ಚಿತ್ರದುರ್ಗ ನ್ಯೂಸ್:
ಶ್ರೀ ರಾಘವೇಂದ್ರ ಗುರು ಸಾರ್ವಭೌಮರ 352 ನೇ ಆರಾಧನಾ ಪಂಚರಾತ್ರೋತ್ಸವಕ್ಕೆ ಗುರುವಾರದಿಂದ ವೈಭವದ ಚಾಲನೆ ದೊರೆತಿದೆ. ನಗರದ ಚಿಕ್ಕಪೇಟೆಯಲ್ಲಿರುವ ಶ್ರೀ ಮಧ್ವಾಚಾರ್ಯ ಮೂಲ ಸಂಸ್ಥಾನ ನಂಜನಗೂಡು ರಾಘವೇಂದ್ರ ಸ್ವಾಮಿಗಳ ಬೃಂದಾವನ ಸನ್ನಿಧಾನದಲ್ಲಿ ಮಂತ್ರ ಘೋಷಗಳು ಮೊಳಗಿದವು. ಸ್ವಾಮಿಯನ್ನು ವಿವಿಧ ಬಗೆಯ ಪುಷ್ಪಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು.

ಬೃಂದಾವನ ಸನ್ನಿಧಾನದಲ್ಲಿ ಮೊದಲನೇ ದಿನದ ಪೂರ್ವಾರಾಧನೆಯ ಧಾರ್ಮಿಕ ಕಾರ್ಯಕ್ರಮವೂ ಅತ್ಯಂತ ವೈಭವದಿಂದ ನೆರವೇರಿತು. ಆರಾಧನಾ ಸಮಯದಲ್ಲಿ ಮಠದಲ್ಲಿದ್ದ ಭಕ್ತರು ಪಠಿಸಿದ ‘ಮೂಲರಾಮೋ ವಿಜಯತೇ, ಗುರುರಾಜೋ ವಿಜಯತೇ, ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ’ ಶ್ಲೋಕ ಭಕ್ತಿಲೋಕವನ್ನು ಸೃಷ್ಟಿಸಿತು.
ಬ್ರಾಹ್ಮಣ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಎಸ್.ಮಂಜುನಾಥ್ ಬುಧವಾರ ಸಂಜೆ ಧ್ವಜಾರೋಹಣ ನೆರವೇರಿಸುವ ಮೂಲಕ ಪಂಚರಾತ್ರೋತ್ಸವಕ್ಕೆ ಚಾಲನೆ ನೀಡಿದ್ದರು. ಗೋಪೂಜೆ, ಧನ–ಧಾನ್ಯ ಪೂಜೆ, ಲಕ್ಷ್ಮಿ ಪೂಜೆ, ಸ್ವಸ್ತಿ ವಾಚನ, ಮಹಾಮಂಗಳಾರತಿ ನಡೆದವು. ಗುರುವಾರ ಗುರುಸಾರ್ವಭೌಮರ ಪೂರ್ವಾರಾಧನೆ ನಡೆಯಿತು. ಮುಂಜಾನೆ 5.30ಕ್ಕೆ ಪ್ರಾರಂಭವಾದ ಪೂಜಾ ಕಾರ್ಯಗಳು ರಾತ್ರಿವರೆಗೂ ನಿರಂತರವಾಗಿ ನಡೆದವು. ಸ್ವಾಮೀಗೆ ನಿರ್ಮಾಲ್ಯ, ಅμÉ್ಟೂೀತ್ತರ ಸಹಿತ ಫಲಪಂಚಾಮೃತ ಅಭಿμÉೀಕ, ಉತ್ಸವರಾಯರ ಪಾದಪೂಜೆ, ಕನಕಾಭಿμÉೀಕ ನಡೆದವು. ಮಧ್ಯಾಹ್ನ ನೈವೇದ್ಯ, ಅಲಂಕಾರ ಪಂಕ್ತಿ, ಹಸ್ತೋದಕದ ಬಳಿಕ ಮಹಾಮಂಗಳಾರತಿ ನೆರವೇರಿಸಿ ತೀರ್ಥಪ್ರಸಾದ ವಿತರಿಸಲಾಯಿತು. ರಾತ್ರಿ ರಜತ ರಥೋತ್ಸವ, ಸ್ವಸ್ತಿವಾಚನ, ಅμÁ್ವವಧಾನ, ಮಹಾಮಂಗಳಾರತಿ ನಡೆಯಿತು. ಪಾಂಡುರಂಗ ಭಜನಾ ಮಂಡಳಿಯಿಂದ ಭಜನೆ, ಸಿಂಧೂರ ದರ್ಶನ್ ಮತ್ತು ಸೌಂದರ್ಯ, ಸಂಗೀತ ತಂಡ ಭರತನಾಟ್ಯ ಪ್ರದರ್ಶಿಸಿತು.
