
CHITRADURGA NEWS | 17 DECEMBER 2025
ಚಿತ್ರದುರ್ಗ: ಒಳಮೀಸಲಿನಲ್ಲಿ ಮತ್ತೇ ಒಳಮೀಸಲು ಮಾಡಿರುವುದು ಭೋವಿ, ಬಂಜಾರ, ಕೊರಮ, ಕೊರಚ ಸಮುದಾಯಗಳಿಗೆ ಸರ್ಕಾರ ಮಾಡಿದ ಅನ್ಯಾಯವಾಗಿದೆ ಹಾಗಾಗಿ ಕರ್ನಾಟಕ ಅಧಿಸೂಚಿತ ಜಾತಿಗಳ (ಉಪ-ವರ್ಗೀಕರಣ) ವಿಧೇಯಕ 2025 ನ್ನು ಹಿಂಪಡೆಯಬೇಕು ಎಂದು ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಒತ್ತಾಯಿಸಿದರು.
ಭೋವಿ ಗುರುಪೀಠದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೀಸಲಾತಿಯಲ್ಲಿ ಒಳಮೀಸಲು ವಿಭಜಿಸುವ ಅಧಿಕಾರ ರಾಜ್ಯ ಸರ್ಕಾರಕ್ಕಿದೆ ಎಂದು ಸುಪ್ರಿಂ ಕೋರ್ಟ್ ನಿರ್ದೇಶನವಿದೆ. ಆದರೆ, ವಿಭಜನೆ ಮಾಡುವಲ್ಲಿ ವ್ಯತ್ಯಾಸಗಳಾಗಿವೆ ಎಂದರು.
ಇದನ್ನೂ ಓದಿ: ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೊಲೀಸರ ದಾಳಿ | ಇಬ್ಬರು ಮಹಿಳೆಯರ ರಕ್ಷಣೆ
ಕರ್ನಾಟಕ ಅಧಿಸೂಚಿತ ಜಾತಿಗಳ (ಉಪ-ವರ್ಗೀಕರಣ) ವಿಧೇಯಕ 2025 ರಲ್ಲಿ ಅಸಂಬದ್ಧವಾಗಿ ವರ್ಗಿಕರಿಸಿರುವ ಉಪ ವರ್ಗಿಕರಣವನ್ನು ಈ ಕೂಡಲೇ ಹಿಂಪಡೆಯಬೇಕು.
ಒಳ ಮೀಸಲಾತಿಯನ್ನು ಕಲ್ಪಿಸುವ ಸರ್ಕಾರದ ಉದ್ದೇಶ ಈಡೇರಬೇಕಾದರೆ ಜಾತಿವಾರು ಉಪ ವರ್ಗಿಕರಣವನ್ನು ಜನಸಂಖ್ಯೆಗೆ ಅನುಗುಣವಾಗಿ ಮಾಡಬೇಕಾಗಿತ್ತು, ಆದರೆ ಜನಸಂಖ್ಯೆಗನುಗುಣವಾಗಿ ಮಾಡುವಲ್ಲಿ, ಸರ್ಕಾರದಿಂದ ಲೋಪವಾಗಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಮನವಿ ಮೂಲಕ ತಿಳಿಸಲಾಗಿತ್ತು. ಆದರೆ, ಸರ್ಕಾರ ನಾವು ತಿಳಿಸಿದ ಲೋಪಗಳನ್ನು ಸರಿಪಡಿಸಲಿಲ್ಲ ಮತ್ತು ಕರ್ನಾಟಕ ಅನುಸೂಚಿತ ಜಾತಿಗಳ ವಿಧೇಯಕ 2025 ರಲ್ಲಿ ಮತ್ತೊಮ್ಮೆ ಅಸಂಬದ್ಧವಾಗಿ ಪ್ರವರ್ಗ-ಸಿ ಯನ್ನು ವಿಂಗಡಿಸಿರುವುದು ಸರಿಯಲ್ಲ, ಇದನ್ನು ಖಂಡಿಸುತ್ತೇವೆ. ಎಂದರು.
