಡಿಕ್ಕಿ
ಸುದ್ದಿಗೋಷ್ಟಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ಪ್ರಧಾನ ಕಾರ್ಯದರ್ಶಿಗಳಾದ ಸಂಪತ್ ಕುಮಾರ್, ಸುರೇಶ್ ಸಿದ್ದಾಪುರ, ಖಂಜಾಚಿ ಮಾಧುರಿ ಗೀರಿಶ್, ಮಾಜಿ ಅಧ್ಯಕ್ಷ ಎ.ಮುರಳಿ, ಮುಖಂಡರಾದ ಅನಿತ್‍ಕುಮಾರ್, ನಗರಾಧ್ಯಕ್ಷ ಲೋಕೇಶ್, ವಕ್ತಾರ ನಾಗರಾಜ್ ಬೇದ್ರೇ ಇದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
