CHITRADURGA NEWS | 14 MARCH 2026
ಚಿತ್ರದುರ್ಗ: ನಗರದೇವತೆ ಶ್ರೀ ಏಕನಾಥೇಶ್ವರಿ ಅಮ್ಮನವರ ಜಾತ್ರಾ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಣೆ ಮಾಡಲು ತೀರ್ಮಾನಿಸಲಾಯಿತು.
ತಾಲೂಕು ಆಡಳಿತ ಮತ್ತು ಏಕನಾಥೇಶ್ವರಿ ಜೀರ್ಣೋದ್ಧಾರ ಸಮಿತಿ 2026ನೇ ಸಾಲಿನ ಉತ್ಸವವನ್ನು ವಿಶೇಷವಾಗಿ ಆಚರಿಸಲು ಪಾದಗುಡಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಚರ್ಚಿಸಿ ನಿರ್ಧರಿಸಲಾಯಿತು.
ಇದನ್ನೂ ಓದಿ: ಬಾಲಕಿಗೆ ಕಚ್ಚಿದ ನಾಗರಹಾವು | ಬಾಯಿಂದಲೇ ವಿಷ ತೆಗೆದ ಶಿಕ್ಷಕ ರವಿಶಂಕರ್ ಸಮಯಪ್ರಜ್ಞೆ | ಇಬ್ಬರಿಗೂ ಚಿಕಿತ್ಸೆ
ಚಿತ್ರದುರ್ಗದ ಹಿಂದು ಮಹಾಗಣಪತಿ ಉತ್ಸವ ಅಥವಾ ದಾವಣಗೆರೆಯ ನಗರದೇವತೆ ದುಗ್ಗಮ್ಮ ದೇವಿಯ ಜಾತ್ರೆಯಂತೆ ಏಕನಾಥೇಶ್ವರಿ ದೇವಿ ಜಾತ್ರೆಯನ್ನು ಆಚರಿಸಲು ದೇವಿಯ ಸಲಹೆಗಳು ಕೇಳಿಬಂದವು.
ನಗರದ ಪ್ರಮುಖ ಬೀದಿಗಳಲ್ಲಿ ಝಗಮಗಿಸುವ ವಿದ್ಯುತ್ ದೀಪಾಲಂಕಾರ, ಮಾಡಿಸಬೇಕು. ಇದಕ್ಕೆ ಬೆಸ್ಕಾಂ ಅಡಚಣೆ ಉಂಟು ಮಾಡಬಾರದು. ನಗರಸಭೆ ಸಮರ್ಪಕವಾಗಿ ನೀರು ಪೂರೈಸಲು ಕ್ರಮವಹಿಸಬೇಕು. ದೇವಿಯ ಉತ್ಸವ ಮೂರ್ತಿ ಕೆಳಗಿಳಿಯುವ ಹಾಗೂ ಶುಕ್ರವಾರದ ಮೆರವಣಿಗೆ ವೇಳೆ ತಡವಾಗದೆ ಸುವ್ಯವಸ್ಥಿತವಾಗಿ ನಡೆಸಬೇಕೆಂಬ ಸಲಹೆಗಳು ಹಲವರಿಂದ ಕೇಳಿಬಂದವು.
ಮಾ. 24ರಿಂದ ಸಾರು ಹಾಕುವ ಸಂಪ್ರದಾಯದೊಂದಿಗೆ ಜಾತ್ರೆ ಆರಂಭವಾಗಲಿದೆ. 28ರಂದು ರಾತ್ರಿ 8ಕ್ಕೆ ದೇವಿಯ ಮೂರ್ತಿಗೆ ಕಂಕಣಧಾರಣೆ, ಮದುವಣಗಿತ್ತಿ, ಭಂಡಾರದ ಪೂಜೆ, ಮಹಾರುದ್ರಾಭಿಷೇಕ ಸೇವೆ ನೆರವೇರಲಿವೆ.
