ಕ್ರೈಂ ಸುದ್ದಿ
ಮೈನ್ಸ್ ಲಾರಿ ಚಾಲಕನಿಗೆ ಅಪಘಾತ

CHITRADURGA NEWS | 12 JANUARY 2024
ಚಿತ್ರದುರ್ಗ: ಅಪಘಾತದಲ್ಲಿ ಮೈನ್ಸ್ ಲಾರಿ ಚಾಲಕನಿಗೆ ಗಾಯಗಳಾಗಿರುವ ಘಟನೆ ನಗರದ ಹೊರವಲಯದ ಗೋನೂರು ಬಳಿಯಿರುವ ಸಾಯಿ ಗ್ರೌಂಡ್ ಹೋಟೆಲ್ ಸಮೀಪದಲ್ಲಿ ನಡೆದಿದೆ.
ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಸುಂದರಯ್ಯ ಕಾಲೋನಿ ನಿವಾಸಿ 31 ವರ್ಷದ ವಿನೋದ್‍ಕುಮಾರ್ ಗಾಯಗೊಂಡವರು.

ಜ.12 ಶುಕ್ರವಾರ ಬೆಳಗಿನ ಜಾವ ತನ್ನ ಲಾರಿಗೆ ಮೈನ್ಸ್ ಲೋಡ್ ಮಾಡಿಕೊಂಡು ಹೊಸಪೇಟೆ ರಸ್ತೆ ಮೂಲಕ ಹಾದು ರಾಷ್ಟ್ರೀಯ ಹೆದ್ದಾರಿ 50ರ ಮೂಲಕ ರಾಷ್ಟ್ರೀಯ ಹೆದ್ದಾರಿ 48 ಸೇರಿ ಗೋನೂರು ಸಮೀಪ ಹೋಟೆಲ್ ಬಳಿ ನಿಲ್ಲಿಸಿದ್ದಾರೆ.
ಇದನ್ನೂ ಓದಿ: ರೂಬಿಗೆ ಸೀಮಂತ ಕಾರ್ಯ ಸಂಭ್ರಮ

ಲಾರಿಯ ಟೈರ್‍ಗಳಲ್ಲಿನ ಗಾಳಿ ಪರೀಕ್ಷಿಸುವ ಉದ್ದೇಶದಿಂದ ಲಾರಿಯಿಂದ ಕೆಳಗಿಳಿದಿದ್ದು, ತಕ್ಷಣ ಬಂದ ಯಾವುದೋ ವಾಹನ ಚಾಲಕ ವಿನೋದ್‍ಕುಮಾರ್‍ಗೆ ಡಿಕ್ಕಿ ಹೊಡೆದು ನಿಲ್ಲಿಸದೇ ಹೋಗಿದೆ.
ಡಿಕ್ಕಿಯ ಪರಿಣಾಮ ಎರಡೂ ಕಾಲು ಮತ್ತು ಎಡ ಭುಜಕ್ಕೆ ಪೆಟ್ಟು ಬಿದ್ದು ಗಾಯಗೊಂಡಿದ್ದಾರೆ. ಗಾಯಾಳುವನ್ನು 108 ಅಂಬ್ಯುಲೆನ್ಸ್ ಮೂಲಕ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಚಿತ್ರದುರ್ಗ ಗ್ರಾಮಾಂತರ ಪೆÇಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದೆ.