ರಾಯರ ಜತೆಗೆ ಶ್ರೀಕೃಷ್ಣ, ಪಾಂಡುರಂಗ, ಆಂಜನೇಯ ಸ್ವಾಮಿಗೂ ಅಲಂಕರಿಸಲಾಗಿತ್ತು. ಲೋಕ ಕಲ್ಯಾಣಾರ್ಥವಾಗಿ ಶ್ರೀಮಠದಿಂದ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ರಾಯರ ನೂರಾರು ಭಕ್ತರು ಪಾಲ್ಗೊಂಡು ಇμÁ್ಟರ್ಥ ಈಡೇರಿಸಬೇಕು ಎಂದು ಪ್ರಾರ್ಥಿಸಿದರು.
ಸೆ.1ರಂದು ಗುರುಸಾರ್ವಭೌಮರ ಮಧ್ಯಾರಾಧನೆ, ಸಂಜೆ 5 ರಿಂದ 6 ರವರೆಗೆ ಬ್ರಹ್ಮಚೈತನ್ಯ ಭಜನಾ ಮಂಡಳಿಯಿಂದ ಭಜನೆ. 6.30 ರಿಂದ 7.30 ರವರೆಗೆ ಅಂಜನಾ ನೃತ್ಯ ಕಲಾ ಕೇಂದ್ರದ ನಂದಿನಿ ಶಿವಪ್ರಕಾಶ್ ಅವರಿಂದ ಭರತನಾಟ್ಯ ನಡೆಯಲಿದೆ.
ಸೆ.2 ರಂದು ಗುರುಸಾರ್ವಭೌಮರ ಉತ್ತರಾರಾಧನೆ, ಬೆಳಿಗ್ಗೆ 10 ಗಂಟೆಗೆ ನಗರದ ರಾಜಬೀದಿಗಳಲ್ಲಿ ಮಹಾ ರಥೋತ್ಸವ, ಸಂಜೆ 5 ರಿಂದ 6 ರವರೆಗೆ ಸಪ್ತಗಿರಿ ಭಜನಾ ಮಂಡಳಿಯಿಂದ ಭಜನೆ. 6.30 ರಿಂದ 7.30 ರವರೆಗೆ ಹರಿಹರದ ಫಲ್ಗುಣಿ ಕಲಾತಂಡದಿಂದ ನೃತ್ಯ, ಸ್ತುತಿ ಆರ್.ರಾವ್ ಇವರಿಂದ ದಾಸವಾಣಿ. ಸೆ.3 ರಂದು ಸುಜ್ಞಾನೇಂದ್ರತೀರ್ಥರ ಆರಾಧನೆ, ಪವಮಾನ ಹೋಮ, ಸರ್ವಸಮರ್ಪಣೋತ್ಸವ. ಸಂಜೆ 5 ರಿಂದ 6 ರವರೆಗೆ ಸರಸ್ವತಿ ಭಜನಾ ಮಂಡಳಿಯಿಂದ ಭಜನೆ. 6.30 ರಿಂದ 7.30 ರವರೆಗೆ ಸಂಧ್ಯಾ ಜೈಶಂಕರ್ ತಾಳ್ಯ ಇವರಿಂದ ದಾಸವಾಣಿ ಕಾರ್ಯಕ್ರಮ ನಡೆಯಲಿದೆ.
(ಚಿತ್ರದುರ್ಗ ಜಿಲ್ಲೆಯ ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ. https://chat.whatsapp.com/HOKagK96PgX5hCdhvtFLfw)
(ಚಿತ್ರದುರ್ಗದ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ Facebook page follow ಮಾಡಿ https://www.facebook.com/chitradurganews?mibextid=ZbWKwL)


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
