ಕ್ರೈಂ ಸುದ್ದಿ
ಪ್ರಜ್ವಲ್ ಅಶ್ಲೀಲ ವಿಡಿಯೋ ಪ್ರಕರಣ| ದೇವರಾಜೇಗೌಡ ಹಿರಿಯೂರು ಪೊಲೀಸರ ವಶಕ್ಕೆ

Published on
CHITRADURGA NEWS | 10 MAY 2024
ಚಿತ್ರದುರ್ಗ: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋ PENDRIVE ಪ್ರಕರಣಕ್ಕೆ ಸಂಬಂದಿಸಿದಂತೆ ವಕೀಲ ಹಾಗೂ ಬಿಜೆಪಿ ಮುಖಂಡ ದೇವರಾಜೇಗೌಡರನ್ನು ಹಿರಿಯೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ದೇವರಾಜೇಗೌಡ ಟವರ್ ಲೊಕೇಶನ್ ಆಧರಿಸಿ ಹಾಸನ ಪೊಲೀಸರು ನೀಡಿದ ಮಾಹಿತಿ ಆಧರಿಸಿ ಹಿರಿಯೂರು ಗ್ರಾಮಾಂತರ ಪೊಲೀಸರು ಗುಯಿಲಾಳು ಟೋಲ್ ಬಳಿ ವಶಕ್ಕೆ ಪಡೆದಿದ್ದಾರೆ.

ಸದ್ಯ ದೇವರಾಜೇಗೌಡ ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿದ್ದು, ಹೊಳೆನರಸಿಪುರ ಪೊಲೀಸರಿಗೆ ಹಸ್ತಾಂತರ ಮಾಡುವ ಸಾಧ್ಯತೆ ಇದೆ.
ಎಸ್ಐಟಿ ಹಾಗೂ ಹೊಳೆನರಸಿಪುರ ಪೊಲೀಸರು ಹಿರಿಯೂರಿಗೆ ಆಗಮಿಸುತ್ತಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ.
Continue Reading
Related Topics:devarajegiwda, Hassan, Kannada News, Pendrive, Police, prajwal revanna, ಎಚ್.ಡಿ.ರೇವಣ್ಣ, ದೇವರಾಜೇಗೌಡ, ಪೆನ್ ಡ್ರೈವ್, ಪೊಲೀಸ್, ಪ್ರಜ್ವಲ್ ರೇವಣ್ಣ, ಹಾಸನ

Click to comment