ಇದನ್ನೂ ಓದಿ: ಉದ್ಯೋಗಿನಿ, ಚೇತನ, ಧನಶ್ರೀ ಇನ್ನಿತರ ಯೋಜನೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ
ರಾಜ್ಯದಲ್ಲಿ ಶೇ.5 ರಷ್ಟು ಇರುವ ಸಮುದಾಯಕ್ಕೆಶೇ.4 ರಷ್ಟು ಮೀಸಲು ಸರಿ ಆಗುವುದಿಲ್ಲ ಎನ್ನುವ ಕಾರಣಕ್ಕೆ ಅಲೆಮಾರಿಗಳನ್ನು ಸೇರಿಸಿ ಶೇ.1 ರಷ್ಟು ಮೀಸಲಾತಿ ಸೇರಿಸಲಾಗಿದೆ. ಆದರೆ, ಇದರಿಂದ ಅಲೆಮಾರಿಗಳಿಗೆ ಅನ್ಯಾಯ ಆಗಲಿದೆ ಎಂದು ಸರ್ಕಾರದ ಗಮನಕ್ಕೆ ತರಲಾಗಿತ್ತು ಎಂದರು.
ರಾಜ್ಯದಲ್ಲಿ ಶೇ.18 ರಷ್ಟು ಪರಿಶಿಷ್ಟರು ರಾಜ್ಯದಲ್ಲಿದ್ದು, ಶೇ.17 ರಷ್ಟು ಮೀಸಲುಕೊಡಲಾಗಿದೆ. ಈಗ ಸರ್ಕಾರ ಮಂಡನೆ ಮಾಡಿರುವ ವಿಧೇಯಕ 2025 ರ ಪುಟ 7 ರಲ್ಲಿ ಪರಂತು ಅನುಸೂಚಿತ ಜಾತಿಗಳ ಪ್ರವರ್ಗ-ಸಿ ಪಟ್ಟಿಯ ಸಂದರ್ಭದಲ್ಲಿ ಮೇಲಿನ ಕೋಷ್ಠಕದ ಕ್ರಮ ಸಂಖ್ಯೆ:10, 15, 36, 37 ನಮೂದಿಸಲಾದ (ಅಂದರೆ ಜಾತಿ ಸಂಕೇತ 17, 23, 53 ಮತ್ತು 54) ಇವುಗಳನ್ನು ಹೊರತುಪಡಿಸಿ 59 ಜಾತಿಗಳಿಗಾಗಿ ಪ್ರತಿ ಐದು ಹುದ್ದೆಗಳು ಅಥವಾ ಸ್ಥಾನಗಳ ಪೈಕಿ ಕನಿಷ್ಠ ಒಂದನ್ನು ಪ್ರವರ್ಗ-ಸಿ ಯೊಳಗೆ ಮೀಸಲಿರಿಸತಕ್ಕದ್ದು ಎಂದು ಅಂಗೀಕರಿಸಲಾಗಿದೆ. ಇದನ್ನು ಮಾರ್ಪಡಿಸಿ ಭೋವಿ ಸಂಬಂಧಿತ ಜಾತಿಗಳು, ಲಂಬಾಣಿ ಸಂಬಂಧಿತ ಜಾತಿಗಳು, ಕೊರಚ ಸಂಬಂಧಿತ ಜಾತಿಗಳು, ಕೊರಮ ಸಂಬಂಧಿತ ಜಾತಿಗಳಿಗೆ ನೀಡಿರುವ ಸಿ-ವರ್ಗದ 5%ರಷ್ಟು ಮೀಸಲಾತಿಯನ್ನು ಮುಂದುವರೆಸಬೇಕು.
ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಕೇಸ್ | ನ್ಯಾಯಾಲಯಕ್ಕೆ ಹಾಜರಾದ ತಂದೆ – ತಾಯಿ
ಭೋವಿ ಬಂಜಾರ ಕೊರಮ ಕೊರಚ ಜಾತಿಗಳು ಶೇಖಡ 5% ಮತ್ತು ಅಲೆಮಾರಿಗಳು 1% ಜನಸಂಖ್ಯೆ ಇರುವುದರಿಂದ, ರಾಜ್ಯದ ಜನಸಂಖ್ಯೆಯ 6 ಕೋಟಿ ಜನಸಂಖ್ಯೆಯಲ್ಲಿ 1 ಕೋಟಿ 8 ಲಕ್ಷ ಜನಸಂಖ್ಯೆ ಅರ್ಥಾತ್ ಶೇ 18% ಪರಿಶಿಷ್ಟ ಜಾತಿ ಜನಸಂಖ್ಯೆ ಇದೆ. ಜನಸಂಖ್ಯಾ ಅನುಗುಣವಾಗಿ ಶೇಖಡ 17% ಬದಲು ಶೇಖಡ 18% ಹೆಚ್ಚಿಸಬೇಕು.ಪರಿಶಿಷ್ಟ ಜಾತಿ ಜನಸಂಖ್ಯಾವಾರು ಶೇಖಡ 18% ಹೆಚ್ಚಿಸಿ ಪರಿಶಿಷ್ಚಜಾತಿಯ ಸಿ ಗುಂಪಿನಲ್ಲಿರುವ ಭೋವಿ, ಬಂಜಾರ, ಕೋರಮ, ಕೊರಚ ಅಲೆಮಾರಿ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸಬೇಕು ಎಂದರು.
