CHITRADURGA NEWS | 31 JANUARY 2026
ಹೊಸದುರ್ಗ: ರೈತರ ಜಮೀನಿನಲ್ಲಿದ್ದ ವಿದ್ಯುತ್ ಪರಿವರ್ತಕ(ಟ್ರಾನ್ಸ್‌ಫಾರ್ಮಾರ್) ಬದಲಾಯಿಸಿಕೊಡಲು ಲಂಚದ ಬೇಡಿಕೆ ಇಟ್ಟಿದ್ದ ಬೆಸ್ಕಾಂ ಎಸ್‌ಓ ಲಂಚ ಸ್ವೀಕರಿಸುವಾಗ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.

ಹೊಸದುರ್ಗ ತಾಲೂಕು ಮಾಡದಕೆರೆ ಬೆಸ್ಕಾಂ ಸೆಕ್ಷನ್ ಆಫೀಸರ್ ಮಧು ಲೋಕಾಯುಕ್ತ ಬಲೆಗೆ ಬಿದ್ದಿರುವ ಅಧಿಕಾರಿ.
ಇದನ್ನೂ ಓದಿ:ಅಡಿಕೆ ಧಾರಣೆ | 31 ಜನವರಿ | ರಾಜ್ಯದಲ್ಲಿ ಇಂದಿನ ಅಡಿಕೆ ರೇಟ್
ಮಾಡದಕೆರೆ ಸಮೀಪದ ನಾಗಯ್ಯನಹಟ್ಟಿ ಗ್ರಾಮದ ರಾಮಚಂದ್ರಪ್ಪ ಮತ್ತಿತರೆ ರೈತರು 10-15 ವರ್ಷಗಳಿಂದ ಟ್ರಾನ್ಸ್ ಫಾರ್ಮರ್ ಅನ್ನು ಬೆಸ್ಕಾಂ ಅನುಮತಿಯ ಮೇರೆಗೆ ಪಕ್ಕದ ಜಮೀನಿನ ಕಾಟಪ್ಪ ಅವರ ಜಮೀನಿನಲ್ಲಿ ಅಳವಡಿಸಿಕೊಂಡಿದ್ದರು.
ಸದರಿ ಟ್ರಾನ್ಸ್ ಫಾರ್ಮರ್ ಜನವರಿ 22 ರಂದು ಸುಟ್ಟು ಹೋಗಿತ್ತು. ಅಕ್ಕಪಕ್ಕದ 04 ಜಮೀನುಗಳ ರೈತರು ಮಾಡದಕೆರೆ ಬೆಸ್ಕಾಂ ಕಛೇರಿಯ ಸೆಕ್ಷನ್ ಆಫೀಸರ್ ಮಧು ಅವರನ್ನು ಭೇಟಿಯಾಗಿ ಟ್ರಾನ್ಸ್‌ಫಾರ್ಮರ್ ಬದಲಾಯಿಸಿಕೊಡುವಂತೆ ಕೇಳಿದ್ದಾರೆ.
ಇದನ್ನೂ ಓದಿ:ಮಾರುಕಟ್ಟೆ ಧಾರಣೆ | ಜನವರಿ 31 | ಹತ್ತಿ ರೇಟ್ ಎಷ್ಟಿದೆ?
ಈ ವೇಳೆ ಮಧು, ಟ್ರಾನ್ಸ್ ಫಾರ್ಮಗ್ರಗಳು ಖಾಲಿಯಾಗಿವೆ, ಇನ್ನು ಒಂದು ವಾರ ಬಿಟ್ಟು ಬನ್ನಿ ಎಂದು ಹೇಳಿದ್ದಾರೆ. ಜನವರಿ 30 ರಂದು ರಾಮಚಂದ್ರಪ್ಪ ಎಸ್‌ಓ ಮಧು ಅವರಿಗೆ ಪೋನ್ ಮಾಡಿ ಟ್ರಾನ್ಸ್‌ಫಾರ್ಮರ್ ಕುರಿತು ವಿಚಾರಿಸಿದ್ದಾರೆ. ಆಗ ಅಧಿಕಾರಿ, ಬೇರೆ ಯಾವುದೋ ಟ್ರಾನ್ಸ್‌ಫಾರ್ಮರ್ ಇದೆ, ಅದನ್ನು ನಿಮಗೆ ಕೊಡುತ್ತೇನೆ. ಇದಕ್ಕಾಗಿ ತಲಾ 1 ಸಾವಿರದಂತೆ 4 ಸಾವಿರ ಕೊಡಿ ಎಂದು ಕೇಳಿದ್ದಾರೆ.