ಮಾ.28, 29, 30ರಂದು ರಾತ್ರಿ ವೇಳೆ ದೇವಿಯ ಉತ್ಸವ ಮೂರ್ತಿಯನ್ನು ಐತಿಹಾಸಿಕ ಕೋಟೆಯ ಮೇಲುದುರ್ಗದ ದೇವಿ ದೇಗುಲದಿಂದ ಕೆಳಗಿನ ದುರ್ಗಕ್ಕೆ ಬುರುಜನಹಟ್ಟಿ ಭಕ್ತರು ವಿಶೇಷ ಪುಷ್ಪಾಲಂಕಾರದೊಂದಿಗೆ ಸಿಂಹವಾಹಿನಿ, ಸರ್ಪೋತ್ಸವ ಹಾಗೂ ನವಿಲು ವಾಹನೋತ್ಸವದ ಮೂಲಕ ಸುಸಜ್ಜಿತ ಉಚ್ಛಾಯದಲ್ಲಿ ಪ್ರತಿಷ್ಠಾಪಿಸಿ ಕರೆತರಲಿದ್ದಾರೆ.
ಏ. 1ರಂದು ಕೋಟೆಯ ಮೇಲಿರುವ ದೇಗುಲದಲ್ಲಿ ದೇವಿಗೆ ದೊಡ್ಡಭಂಡಾರದ ಪೂಜೆ ನೆರವೇರಲಿದೆ. ನಂತರ ವಿವಿಧ ಪುಷ್ಪಗಳಿಂದ ಸಿಂಗರಿಸಿ, ಅಶ್ವವಾಹನದ ಮೇಲೆ ದೇವಿಯ ಉತ್ಸವಮೂರ್ತಿಯನ್ನು ಪ್ರತಿಷ್ಠಾಪಿಸಿ ನಗರಕ್ಕೆ ಜಾತ್ರೆಯ ಸಂಪ್ರದಾಯದಂತೆ ಕರೆತರಲಾಗುವುದು.
ಅಂದು ದೇವಿಗೆ ಗಂಗಾಪೂಜೆ, ಕುಂಭಾಭಿಷೇಕ ಜರುಗಲಿದೆ. ವಿವಿಧೆಡೆಗಳಲ್ಲಿ ಮಹಾಮಂಗಳಾರತಿ ಪೂಜೆ ಸ್ವೀಕಾರ. ನಂತರ ಪಾದದಗುಡಿಗೆ ಮೂರ್ತಿಯನ್ನು ಕರೆತರಲಾಗುತ್ತದೆ. ಏಪ್ರಿಲ್ 2 ರಂದು ಮಾಳಪ್ಪನಹಟ್ಟಿ, ಕರುವಿನಕಟ್ಟೆ ವೃತ್ತ, ಚಿಕ್ಕಪೇಟೆ, ಮೆದೇಹಳ್ಳಿ, ಗೋಪಾಲಪುರ ಬಡಾವಣೆ ಭಕ್ತರಿಂದ ಪೂಜೆ ಸ್ವೀಕಾರ ನಡೆಯಲಿದೆ.
ಮೆರವಣಿಗೆ ಅತ್ಯಂತ ವಿಶೇಷ:
ಕರುವಿನಕಟ್ಟೆ ವೃತ್ತ, ಜೋಗಿಮಟ್ಟಿ ರಸ್ತೆ ಸೇರಿ ಗಂಗಾಂಬಿಕ ಬೆಸ್ತರ ಸಮುದಾಯ ಒಳಗೊಂಡು ಭಕ್ತಸಮೂಹದಿಂದ 3ರಂದು ದೇವಿಗೆ ವಿವಿಧ ಬಗೆಯ ಪುಷ್ಪ, ವಸ್ತುಗಳಿಂದ ಅಲಂಕಾರದ ಸೇವೆ ನೆರವೇರಲಿದೆ. ನಂತರ ಬೆಳಗ್ಗೆ 10 ರಿಂದ ರಾತ್ರಿ 9 ರವರೆಗೆ ನಗರದ ರಾಜಬೀದಿಗಳಲ್ಲಿ ಸಕಲ ಮಂಗಳ ವಾದ್ಯಗಳೊಂದಿಗೆ ದೇವತೆಯ ಉತ್ಸವ ಮೂರ್ತಿಯ ಭವ್ಯ ರಥೋತ್ಸವದ ಮೆರವಣಿಗೆ ನಡೆಯಲಿದೆ. ಈ ಸಂದರ್ಭದಲ್ಲಿ ಭಕ್ತರಿಂದ ಮೀಸಲು ಅರ್ಪಣೆ ಹಾಗೂ ಹರಕೆ ಸಲ್ಲಿಕೆಯಾಗಲಿದೆ.
