
CHITRADURGA NEWS | 12 SEPTEMBER 2025
ಚಿತ್ರದುರ್ಗ: ಚಿತ್ರದುರ್ಗ ಗ್ರಾಮಾಂತರ ಮಂಡಲದ ಅಧ್ಯಕ್ಷ ಕೆ.ನಾಗರಾಜ್ ಗ್ರಾಮಾಂತರ ಮಂಡಲಕ್ಕೆ ವಿವಿಧ ಪದಾಧಿಕಾರಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ: ಎತ್ತಿನ ಗಾಡಿಗೆ ಡಿಕ್ಕಿಯಾಗಿ ಹಳ್ಳಕ್ಕೆ ಬಿದ್ದ ಬಸ್ | ಅಪಾಯದಿಂದ ಪಾರಾದ ಪ್ರಯಾಣಿಕರು
ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ಮಾಜಿ ಶಾಸಕ ಜಿ.ಎಚ್.ತಿಪ್ಪಾರರೆಡ್ಡಿ ಅವರ ಮಾರ್ಗದರ್ಶನದಲ್ಲಿ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.
ಉಪಾಧ್ಯಕ್ಷರಾಗಿ 7, ಪ್ರಧಾನ ಕಾರ್ಯದರ್ಶಿಗಳಾಗಿ 2, ಕಾರ್ಯದರ್ಶಿಗಳಾಗಿ 6, ಕೋಶಾಧ್ಯಕ್ಷರಾಗಿ 1 ನೇಮಕ ಮಾಡಿದ್ದಾರೆ.
ಉಪಾಧ್ಯಕ್ಷರಾಗಿ ಸಿಂಗಾಪುರದ ಶ್ರೀಧರ್ ಜೆ, ವಿದ್ಯಾನಗರದ ಪೂಜಾ ಸಿದ್ದೇಶ್, ವಿ.ವಿ.ಪಾಳ್ಯದ ನವೀನ್, ಕಾಸವರಹಟ್ಟಿಯ ಆರ್.ಎನ್.ವೇಣು, ಡಿ.ಕೆ.ಹಟ್ಟಿಯ ಜಿ.ಎಂ.ಮಹಲಿಂಗಪ್ಪ, ಬೊಮ್ಮನಹಳ್ಳಿಯ ಮಂಜುನಾಥ್ ಎನ್, ಜಿ.ಆರ್.ಹಳ್ಳಿಯ ನವೀನ್.
ಪ್ರಧಾನ ಕಾರ್ಯದರ್ಶಿಗಳಾಗಿ ಗೂಡಬನಹಾಳ್ ಜಿ.ಎನ್.ಸಚಿನ್, ಜೋಡಿಚಿಕ್ಕೇನಹಳ್ಳಿ ಗೊಲ್ಲರಹಟ್ಟಿಯ ಟಿ.ಶಿವಪ್ರಸಾದ್.
ಇದನ್ನೂ ಓದಿ: ಶೋಭಾಯಾತ್ರೆಗೆ ಭರದ ಸಿದ್ಧತೆ | ಝಗಮಗಿಸುತ್ತಿದೆ ಕೋಟೆನಾಡು ಚಿತ್ರದುರ್ಗ
ಕಾರ್ಯದರ್ಶಿಗಳಾಗಿ ಮಾಳಪ್ಪನಹಟ್ಟಿಯ ಆರ್.ಸುರೇಶ್, ಕಸವನಹಳ್ಳಿಯ ಸಿ.ರಾಜಪ್ಪ, ಉಪ್ಪನಾಯಕನಹಳ್ಳಿಯ ಟಿ.ಉಮೇಶ್, ಹಳಿಯೂರಿನ ಬಿ.ತಿಪೇಸ್ವಾಮಿ, ಮದಕರಿಪುರದ ತಿಪ್ಪೇಸ್ವಾಮಿ ನಾಯ್ಕ್, ಕಲ್ಲಹಳ್ಳಿಗೊಲ್ಲರಹಟ್ಟಿಯ ಎಂ.ನಿಜಲಿಂಗಪ್ಪ.
ಕೋಶಾಧ್ಯಕ್ಷರಾಗಿ ಮಲ್ಲಾಪುರ ಗೊಲ್ಲರಹಟ್ಟಿಯ ಎಂ.ಎಸ್.ಮಹಂತೇಶ್ ಇವರುಗಳನ್ನು ನೇಮಕ ಮಾಡಲಾಗಿದೆ.
ನೇಮಕವಾಗಿರುವ ಪದಾಧಿಕಾರಿಗಳು ಪಕ್ಷದ ಸಂಘಟನೆ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಪಕ್ಷವನ್ನು ಬಲ ಪಡಿಸುವಲ್ಲಿ ತಮ್ಮ ಸಮಯ ನೀಡಿ ಕ್ರಿಯಾಶೀಲರಾಗುವಂತೆ ಸೂಚಿಸಿದ್ದಾರೆ.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
