
ಚಿತ್ರದುರ್ಗ ನ್ಯೂಸ್.ಕಾಂ: ಮನೆ ಮನೆಗಳಿಗೆ ಬೆಳಗುವ ದೀಪಗಳನ್ನು ಕೊಡುವ ಮೂಲಕ ಎಬಿವಿಪಿ ಕಾರ್ಯಕರ್ತರು ನಗರದಲ್ಲಿ ವಿಶಿಷ್ಟವಾಗಿ ದೀಪಾವಳಿ ಆಚರಣೆ ಹಾಗೂ ಶುಭಾಷಯ ಕೋರಿದರು.
ಪರಸ್ಪರ ವಿಶ್ವಾಸ, ಸ್ನೇಹ ಹಾಗೂ ಬಾಂಧವುವನ್ನು ಗಟ್ಟಿಗೊಳಿಸುವ ಸಲುವಾಗಿ ಎಬಿವಿಪಿ ದೀಪ ಹಂಚುವ ಕಾರ್ಯಕ್ರಮ ನಡೆಸುತ್ತಿದೆ. ಅದರಂತೆ ಚಿತ್ರದುರ್ಗ ಕಾರ್ಯಕರ್ತರ ತಂಡ ಭಾನುವಾರ ಇಡೀ ದಿನ ಹಲವು ಕಾರ್ಯಕರ್ತರು, ಮುಖಂಡರ ಮನೆಗಳಿಗೆ ದೀಪಗಳನ್ನು ವಿತರಣೆ ಮಾಡಿದರು.
ಮಣ್ಣಿನ ಹಣತೆಯೊಂದಿಗೆ ಎಣ್ಣೆಯನ್ನೂ ಮನೆಗಳಿಗೆ ತಂದು, ಬತ್ತಿ ಹಾಕಿ ದೀಪವನ್ನು ಬೆಳಗಿಸಿ ತಟ್ಟೆಯಲ್ಲಿಟ್ಟು ಹಸ್ತಾಂತರಿಸುವ ಮೂಲಕ ಬೆಳಕಿನ ಹಬ್ಬಕ್ಕೆ ವಿಶಿಷ್ಟವಾಗಿ ಶುಭ ಕೋರಿದರು.

ಇದನ್ನೂ ಓದಿ: ಚಿತ್ರದುರ್ಗದಲ್ಲಿ ಎಬಿವಿಪಿ ರಾಜ್ಯ ಕಾರ್ಯಕಾರಿಣಿ ಸಭೆ
ಚಿತ್ರದುರ್ಗ ನಗರದಲ್ಲಿ ಹೊಳಲ್ಕೆರೆ ಬಿಜೆಪಿ ಶಾಸಕ ಡಾ.ಎಂ.ಚಂದ್ರಪ್ಪ, ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹಾಗೂ ಹಿರಿಯ ಎಬಿವಿಪಿ ಕಾರ್ಯಕರ್ತ ಟಿ.ಬದರೀನಾಥ್, ದೇವರಾಜ ಅರಸು ಶಿಕ್ಷಣ ಸಂಸ್ಥೆಯ ಸಿಇಓ ಹಾಗೂ ಬಿಜೆಪಿ ಯುವ ಮುಖಂಡ ಎಂ.ಸಿ.ರಘುಚಂದನ್, ಹಿರಿಯ ಕಾರ್ಯಕರ್ತ ಪಾಡಿಗಟ್ಟೆ ತಿಪ್ಪೇಸ್ವಾಮಿ ಸೇರಿದಂತೆ ಅನೇಕರ ಮನೆಗಳಿಗೆ ತೆರಳಿ ದೀಪಗಳನ್ನು ನೀಡಿದರು.
ಎಬಿವಿಪಿ ನಗರ ಕಾರ್ಯದರ್ಶಿ ಗೋಪಿ, ತಾಲೂಕು ಸಂಚಾಲಕ ಕನಕರಾಜು, ಮಹಳಾ ಪ್ರಮುಖರಾದ ಚಂದನ, ನಗರ ಸೋಷಿಯಲ್ ಮೀಡಿಯಾ ಪ್ರಮುಖರಾದ ಚಿತ್ರಸ್ವಾಮಿ, ಕಾಲೇಜು ಘಟಕದ ಅಧ್ಯಕ್ಷ ಕಾಟಲಿಂಗ, ಸುಪ್ರಿಯಾ ಮತ್ತಿತರರು ಭಾಗವಹಿಸಿದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