ರೈತರೆಲ್ಲಾ ಸೇರಿ ತಲಾ 700 ರಂತೆ 3 ಸಾವಿರ ಕೂಡಿಸಿ ಎಂದು ಲಂಚದ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಈ ಕುರಿತ ಆಡಿಯೊ ಸಂಭಾಷಣೆಗಳನ್ನು ರೆಕಾರ್ಡ್ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಕೀಟನಾಶಕ ಬಳಕೆ ಕೊನೆಯ ಅಸ್ತ್ರವಾಗಲಿ | ಸಮಗ್ರ ಕೃಷಿ ಪದ್ಧತಿ ಆದ್ಯತೆಯಾಗಲಿ | ಕೃಷಿ ಇಲಾಖೆ ಜೆಡಿ ಮಂಜುನಾಥ
ಲಂಚ ಕೊಡಲು ಇಷ್ಟವಿಲ್ಲದ ರೈತರು ಲೋಕಾಯುಕ್ತ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಅದರಂತೆ ಜ.31 ಶನಿವಾರ ಮಾಡದಕೆರೆ ಬೆಸ್ಕಾಂ ಕಚೇರಿ ಜೂನಿಯರ್ ಇಂಜಿನಿಯರ್ ಎನ್.ಮಧು, ಕರ್ತವ್ಯ ನಿರ್ವಹಿಸುತ್ತಿದ್ದ ಬೆಸ್ಕಾಂ ಕಛೇರಿಯಲ್ಲೇ ರಾಮಚಂದ್ರಪ್ಪ ಅವರಿಂದ 3 ಸಾವಿರ ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದು, ಆರೋಪಿತರನ್ನು ಬಂಧಿಸಲಾಗಿದೆ.
ಇದನ್ನೂ ಓದಿ:ನಾಳೆ ಕೋಟೆನಾಡಿನಲ್ಲಿ ಬೃಹತ್ ಉದ್ಯೋಗ ಮೇಳ | 100ಕ್ಕೂ ಹೆಚ್ಚು ಕಂಪನಿಗಳು ಭಾಗಿ
ಮುಂದಿನ ತನಿಖೆಯನ್ನು ಲೋಕಾಯುಕ್ತ ಪೊಲೀಸ್ ನಿರೀಕ್ಷಕರಅದ ಬಸವರಾಜ ಬಿ. ಲಮಾಣಿ ಕೈಗೊಂಡಿದ್ದಾರೆ. ಚಿತ್ರದುರ್ಗ ಕಛೇರಿಯ ಪೊಲೀಸ್ ಅಧೀಕ್ಷಕರಾದ ಎನ್.ವಾಸುದೇವರಾಮ ಅವರ ಮಾರ್ಗದರ್ಶನದಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪೊಲೀಸ್ ಉಪಾಧೀಕ್ಷಕ ಎನ್.ಮೃತ್ಯುಂಜಯ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಟ್ರ್ಯಾಪ್ ಮಾಡುವ ವೇಳೆ ದಾವಣಗೆರೆ ಲೋಕಾಯುಕ್ತ ಕಛೇರಿಯ ಪೊಲೀಸ್ ನಿರೀಕ್ಷಕರಾದ ಪ್ರಭು ಸೂರಿನ್, ಚಿತ್ರದುರ್ಗ ಲೋಕಾಯುಕ್ತ ಠಾಣಾ ಪೊಲೀಸ್ ಸಿಬ್ಬಂದಿಗಳಾದ ಹೆಚ್.ಶ್ರೀನಿವಾಸ, ಎಸ್.ಆರ್.ಪುಷ್ಪ, ಎಲ್.ಜಿ.ಸತೀಶ, ಮಂಜುನಾಥ, ಎಂ.ವೀರೇಶ್, ಕೆ.ಟಿ.ಮಾರುತಿ, ಆರ್.ವೆಂಕಟೇಶ್ ಕುಮಾರ್, ಡಿ.ಮಾರುತಿ, ಎನ್.ಎಲ್. ಶ್ರೀಪತಿ ಇದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