ಇದನ್ನೂ ಓದಿ: ಚಿತ್ರದುರ್ಗ ಮಾರುಕಟ್ಟೆಯಲ್ಲಿ ಇಂದಿನ ಹತ್ತಿ ರೇಟ್..
ಏ.4 ರಂದು ಏಕನಾಥೇಶ್ವರಿ ದೇವಿಯ ಸಿಡಿಯಾದ ಬಳಿಕ ವಿವಿಧ ಭಕ್ತರಿಂದ ಪೂಜೆ ಸ್ವೀಕರಿಸಿ, ಕೋಟೆಯೊಳಗಿನ ಮೂಲ ದೇಗುಲದಲ್ಲಿ ಗುಡಿತುಂಬುವ ಕಾರ್ಯಕ್ರಮದೊಂದಿಗೆ ದೇವಿಯನ್ನು ಸ್ವಸ್ಥಾನಕ್ಕೆ ಕರೆತರಲಾಗುವುದು. ಏ.7 ರವರೆಗೂ ದೇವಿಗೆ ವಿಶೇಷ ಪೂಜಾ ಕೈಂಕರ್ಯ ನಡೆಯಲಿದ್ದು, ಅಂದು ಜಾತ್ರೆ ಮುಕ್ತಾಯವಾಗಲಿದೆ ಎಂದು ಸಮಿತಿ ತಿಳಿಸಿದೆ.
ಪ್ರತಿ ವರ್ಷದ ಜಾತ್ರಾ ಸಂಪ್ರದಾಯದಂತೆ ಉತ್ಸವ ಆಚರಿಸಿ. ಹದಿನೈದು ದಿನವೂ ಶಾಂತಿಯುತವಾಗಿ ನಡೆಯಬೇಕು. ತಾಲೂಕು ಆಡಳಿತ ಸಹಕಾರ ನೀಡಲಿದೆ ಎಂದು ಆರ್‌ಒ ಶ್ರೀನಿವಾಸ್, ಆರ್‌ಐ ಪ್ರಾಣೇಶ್ ಹೇಳಿದರು.
ಇದನ್ನೂ ಓದಿ: ದಂತ ವೈದ್ಯಕೀಯ ಪರೀಕ್ಷೆಯಲ್ಲಿ 5ನೇ ರ್ಯಾಂಕ್ | ಸಾಧನೆ ಮಾಡಿದ ಡಾ.ಸಾಧನಾ
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ದೊರೆಸ್ವಾಮಿ, ನಿರ್ದೇಶಕರಾದ ಬಿ. ರಾಮಜ್ಜ, ಹನುಮಂತು, ಓಂಕಾರ್, ಸಿ.ಟಿ. ರಾಜೇಶ್, ರಮೇಶ್, ಮೆದೇಹಳ್ಳಿ ಮಂಜುನಾಥ್, ಗಾಡಿ ಮಂಜುನಾಥ್, ನಗರಸಭೆ ಮಾಜಿ ಅಧ್ಯಕ್ಷರಾದ ಸಿ.ಟಿ. ಕೃಷ್ಣಮೂರ್ತಿ, ಎಚ್. ಮಂಜಪ್ಪ, ಮಾಜಿ ಉಪಾಧ್ಯಕ್ಷ ಎಸ್‌ಬಿಎಲ್ ಮಲ್ಲಿಕಾರ್ಜುನ್, ಮಾಜಿ ಸದಸ್ಯ ಮಹೇಶ್, ಬಾರ್ ಮಂಜುನಾಥ್ ಸೇರಿ ನೂರಾರು ಭಕ್ತರಿದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
