CHITRADURGA NEWS | 12 FEBRUARY 2024
ಚಿತ್ರದುರ್ಗ: ಹಿರಿಯೂರು ತಾಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಯುಷ್(ಯುನಾನಿ) ಚಿಕಿತ್ಸಾ ವಿಭಾಗ ಪ್ರಾರಂಭ ಮಾಡಲಾಗಿದೆ.

ರಾಷ್ಟ್ರೀಯ ಯುನಾನಿ(ಆಯುಷ್) ದಿನಾಚರಣೆಯ ಅಂಗವಾಗಿ ಫೆಬ್ರವರಿ 12 ಸೋಮವಾರ ಹಿರಿಯೂರು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಹೊಸ ವಿಭಾಗ ಕಾರ್ಯಾರಂಭ ಮಾಡಿದೆ.
ಇದನ್ನೂ ಓದಿ: ನಾಯಕನಹಟ್ಟಿ ಬಂದ್ಗೆ ಸಂಘಟನೆಗಳ ಬೆಂಬಲ
ತಾಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಕುಮಾರ್ ನಾಯ್ಕ್ ಆಯುಷ್ (ಯುನಾನಿ) ವಿಭಾಗ ಉದ್ಘಾಟಿಸಿದರು.
ಈ ವೇಳೆ ಜಿಲ್ಲಾ ಆಯುಷ್ ಅಧಿಕಾರಿಗಳಾದ ಡಾ.ಎಸ್.ಚಂದ್ರಕಾಂತ್ ನಾಗಸಮುದ್ರ ಮಾತನಾಡಿ, ಆಯುಷ್ ಪದ್ಧತಿಯಾದ ಯುನಾನಿಯೂ ಒಂದು ಉತ್ತಮ ವೈದ್ಯಪದ್ಧತಿಯಾಗಿದ್ದು, ಮಂಗಳವಾರ ಹಾಗೂ ಗುರುವಾರ ಈ ಆಸ್ಪತ್ರೆಗೆ ಯುನಾನಿ ವೈದ್ಯ ಡಾ.ಜಿಯಾ ಉರ್ ರೆಹಮಾನ್ ಆಗಮಿಸಲಿದ್ದಾರೆ. ಸಾರ್ವಜನಿಕರು ಇದರ ಪೂರ್ಣ ಪ್ರಯೋಜನ ಪಡೆಯಬೇಕು ಎಂದು ಕರೆ ನೀಡಿದರು.
ಇದನ್ನೂ ಓದಿ: 280 ಮೀಟರ್ ಡಿವೈಡರ್ ತೆರವು | ಮುನ್ನೆಲೆಗೆ ಬಂದ ರಸ್ತೆ ವಿಸ್ತರಣೆ
ಕಾರ್ಯಕ್ರಮದಲ್ಲಿ ವೈದ್ಯಾಧಿಕಾರಗಳಾದ ಡಾ. ಟಿ.ಶಿವಕುಮಾರ್, ಡಾ.ಜಿಯಾ ಉರ್ ರೆಹಮಾನ್ ಆಯುಷ್ ಸಿಬ್ಬಂದಿ ಬಸವರಾಜ್ ಇದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
