
CHITRADURGA NEWS | 03 JUNE 2026
ಚಿತ್ರದುರ್ಗ: 2026-27ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ವಿವಿಧ ಘಟಕಗಳಿಗೆ ಸಹಾಯಧನ ಪಡೆಯಲು ಆಸಕ್ತ ರೈತ ಫಲಾನುಭವಿಗಳಿಂದ ಅರ್ಜಿ ಅಹ್ವಾನಿಸಲಾಗಿದೆ. ಜೂನ್ 15 ಅರ್ಜಿ ಸಲ್ಲಿಸಲು ಕೊನೆಯ ದಿನ.
ಇದನ್ನೂ ಓದಿ: ಸಾಣೇಹಳ್ಳಿ ಮಠದಲ್ಲಿ ಮಾಸಿಕ ಇಷ್ಟಲಿಂಗ ದೀಕ್ಷಾ ಸಂಸ್ಕಾರ
ತೋಟಗಾರಿಕೆ ಬೆಳೆಗಳ ಪ್ರದೇಶ ವಿಸ್ತರಣೆ ಕಾರ್ಯಕ್ರಮದಡಿ ದಾಳಿಂಬೆ, ಕಂದು ಬಾಳೆ, ಅಂಗಾಂಶ ಬಾಳೆ, ಡ್ರ್ಯಾಗನ್ ಪ್ರೂಟ್, ಹುಣಸೆ, ನೇರಳೆ ಹಣ್ಣಿನ ಬೆಳಗಳು, ಹೈಬ್ರಿಡ್ ತರಕಾರಿ, ಕಟ್ ಪ್ಲವರ್ಸ್ (ಗುಲಾಬಿ, ಜೆರ್ಬೆರಾ, ಕಾರ್ನೇಷನ್) ಸುಗಂಧರಾಜ ಹೂವುಗಳು, ಬಿಡಿ ಹೂವುಗಳ ಮತ್ತು ಕರಿಮೆಣಸು/ಬಹುವಾರ್ಷಿಕ ಬೆಳೆಗಳ ಪ್ರದೇಶ ವಿಸ್ತರಣೆ ಕಾರ್ಯಕ್ರಮಕ್ಕೆ ಮತ್ತು ಸಣ್ಣ ಪ್ರಮಾಣದ ಅಣಬೆ ಉತ್ಪಾದನಾ ಘಟಕ ಕಾರ್ಯಕ್ರಮ, ಪಕ್ಷಿ ನಿರೋಧಕ ಬಲೆ, ವೈಯಕ್ತಿಕ ನೀರು ಸಂಗ್ರಹಣಾ ಘಟಕ, ಪಾಲಿಹೌಸ್, ಪ್ಲಾಸ್ಟಿಕ್ ಮಲ್ಚಿಂಗ್, ಹೈಡ್ರೊಪೋನಿಕ್ಸ್, ಕಳೆ ನಿಯಂತ್ರಕ ಮ್ಯಾಟ್ (ವೀಡ್ ಮ್ಯಾಟ್), ತರಕಾರಿ ಬೆಳೆಗಳಿಗೆ ಆಧಾರ ನೀಡುವ ವ್ಯವಸ್ಥೆ, ಎರೆಹುಳು ಗೊಬ್ಬರ ಘಟಕ, ಜೇನು ಪೆಟ್ಟಿಗೆ, 20 ಹೆಚ್‍ಪಿ ವರೆಗಿನ ಟ್ರ್ಯಾಕ್ಟರ್, ಪವರ್ ಟ್ರಿಲ್ಲರ್, ತಳ್ಳುವ ಗಾಡಿ ಹಾಗೂ ಈರುಳ್ಳಿ ಶೇಖರಣ ಘಟಕಗಳಿಗೆ ಸಹಾಯಧನ ಪಡೆಯಲು ಆಸಕ್ತ ಅರ್ಹ ತೋಟಗಾರಿಕೆ ಬೆಳೆಗಾರರಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿಯನ್ನು ಆಯಾ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಗೆ ಜೂನ್ 15ರೊಳಗೆ ನಿಯಮಾನುಸಾರ ಸಲ್ಲಿಸಲು ಕೋರಿದೆ.
ಇದನ್ನೂ ಓದಿ: ಮುಂಗಾರು ಚುರುಕು | ಬಿತ್ತನೆ ಬೀಜ, ರಸಗೊಬ್ಬರ ವಿತರಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಿ | ಡಿಸಿ
ಹೆಚ್ಚಿನ ಮಾಹಿತಿಗಾಗಿ ರೈತರು ಆಯಾ ತಾಲ್ಲೂಕಿನ ಸಂಬಂಧಪಟ್ಟ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ/ಹೋಬಳಿಯ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ ಎಂದು ತೋಟಗಾರಿಕೆ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
