CHITRADURGA NEWS | 26 JANUARY 2026
ಚಿತ್ರದುರ್ಗ: ವಂಶ ಪಾರಂಪರ್ಯದ ರಾಜಪ್ರಭುತ್ವವನ್ನು ಒಪ್ಪದೆ ಪ್ರಜಾಪ್ರಭುತ್ವವನ್ನು ಅಪ್ಪಿಕೊಂಡ ಪವಿತ್ರ ದಿನ ಗಣರಾಜ್ಯೋತ್ಸವ ಎಂದು ಮುರುಘಾ ಮಠ ಹಾಗೂ ಎಸ್‌ಜೆಎಂ ವಿದ್ಯಾಪೀಠದ ಅಧ್ಯಕ್ಷರಾದ ಶಿವಯೋಗಿ ಎಸ್ ಕಳಸದ ತಿಳಿಸಿದರು.
ಇದನ್ನೂ ಓದಿ: ಮುರುಘಾ ಮಠದಲ್ಲಿ ರಥಸಪ್ತಮಿ | 108 ಸೂರ್ಯ ನಮಸ್ಕಾರ
ನಗರದ ಎಸ್.ಜೆ.ಎಂ. ಕ್ಯಾಂಪಸ್ ಆವರಣದಲ್ಲಿ ಎಸ್.ಜೆ.ಎಂ. ಸಮೂಹ ಸಂಸ್ಥೆಗಳ ವತಿಯಿಂದ ಹಮ್ಮಿಕೊಂಡಿದ್ದ 77ನೇ ಗಣರಾಜ್ಯೋತ್ಸವ ಕಾರ್ಯಕ್ರಮಲ್ಲಿ ಮಾತನಾಡಿದರು.
ಸಂಕೀರ್ಣತೆಯ ನಡುವೆ ಭಿನ್ನಾಭಿಪ್ರಾಯಗಳ ನಡುವೆ ರಾಷ್ಟ್ರೀಯತೆ ಮೆರೆದ ಪರಂಪರೆ ನಮ್ಮದು.ಈ ದಿನ ಅತ್ಯಂತ ಪವಿತ್ರವಾದುದು. ವಿದೇಶಿಯರ ಸಂಕೋಲೆಯಿದ ಕಳಚಿ ನಮ್ಮದೇ ಆದ ಪ್ರಜಾಪ್ರಭುತ್ವವನ್ನು ಪಡೆದುಕೊಂಡ ದಿನ. ಸುಮಾರು 2 ವರ್ಷಗಳ ಕಾಲ ರಚನೆಗೊಂಡ ನಮ್ಮ ಸಂವಿಧಾನವನ್ನು ಅಂಗೀಕರಿಸಿಕೊಂಡ ದಿನ ಎಂದರು.
ಶೈಕ್ಷಣಿಕ, ಸಾಂಸ್ಕೃತಿಕ, ವೈಜ್ಞಾನಿಕವಾಗಿ ದೇಶವಿಂದು ಪ್ರಗತಿಯ ಪಥದಲ್ಲಿ ಸಾಗುತ್ತಿದೆ. ಎಸ್.ಜೆ.ಎಂ. ವಿದ್ಯಾಪೀಠವು ಸಹ ಗುರು ಹಿರಿಯರ ದೂರದೃಷ್ಟಿಯಿಂದ 50 ವರ್ಷಗಳನ್ನು ಪೂರೈಸಿ ಮುನ್ನಡೆಯುತ್ತಿರುವುದು ಸಂತಸದ ವಿಷಯ ಎಂದು ತಿಳಿಸಿದರು.
ಇದನ್ನೂ ಓದಿ: ಗಣರಾಜ್ಯೋತ್ಸವ | ಸರ್ಕಾರಿ ಅಧಿಕಾರಿಗಳಿಗೆ ಸನ್ಮಾನ
ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿದ ರಾಜ್ಯಸಭೆ ಮಾಜಿ ಸದಸ್ಯ ಎಚ್.ಹನುಮಂತಪ್ಪ ಮಾತನಾಡಿ, ನಾನು ಹುಟ್ಟಿದಾಗ ಸ್ವಾತಂತ್ರ‍್ಯ ಬಂದಿರಲಿಲ್ಲ. ಹಾಗಾಗಿ ನಾನು ಬ್ರಿಟೀಷರ ಪ್ರಜೆಯಾದರೆ ಇಂದಿನ ನೀವೆಲ್ಲ ಸ್ವಾತಂತ್ರ‍್ಯ ಭಾರತದ ಪ್ರಜೆಗಳು. ಸ್ವಾತಂತ್ರ‍್ಯ ಬಂದಾದ ಮೇಲೆ ಎಲ್ಲರಿಗೂ ಆಹಾರ ಸಿಗುತ್ತಿದೆ. 140 ಕೋಟಿ ಜನರನ್ನು ಈ ದೇಶ ಸಾಕುತ್ತಿದೆ. ಸಾವಿರಾರು ಜನರ ಬಲಿದಾನಗಳ ಶತಮಾನದ ಹೋರಾಟದ ಫಲವನ್ನು ಇಂದಿನ ತಲೆಮಾರು ಅನುಭವಿಸುತ್ತಿದೆ. ಅದನ್ನು ಉಳಿಸಿಕೊಂಡು ಹೋಗಬೇಕಾದ ಜವಾಬ್ದಾರಿ ನಿಮ್ಮೆಲ್ಲರ ಮೇಲಿದೆ ಎಂದು ತಿಳಿಸಿದರು.
