ಮುಖ್ಯ ಸುದ್ದಿ
33 ಸಾವಿರ ಕೆಜಿ ಚಿಕನ್ ಬಿರಿಯಾನಿ | ಶೋಷಿತರ ಸಮಾವೇಶಕ್ಕೆ ಬಂದವರಿಗೆ ಭರ್ಜರಿ ಭೋಜನ

CHITRADURGA NEWS | 29 JANUARY 2024
ಚಿತ್ರದುರ್ಗ: ಚಿತ್ರದುರ್ಗದಲ್ಲಿ ನಡೆದ ರಾಜ್ಯಮಟ್ಟದ ಶೋಷಿತ ಸಮುದಾಯಗಳ ಜಾಗೃತಿ ಸಮಾವೇಶಕ್ಕೆ ಬಂದವರಿಗೆ ಸಂಘಟಕರು ಮಾಂಸಾಹಾರ ಊಟದ ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದರು.
ಅದರಂತೆ ಭಾನುವಾರ ಸಮಾವೇಶಕ್ಕೆ ಬಂದವರ ಮೂಗಿಗೆ ಪೆಂಡಾಲ್ ಬಳಿ ಬರುತ್ತಲೇ ಚಿಕನ್ ಬರಿಯಾನಿಯ ಪರಿಮಳ ಘಮ್ ಎಂದು ಬಡಿಯುತ್ತಿತ್ತು.

ಇದನ್ನೂ ಓದಿ: ಪ್ರಮಾದಕ್ಕೆ ವಿಷಾಧ ವ್ಯಕ್ತಪಡಿಸಿದ ಸಿದ್ದರಾಮಯ್ಯ
ಸಂಘಟಕರು, ಮುಖ್ಯಮಂತ್ರಿಗಳ ಭಾಷಣದ ಹೊತ್ತಿಗೆ ಊಟ ಮುಗಿಸಿಕೊಂಡೇ ಬನ್ನಿ ಎಂದು ಮನವಿ ಮಾಡುತ್ತಿದ್ದರು.

ಅಂದಹಾಗೆ ಲಕ್ಷ ಲಕ್ಷ ಸಂಖ್ಯೆಯಲ್ಲಿ ಬಂದವರಿಗೆ ಚಿಕನ್ ಬಿರಿಯಾನಿ ಊಟದ ವ್ಯವಸ್ಥೆ ಮಾಡುವುದು ಅಂದರೆ ಹುಡುಗಾಟನಾ ಅನ್ನಿಸದೆ ಇರದು.
ಇದನ್ನೂ ಓದಿ: ಮುಖ್ಯಮಂತ್ರಿ ಸಿದ್ದರಾಮಯ್ಯ ವಜಾ ಮಾಡಲು ಎಚ್‍ಡಿಕೆ ಆಗ್ರಹ
ಹೌದು, ಈ ಬಗ್ಗೆ ಮಾಹಿತಿ ಕೇಳಿದರೆ ನೀವೆ ಅಚ್ಚರಿ ಪಡುತ್ತೀರಿ. ಬರೋಬ್ಬರಿ 33 ಸಾವಿರ ಕೆಜಿ ಚಿಕನ್ ತರಿಸಿ ಬಿರಿಯಾನಿ ಮಾಡಿಸಲಾಗಿತ್ತು.
ಮಾಂಸಾಹಾರ ಸೇವನೆ ಮಾಡದವರಿಗೆ ಸಸ್ಯಾಹಾರಿ ಊಟದ ವ್ಯವಸ್ಥೆಯನ್ನೂ ಮಾಡಲಾಗಿತ್ತು.
ಮಾಂಸಾಹಾರಕ್ಕೆ ಚಿಕನ್ ಬಿರಿಯಾನಿ, ಮೊಸರು ಬಜ್ಜಿ ಬಡಿಸಿದರೆ, ಸಸ್ಯಾಹಾರಿಗಳಿಗೆ ಮೊಸರನ್ನ, ಟಮೋಟಾ ಬಾತ್ ವ್ಯವಸ್ಥೆ ಮಾಡಲಾಗಿತ್ತು.
ಇದನ್ನೂ ಓದಿ: ದಿವ್ಯಪ್ರಭು ಜಿ.ಆರ್.ಜೆ ಧಾರವಾಡ ಜಿಲ್ಲಾಧಿಕಾರಿ
ಇಷ್ಟೂ ಜನರಿಗೆ ಊಟದ ವ್ಯವಸ್ಥೆಗಾಗಿ 1 ಸಾವಿರ ಕೌಂಟರ್ ತೆರೆಯಲಾಗಿತ್ತು. ಸುಮಾರು 600 ಮಂದಿ ಬಾಣಸಿಗರನ್ನು ಕರೆತರಲಾಗಿತ್ತು.
