
CHITRADURGA NEWS | 25 DECEMBER 2024
ಚಿತ್ರದುರ್ಗ: ಕೋಟೆನಾಡಿನಲ್ಲಿ ಪ್ರವಾಸಿಗರಿಗೆ ವಿಶೇಷ ತಾಣವಾಗಿರುವ ಆಡುಮಲ್ಲೇಶ್ವರ ಮೃಗಾಲಯದಲ್ಲಿ ಒಂದು ವಿಶಿಷ್ಟ BIRTHDAY ಆಚರಣೆಯನ್ನು ಆಡುಮಲ್ಲೇಶ್ವರ ಮೃಗಾಲಯ ಸಿಬ್ಬಂದಿಗಳು ಆಚರಣೆ ಮಾಡಿದ್ದಾರೆ.
ಕ್ಲಿಕ್ ಮಾಡಿ ಓದಿ: ಆಡುಮಲ್ಲೇಶ್ವರದಲ್ಲಿ ಜನಿಸಿದ ಮುದ್ದಾದ ಕರಡಿ ಮರಿಗಳಿಗೆ ಚಂದದ ನಾಮಕರಣ | ಈ ಕರಡಿ ಮರಿಗಳ ಹೆಸರು ಕೇಳಿದರೇ ನೀವು ವಾವ್ ಅಂತೀರಿ..

ಹೌದು ಈ BIRTHDAY ಆಚರಣೆ ಯಾರದು ಎಂದು ತಿಳಿದುಕೊಳ್ಳುವ ಕಾತುರವೇ ಆಗಿದ್ದಾರೆ ಈ ಕೆಳಗೆ ಓದಿ…..
ಚಿತ್ರದುರ್ಗದ ಆಡುಮಲ್ಲೇಶ್ವರ ಮೃಗಾಲಯದಲ್ಲಿ ಸೀತಮ್ಮ ಎಂಬ ಕರಡಿಯನ್ನು ಮೃಗಾಲಯ ಸಿಬ್ಬಂದಿಗಳು ಸಾಕುತಿದ್ದರು, ಈ ಸೀತಮ್ಮ ಕರಡಿ ಕಳೆದ 2022 ಡಿಸೆಂಬರ್ 24 ರಂದು ತನ್ನ ಎರಡು ಹೆಣ್ಣು ಮರಿಗಳಿಗೆ ಜನ್ಮ ನೀಡಿತ್ತು.
ಮೃಗಾಲಯ ಸಿಬ್ಬಂದಿಗಳು ಈ ಎರಡು ಮರಿಗಳಿಗೆ ಭಾನು, ಭೂಮಿ ಎಂದು ನಾಮಕರಣ ಮಾಡಿದ್ದರು.
ಕ್ಲಿಕ್ ಮಾಡಿ ಓದಿ: ಆಡುಮಲ್ಲೇಶ್ವರ ಮೃಗಾಲಯದಲ್ಲಿ ಕರಡಿ ಮರಿಗಳ ಕಲರವ
ಡಿಸೆಂಬರ್ 24 ರಂದು ಈ ಕರಡಿ ಮರಿಗಳ ಜನ್ಮದಿನಚರಣೆಯನ್ನು ಚಿತ್ರದುರ್ಗದ ಆಡುಮಲ್ಲೇಶ್ವರ ಮೃಗಾಲಯದ ಅಧಿಕಾರಿ, ಸಿಬ್ಬಂದಿಗಳು ಆಚರಿಸಿದ್ದಾರೆ. ಅವುಗಳನ್ನ ಮೃಗಾಲಯದ ಸಿಬ್ಬಂದಿ ತಮ್ಮ ಮನೆಯ ಮಕ್ಕಳಂತೆ ಜೋಪಾನ ಮಾಡಿದ್ದಾರೆ.
ಇಂದಿಗೆ ಈ ಎರಡೂ ಮುದ್ದಾದ ಕರಡಿ ಮರಿಗಳಿಗೆ ಎರಡನೇ ವರ್ಷದ ಹುಟ್ಟುಹಬ್ಬದ ಸಂಭ್ರಮವಾಗಿದೆ.
ಕ್ಲಿಕ್ ಮಾಡಿ ಓದಿ: ವಿದ್ಯಾರ್ಥಿನಿಗೆ ಥಳಿಸಿದ್ದ ಶಿಕ್ಷಕ ಅಮಾನತು
ಈ ಸಂಭ್ರಮದಲ್ಲಿ ಮೃಗಾಲಯದ RFO ಅಕ್ಷತಾ, ಸೇರಿದಂತೆ ಸಿಬ್ಬಂದಿಳು ಬರ್ತಡೆ ಆಚರಿಸಲು ನಿರ್ಧರಿಸಿದ್ದು, ಪ್ರವಾಸಿಗರನ್ನ ಒಳಗೊಂಡಂತೆ ಕೇಕ್ ಕತ್ತರಿಸುವ ಮೂಲಕ ಭೂಮಿ, ಬಾನುಗೆ ಬರ್ತಡೇ ವಿಶ್ ಮಾಡಿದ್ದಾರೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