ಅವಶ್ಯಕತೆ ಹಾಗೂ ಬೇಡಿಕೆ ಬಂದಲ್ಲಿ ಬರುವ ದಿನಗಳಲ್ಲಿ SC-C ಗುಂಪಿನಲ್ಲಿ ಜನಸಂಖ್ಯಾವಾರು ಪ್ರತ್ಯೆಕ ಗುಂಪು ರಚಿಸಲು ಅವಕಾಶ ಕಲ್ಪಿಸಿ. ನ್ಯಾ.ನಾಗಮೋಹನ ದಾಸ ವರದಿಯಲ್ಲಿ ನೀಡಿರುವ ಸಮೀಕ್ಷೆ ವರದಿ ಪ್ರಕಾರ ಭೋವಿ ಸಮುದಾಯವೇ ಹೆಚ್ಚಿನ ಮೀಸಲಾತಿ ವಂಚಿತ ಸಮುದಾಯ ಎಂದು ಗುರುತಿಸಿರುವುದನ್ನು ಪರಿಗಣಿಸಿ ವಿಶೇಷ ಸೌಲಭ್ಯ ಒದಗಿಸಲು ಸರ್ಕಾರ ಕ್ರಮವಹಿಸಬೇಕು ಎಂದರು.
ಇದನ್ನೂ ಓದಿ: ಚಿತ್ರದುರ್ಗ ಮಾರುಕಟ್ಟೆಯಲ್ಲಿ ಇಂದಿನ ಹತ್ತಿ ರೇಟ್ ಎಷ್ಟಿದೆ?
ಸುದ್ದಿಗೋಷ್ಠಿಯಲ್ಲಿ ಸಮುದಾಯದ ಮುಖಂಡರಾದ ಎಚ್.ಆನಂದಪ್ಪ, ಎಚ್.ಆಂಜನೇಯ, ವೀರಭದ್ರಪ್ಪ,ಡಿ.ಸಿ.ಮೋಹನ್, ಇ.ಮಂಜುನಾಥ್, ಎಚ್.ಲಕ್ಷ್ಮಣ, ಗೌನಹಳ್ಳಿ ಗೋವಿಂದಪ್ಪ ಇದ್ದರು.
ಪ್ರತ್ಯೇಕ ಮಾಡಿ ಮೀಸಲಾತಿ ಕೊಡಿ
ಒಳಮೀಸಲಾತಿಯಲ್ಲಿ ಎಸ್.ಸಿ.-3ರಲ್ಲಿ ಮತ್ತೆ ಒಳಮೀಸಲಾತಿ ಮಾಡಿರುವುದು ಅನ್ಯಾಯ. ಮೀಸಲಾತಿ ಪ್ರಮಾಣ ಶೇ.17 ಬದಲು ಶೇ.18 ಹೆಚ್ಚಳ ಮಾಡಬೇಕು. ಭೋವಿ ಬಂಜಾರ ಕೊರಮ ಕೊರಚ ಸಮುದಾಯಗಳಿಗೆ ಜನಸಂಖ್ಯಾವಾರು ಶೇಖಡ ಶೇ.5 ಮೀಸಲು ನೀಡಬೇಕು. ಅಲೆಮಾರಿಗಳಿಗೆ ನೇರವಾಗಿ ಶೇ.1 ಮೀಸಲು ನೀಡಬೇಕು. ಭೋವಿ ಸಮುದಾಯವನ್ನು ಪ್ರತ್ಯೇಕಿಸಿ ಜನಸಂಖ್ಯಾವಾರು ಮೀಸಲು ನೀಡಬೇಕು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
