CHITRADURGA NEWS | 03 NOVEMBER 2024
ಚಿತ್ರದುರ್ಗ: ನಗರದ ಮುರುಘಾ ಮಠ(murugha math)ದಲ್ಲಿ ಚನ್ನಬಸವಣ್ಣನವರ ಜಯಂತಿ ಆಚರಿಸಲಾಯಿತು, ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿ ಅವರು ಚನ್ನಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಕ್ಲಿಕ್ ಮಾಡಿ ಓದಿ: ಡಾಲಿ ಕೈ ಹಿಡಿಯುವ ಡಾಕ್ಟರ್ ಚಿತ್ರದುರ್ಗದವರು | ಮುಂದುವರೆದ ಚಿತ್ರದುರ್ಗದ ಸಿನಿಮಾ ನಂಟು..
ಈ ವೇಳೆ ಮಾತನಾಡಿದ ಶ್ರೀ ಗಳು, ಇಂದಿನ ವಿಜ್ಞಾನ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಮಾನವನ ದೇಹ ರಚನೆ ಮತ್ತು ಅದರ ಕಾರ್ಯನಿರ್ವಹಣೆಗೆ ಸಂಬಂಧಿಸಿದ ಸಂಶೋಧನೆಗಳಲ್ಲಿ ಹೊಸ ಹೊಸ ಆವಿಷ್ಕಾರಗಳು ನಡೆಯುತ್ತಿರುವುದು ಗೊತ್ತೇ ಇದೆ.
ಇಂಥ ಸಂಶೋಧನೆಯನ್ನು ಕಳೆದ 900 ಸಾವಿರ ವರ್ಷಗಳ ಹಿಂದೆಯೇ ದೇಹ ರಚನೆ ಮತ್ತದರ ಕಾರ್ಯನಿರ್ವಹಣೆ ವಿಧಾನಗಳ ಬಗ್ಗೆ ಕೂಲಂಕಷ ಅಧ್ಯಯನ ಮಾಡಿ, ಎಳೆವಯಸ್ಸಿನಲ್ಲಿ ಅವುಗಳ ಬಗ್ಗೆ ಅಗಾಧವಾದ ಪಾಂಡಿತ್ಯವನ್ನು ವಚನಗಳ ಮೂಲಕ ಅರಿವು ಮೂಡಿಸಿದವರೆಂದರೆ ಅವಿರಳಜ್ಞಾನ, ಷಟಸ್ಥಲ ಚಕ್ರವರ್ತಿ ಎಂದೇ ಶರಣತಿಂಥಿಣಿಯೊಳಗೆ ಗುರುತಿಸಿಕೊಂಡಿದ್ದ ಚನ್ನಬಸವಣ್ಣನವರು ಎಂದರು.
ಇಂಥ ಪರಮಜ್ಞಾನಿಗಳ ಜಯಂತಿ ಇಂದು ಹೆಚ್ಚು ಪ್ರಸ್ತುತವಾಗಿದ್ದು, ಅರಿವು ಮತ್ತು ಜ್ಞಾನದ ಸಂಗಮವಾಗಿದ್ದ ಚನ್ನಬಸವಣ್ಣನವರು ಕೋಟಿಗೊಬ್ಬರಾದರೂ ಅಥವಾ ವಿರಳಾತಿ ವಿರಳ ಎಂದರೂ ತಪ್ಪಲ್ಲ. ಅವರೊಬ್ಬ ಭರತಖಂಡ ಕಂಡ ಮಹಾ ಮೇಧಾವಿ ಎಂದು ಬಣ್ಣಿಸಿದರು.
ಕ್ಲಿಕ್ ಮಾಡಿ ಓದಿ: lake: 2 ದಶಕದ ನಂತರ ಕೋಡಿಬಿದ್ದ ಚಳ್ಳಕೆರೆಯ ಅಜ್ಜನಕೆರೆ | ಬಾಗೀನ ಅರ್ಪಣೆ
ದಾವಣಗೆರೆ ವಿರಕ್ತಮಠದ ಡಾ.ಬಸವ ಪ್ರಭುಸ್ವಾಮಿಗಳು ಮಾತನಾಡಿದರು.
ಶ್ರೀ ಮುರುಘೇಂದ್ರ ಸ್ವಾಮಿಗಳು ವಚನ ಪ್ರಾರ್ಥನೆ ಹಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಪ್ರಾಧ್ಯಾಪಕ ಆನಂದ್ ಸ್ವಾಗತಿಸಿದರು. ಉಪನ್ಯಾಸಕ ನವೀನ್ ಮಸ್ಕಲ್ ನಿರೂಪಿಸಿ ಶರಣು ಸಮರ್ಪಿಸಿದರು.
ಕ್ಲಿಕ್ ಮಾಡಿ ಓದಿ: ವಿವಿ ಸಾಗರ ಜಲಾಶಯದಲ್ಲಿ 28 ಟಿಎಂಸಿ ನೀರು ಸಂಗ್ರಹ
ಅ.ಭಾ.ಲಿಂ. ಸಭಾದ ಬಸವರಾಜ ಕಟ್ಟಿ, ನಿವೃತ್ತ ಪ್ರಾಚಾರ್ಯ ಎಸ್.ಎಂ. ಕೊಟ್ರೇಶಪ್ಪ, ಜಾಲಿಕಟ್ಟೆ ರುದ್ರಪ್ಪ, ರಮೇಶ್ ಕೆ.ಎಂ., ಬಸವರಾಜ ಗಡ್ಡೆಪ್ಪ, ಎಂ.ಜಿ.ಕೊಟ್ರೇಶ್, ನಿಟುವಳ್ಳಿ ಮಹಾಂತೇಶ್, ಬಸವನಗೌಡ, ಆರೋಗ್ಯ ಇಲಾಖೆಯ ಮಂಜುನಾಥ, ಸೇರಿದಂತೆ ವಿದ್ಯಾಪೀಠದ ನೌಕರರು ಹಾಗು ವಿದ್ಯಾರ್ಥಿಗಳು ಭಾಗವಹಿಸಿದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
