CHITRADURGA NEWS | 2026
ಚಿತ್ರದುರ್ಗ: ಚಳ್ಳಕೆರೆ ಶಾಸಕರಾದ ಟಿ.ರಘುಮೂರ್ತಿ ಅವರಿಗೆ ಸಚಿವ ಸ್ಥಾನ ಒಲಿದು ಬಂದಿದೆ.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕ್ಯಾಬಿನೆಟ್‌ನಲ್ಲಿ ಚಳ್ಳಕೆರೆ ಶಾಸಕರಿಗೆ ಮಂತ್ರಿ ಸ್ಥಾನ ದಕ್ಕಿದೆ.
ಇದನ್ನೂ ಓದಿ:
ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ದಿವಂಗತ ಡಿ.ಸುಧಾಕರ್ ಯೋಜನಾ ಮತ್ತು ಸಾಂಖ್ಯಿಕ ಖಾತೆ ಸಚಿವರು, ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದರು.
ಆದರೆ, ಅನಾರೋಗ್ಯದಿಂದ ಡಿ.ಸುಧಾಕರ್ ನಿಧನರಾಗಿದ್ದು, ಈಗ ಮುಖ್ಯಮಂತ್ರಿಗಳೂ ಬದಲಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ಹೊಸ ಮುಖ್ಯಮಂತ್ರಿಗಳ ಸಚಿವ ಸಂಪುಟದಲ್ಲಿ ಜಿಲ್ಲೆಯ ಯಾವ ಶಾಸಕರು ಸಚಿವರಾಗುತ್ತಾರೆ ಎನ್ನುವ ದೊಡ್ಡ ನಿರೀಕ್ಷೆ ಇತ್ತು.
ಇದನ್ನೂ ಓದಿ:
ಸತತ ಮೂರು ಸಲ ಚುನಾವಣೆಯಲ್ಲಿ ಗೆದ್ದು, ಚಳ್ಳಕೆರೆ ವಿಧಾನಸಭಾ ಕ್ಷೇತ್ರವನ್ನು ಮಾದರಿಯಾಗಿ ಅಭಿವೃದ್ಧಿ ಪಥದಲ್ಲಿ ತೆಗೆದುಕೊಂಡು ಹೋಗಿರುವ ಟಿ.ರಘುಮೂರ್ತಿ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಅವರ ಅಭಿಮಾನಿಗಳು ಒತ್ತಾಯ ಮಾಡಿದ್ದರು.
ಜಿಲ್ಲೆಯಲ್ಲಿ ಹಿರಿಯ ಶಾಸಕರಾಗಿದ್ದ ಎನ್.ವೈ.ಗೋಪಾಲಕೃಷ್ಣ ಹಾಗೂ ಹೊಸದುರ್ಗ ಶಾಸಕರಾದ ಬಿ.ಜಿ.ಗೋವಿಂದಪ್ಪ ಕೂಡಾ ಆಕಾಂಕ್ಷಿಗಳಾಗಿದ್ದರು. ಯುವ ಕೋಟಾದಲ್ಲಿ ಚಿತ್ರದುರ್ಗ ಶಾಸಕ ಕೆ.ಸಿ.ವೀರೇಂದ್ರ(ಪಪ್ಪಿ) ಅವರಿಗೂ ಮಂತ್ರಿ ಸ್ಥಾನದ ರೇಸ್‌ನಲ್ಲಿದ್ದಾರೆ ಎನ್ನುವ ಮಾತುಗಳಿದ್ದವು.
ಇದನ್ನೂ ಓದಿ:
ಎನ್.ವೈ.ಗೋಪಾಲಕೃಷ್ಣ ಅವರು ಹಿರಿತನದ ಆಧಾರದಲ್ಲಿ ಮಂತ್ರಿ ಸ್ಥಾನಕ್ಕೆ ಆಕಾಂಕ್ಷಿಯಾಗಿದ್ದರು.
ಆದರೆ, ಅಂತಿಮವಾಗಿ ಟಿ.ರಘುಮೂರ್ತಿ ಅವರು ಸಚಿವರಾಗುವ ಮೂಲಕ ಎಲ್ಲ ಊಹಾಪೋಹಗಳಿಗೆ ತೆರೆ ಎಳೆಯಲಾಗಿದೆ.
ಚಿತ್ರದುರ್ಗ ಜಿಲ್ಲಾ ಕೇಂದ್ರದ ಅಭಿವೃದ್ಧಿ ದೃಷ್ಟಿಯಿಂದ ಟಿ.ರಘುಮೂರ್ತಿ ಅವರಂತಹ ವ್ಯಕ್ತಿಗಳು ಶಾಸಕರಾಗಿ ಬರಬೇಕು ಎನ್ನುವುದು ಬಹುತೇಕರ ಅಭಿಪ್ರಾಯವಾಗಿತ್ತು. ಚಿತ್ರದುರ್ಗ ನಗರಕ್ಕೆ ಹೊಸ ಸ್ವರೂಪ ಕೊಡಬೇಕಾಗಿದೆ. ಇಲ್ಲಿನ ರಸ್ತೆಗಳ ಅಗಲೀಕರಣ, ಮೂಲ ಸೌಕರ್ಯ, ನಗರದ ಸೌಂದರ್ಯ, ಕೋಟೆ, ಚಂದ್ರವಳ್ಳಿ, ಜೋಗಿಮಟ್ಟಿಯಂತಹ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಹರಿದು ಬರುವಂತೆ ಮಾಡುವ ನಿಟ್ಟಿನಲ್ಲಿ ಹೊಸ ಆಲೋಚನೆಗಳಿರುವ ವ್ಯಕ್ತಿಗಳು ಮಂತ್ರಿಯಾಗಿ ಬರಬೇಕು ಎನ್ನುವ ಇಂಗಿತ ಜಿಲ್ಲಾ ಕೇಂದ್ರದ ಜನರದ್ದಾಗಿತ್ತು.
ಇದನ್ನೂ ಓದಿ:
ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಆಯ್ಕೆಯಾದ ಕೆಲ ತಿಂಗಳಲ್ಲೇ ಟಿ.ರಘುಮೂರ್ತಿ ಅವರು, ಮಂತ್ರಿಯಾಗಿರುವುದು ಅವರ ಸತತ ಪರಿಶ್ರಮಕ್ಕೆ ಒಲಿದು ಬಂದ ಫಲವಾಗಿದೆ.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

