CHITRADURGA NEWS | 03 AUGUST 2026
ಚಿತ್ರದುರ್ಗ: ಚಿತ್ರದುರ್ಗ ಜಿಲ್ಲಾ ಪೊಲೀಸ್ ಇಲಾಖೆಗೆ ವಿಧಾನ ಪರಿಷತ್ ಸದಸ್ಯ ಕೆ.ಸಿ.ನವೀನ್ ಅವರು ಅವರ ಅನುದಾನದಲ್ಲಿ ಮಹೇಂದ್ರ ಹೊಸ ಮಾಡೆಲ್ ಜೀಪನ್ನು ಜಿಲ್ಲಾ ರಕ್ಷಣಾಧಿಕಾರಿ ರಂಜಿತ್‍ಕುಮಾರ್ ಭಂಡಾರು ಅವರಿಗೆ ಹಸ್ತಾಂತರಿಸಿದರು.
ಇದನ್ನೂ ಓದಿ: ಟಿ.ರಘುಮೂರ್ತಿ ಮಿನಿಸ್ಟರ್ | ಹ್ಯಾಟ್ರಿಕ್ ಗೆಲುವಿನ ಸರದಾರನಿಗೆ ಒಲಿದ ಮಂತ್ರಿ ಪಟ್ಟ
ಈ ವೇಳೆ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಕೆ.ಸಿ.ನವೀನ್, ತುರ್ತು ಸಂದರ್ಭಗಳಲ್ಲಿ ಹಾಗೂ ತೊಂದರೆಯಲ್ಲಿರುವವರಿಗೆ ನೆರವಾಗಲಿ ಎನ್ನುವ ಉದ್ದೇಶದಿಂದ ಪೊಲೀಸ್ ಇಲಾಖೆಗೆ ನನ್ನ ಅನುದಾನದಲ್ಲಿ ಹದಿನಾಲ್ಕು ಲಕ್ಷ ರೂ.ಬೆಲೆಯ ಮಹೇಂದ್ರ ಹೊಸ ಮಾಡೆಲ್ ಜೀಪನ್ನು ಹಸ್ತಾಂತರಿಸಿದ್ದೇನೆ ಎಂದರು.
ಇಲಾಖೆಗೆ ವಾಹನದ ಅವಶ್ಯಕತೆಯಿದೆ ಎಂದು ರಕ್ಷಣಾಧಿಕಾರಿ ರಂಜಿತ್‍ಕುಮಾರ್ ಭಂಡಾರು ಕೋರಿಕೆಯ ಮೇರೆಗೆ ಜೀಪ್ ನೀಡಿದ್ದೇನೆ. ಪೊಲೀಸರಿಗೆ ಅನೇಕ ಕರೆಗಳು ಬರುತ್ತಿರುತ್ತವೆ. ಕಾನೂನು ಸಹಾಯ ಬೇಡುವವರು, ಕಷ್ಟದಲ್ಲಿರುವವರಿಗೆ ಹೊಸ ಮಾಡಲ್ ಜೀಪ್ ನೆರವಾಗಲಿ. ಕೆಲವು ಸಂದರ್ಭಗಳಲ್ಲಿ ಗಣ್ಯರಿಗೆ ಎಸ್ಕಾರ್ಟ್ ನೀಡುವುದಕ್ಕಾಗಿಯೆ ವಾಹನಗಳ ಬಳಕೆಯಾಗುತ್ತಿರುತ್ತದೆ. ಇವೆಲ್ಲವನ್ನು ಮನಗಂಡು ಇಲಾಖೆಗೆ ಹೊಸ ವಾಹನ ಕೊಟ್ಟಿದ್ದೇನೆಂದು ಹೇಳಿದರು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಆಗಸ್ಟ್ 03 | ಮೆಕ್ಕೆಜೋಳ, ಶೇಂಗಾ ರೇಟ್
ಈ ವೇಳೆ ಬಿಜೆಪಿ ಜಿಲ್ಲಾ ವಕ್ತಾರ ನಾಗರಾಜ್ ಬೇದ್ರೆ, ಎಸ್ಸಿ ಮೋರ್ಚಾ ಅಧ್ಯಕ್ಷ ಪರಶುರಾಮ್, ಉಪಾಧ್ಯಕ್ಷ ಧನಂಜಯ್, ಪ್ರಧಾನ ಕಾರ್ಯದರ್ಶಿ ಚೇತನ್, ಯಶವಂತ್, ಕಿರಣ್, ಓಬಳೇಶ್ ಹಾಗೂ ಮಹೇಂದ್ರ ಕಂಪನಿ ಟೀಮ್‍ನ ಮಧು ಇದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