ಹಿರಿಯ ಸ್ವಾತಂತ್ರ‍್ಯ ಹೋರಾಟಗಾರರಾದ ದೊಡ್ಡದುರುಗಪ್ಪ ಕುರುಮರಡಿಕೆರೆ, ಎನ್. ಭೀಮಪ್ಪ ಕೂನಬೇವು, ಹನುಮಂತಪ್ಪ ಮರಡಿಹಳ್ಳಿ, ಗೋವಿಂದಪ್ಪ ಕೋವೇರಹಟ್ಟಿ, ಭೀಮಪ್ಪ ಮರಡಿಹಳ್ಳಿ ಅವರನ್ನು ಸನ್ಮಾನಿಸಲಾಯಿತು
ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಎಸ್.ಜೆ.ಎಂ. ವಿಶ್ವವಿದ್ಯಾಲಯ ಮತ್ತು ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯದ ಸಹಯೋಗದಲ್ಲಿ ಆಯೋಜಿಸಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರಕ್ಕೆ ಶಿವಯೋಗಿ ಸಿ.ಕಳಸದ ಚಾಲನೆ ನೀಡಿದರು.
ಇದನ್ನೂ ಓದಿ: ರಥಸಪ್ತಮಿ | ಸಾಮೂಹಿಕ ಸೂರ್ಯನಮಸ್ಕಾರ | ಸೂರ್ಯ ದೇವರ ಆರಾಧನೆ
ಎಸ್.ಜೆ.ಎಂ. ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಬಿ.ಗುಡಸಿ, ಆಡಳಿತ ಮಂಡಳಿ ಸದಸ್ಯರಾದ ಎಸ್.ಎನ್. ಚಂದ್ರಶೇಖರ್, ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ. ಪ್ರಶಾಂತ್, ವೈದ್ಯಕೀಯ ಅಧೀಕ್ಷಕ ಡಾ.ರಾಜೇಶ್ ಎಂ.ಎಸ್., ಡಾ.ನಾಗೇಂದ್ರಗೌಡ, ಡಾ.ರಾಮು ಎಸ್.ಜೆ.ಎಂ. ವಿದ್ಯಾಪೀಠದ ಎಲ್ಲಾ ಅಂಗಸಂಸ್ಥೆಗಳ ಮುಖ್ಯಸ್ಥರು ವೇದಿಕೆಯಲ್ಲಿದ್ದರು.
ಇದೇ ವೇಳೆ ವಿವಿಧ ಶಾಲಾ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ನೌಕರರಿಗೆ, ಪಿಎಚ್.ಡಿ. ಪದವಿ ಪಡೆದವರಿಗೆ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಹಾಗೂ ರ‍್ಯಾಂಕ್ ವಿಜೇತ ವಿದ್ಯಾರ್ಥಿಗಳಿಗೆ ಗಣ್ಯರು ಶಾಲು ಹೊದಿಸಿ ಸನ್ಮಾನಿಸಲಾಯಿತು.
ವಿದ್ಯಾಸಂಸ್ಥೆಯ 18 ಶಾಲಾಕಾಲೇಜುಗಳ ತಂಡಗಳು ಆಕರ್ಷಕ ಪಥಸಂಚಲನ ನಡೆಸಿದವು. ಅತ್ಯುತ್ತಮ ಪಥ ಸಂಚಲನ ಪ್ರದರ್ಶಿಸಿದ ಪ್ರೌಢಶಾಲಾ ವಿಭಾಗದಲ್ಲಿ ಎಸ್.ಜೆ.ಎಂ. ಸಿ.ಬಿ.ಎಸ್.ಇ. ಶಾಲೆ – ಪ್ರಥಮ, ಎಸ್.ಜೆ.ಎಂ. ಕನ್ನಡ ಮಾಧ್ಯಮ ಶಾಲೆ – ದ್ವಿತೀಯ ಮತ್ತು ಎಸ್.ಜೆ.ಎಂ. ಬೃಹನ್ಮಠ ಪ್ರೌಢಶಾಲೆ – ತೃತೀಯ ಹಾಗೂ ಕಾಲೇಜು ವಿಭಾಗದಲ್ಲಿ ಎಸ್.ಜೆ.ಎಂ. ನರ್ಸಿಂಗ್ ಕಾಲೇಜು – ಪ್ರಥಮ, ಎಸ್.ಜೆ.ಎಂ. ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು ಚಂದ್ರವಳ್ಳಿ – ದ್ವಿತೀಯ ಮತ್ತು ಎಸ್.ಜೆ.ಎಂ. ಫಾರ್ಮಸಿ ಕಾಲೇಜು – ತೃತೀಯ ಬಹುಮಾನ ನೀಡಲಾಯಿತು.
ಇದನ್ನೂ ಓದಿ: ಸರ್ಕಾರಿ ಕಲಾ ಕಾಲೇಜು ಆವರಣದಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳ | ಫೆಬ್ರವರಿ 01ಕ್ಕೆ
ನಂತರ ಶ್ರೀಮಠದಲ್ಲಿ ಎಸ್.ಜೆ.ಎಂ. ವಿದ್ಯಾಪೀಠದ ನವೀಕೃತ ಕಛೇರಿಯನ್ನು ಅಧ್ಯಕ್ಷರು ಉದ್ಘಾಟಿಸಿ, ಗೋಡೆ ