ಕ್ರೈಂ ಸುದ್ದಿ
Police: ಮಂಜುನಾಥ್ ಕೊಲೆ ಆರೋಪಿಗಳ ಬಂಧನ | ಭರಮಸಾಗರ ಪೊಲೀಸರ ಕಾರ್ಯಾಚರಣೆ

CHITRADURGA NEWS | 01 DECEMBER 2024
ಚಿತ್ರದುರ್ಗ: ಪ್ರೇಮ ವಿವಾಹ ಮಾಡಿಕೊಂಡು ಯುವತಿಯ ಮನೆಯವರಿಂದಲೇ ಭೀಕರವಾಗಿ ಕೊಲೆಯಾಗಿದ್ದ ತಾಲೂಕಿನ ಕೋಣನೂರು ಮಂಜುನಾಥ್ ಕೊಲೆ ಆರೋಪಿಗಳನ್ನು ಪೊಲೀಸರು (Police) ಬಂಧಿಸಿದ್ದಾರೆ.
ಕೋಣನೂರು ಗ್ರಾಮದ ಮಂಜುನಾಥ್ ಅದೇ ಗ್ರಾಮದ ರಕ್ಷಿತಾ ಎಂಬ ಯುವತಿಯನ್ನು ಪ್ರೀತಿಸಿ, ನಾಯಕನಹಟ್ಟಿ ಸಮೀಪದ ಹೊಸಗುಡ್ಡದ ದೇವಸ್ಥಾನದಲ್ಲಿ ಈಚೆಗೆ ಮದುವೆಯಾಗಿದ್ದ.

ಇದನ್ನೂ ಓದಿ: ಪ್ರೀತಿಸಿ ಮದುವೆಯಾಗಿದ್ದಕ್ಕೆ ಬಿತ್ತು ಹೆಣ | ಭೀಕರವಾಗಿ ಕೊಲೆಯಾದ ಯುವಕ
ಇದರಿಂದ ಅಸಮಧಾನಗೊಂಡಿದ್ದ ಯುವತಿಯ ಪೋಷಕರು, ನ.27 ರಂದು ಸಂಜೆ ಮಂಜುನಾಥ್ ಮನೆಗೆ ನುಗ್ಗಿ ಹಲ್ಲೆ ನಡೆಸಿ ಹತ್ಯೆ ನಡೆಸಿದ್ದ ಬಗ್ಗೆ ದೂರು ದಾಖಲಾಗಿತ್ತು.
ಈ ಸಂಬಂಧ 19 ಜನರ ವಿರುದ್ಧ ಎಫ್‍ಐಆರ್ ದಾಖಲಾಗಿದ್ದು, ಈವರೆಗೆ 8 ಜನರನ್ನು ಬಂಧಿಸಲಾಗಿದೆ.
ಇದನ್ನೂ ಓದಿ: ಕೊಲೆಯಾದ ಮಂಜುನಾಥ್ ಜೈಲಿಗೂ ಹೋಗಿ ಬಂದಿದ್ದ | ಬೇರೊಂದಿದೆ ಪ್ರೇಮ್ ಕಹಾನಿ
ಪ್ರಕರಣದಲ್ಲಿ ನ.28 ರಂದು ಆರೋಪಿಗಳಾದ ಎ6 ದಿವ್ಯಾ, ಪ್ರಸನ್ನಕುಮಾರ, ಎ9 ಕಾವ್ಯ, ಎ13 ಶಂಕ್ರಮ್ಮ, ಎ12 ಬಸವರಾಜಪ್ಪ, ಎ18 ಹರೀಶ ಅವರನ್ನು ಬಂಧಿಸಲಾಗಿತ್ತು.
ನ.30 ರಂದು ಎ1 ಜಗದೀಶ, ಎ5 ವಿಶ್ವನಾಥ ಹಾಗೂ ಎ14 ಅಳಗವಾಡಿ ಶಂಕ್ರಪ್ಪ ಅವರನ್ನು ಉಡುಪಿಯಲ್ಲಿ ಪತ್ತೆ ಮಾಡಿ ಬಂಧಿಸಿ ಕರೆತರಲಾಗಿದೆ. ಸದರಿ ಪ್ರಕರಣದಲ್ಲಿ ಉಳಿದ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ.
ಇದನ್ನೂ ಓದಿ: ಕೊಳಾಳು ಕೆಂಚಾವಧೂತರ ಕಾರ್ತಿಕ ಮಹೋತ್ಸವ | ಇಂದು ರಾತ್ರಿ 8 ರಿಂದ ಅಖಂಡ ಭಜನೆ
ಆರೋಪಿಗಳ ಪತ್ತೆಗಾಗಿ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಹೆಚ್ಚುವರಿ ಪೆÇಲೀಸ್ ಅಧೀಕ್ಷಕ ಎಸ್.ಜೆ.ಕುಮಾರಸ್ವಾಮಿ ಮಾರ್ಗದರ್ಶನ ಹಾಗೂ ಡಿವೈಎಸ್‍ಪಿ ಪಿ.ಕೆ.ದಿನಕರ್ ನಿರ್ದೇಶನದಲ್ಲಿ ತಂಡ ರಚನೆಯಾಗಿತ್ತು.
ಸಿಪಿಐ ಪಿ.ಪ್ರಸಾದ್ ನೇತೃತ್ವದಲ್ಲಿ ಪಿಎಸ್‍ಐ ಗಳಾದ ಸುರೇಶ, ಬಸವರಾಜ, ಸಿಬ್ಬಂದಿಗಳಾದ ಯಹ್ಯಾಖಾನ್, ಯತೀಶ, ಎಂ.ಜೆ.ಶಿವಕುಮಾರ್. ಬಿ.ಕೆ.ಜ್ಯೋತಿ. ಎನ್.ಬಿ.ಮುಬೀನಾ, ಆರ್.ಸಿದ್ದೇಶ ಕೆ.ಬಿ.ಶಿವರಾಜ್, ಹಳೆಮನೆ ಮಂಜಪ್ಪ, ತಿಪ್ಪೇಶ, ಹೆಚ್.ಎಂ.ಅಣ್ಣಪ್ಪ, ಬಿ.ಎನ್.ಶಿವಕುಮಾರ, ಕಲ್ಲೇಶ.ಎಸ್. ಶ್ರೀನಿವಾಸ.ಟಿ.ಆರ್. ಎಚ್.ಸುಜಾತ ಅವರನ್ನೊಳಗೊಂಡ ತಂಡ ಈ ಕಾರ್ಯಾಚರಣೆ ನಡೆಸಿತ್ತು.
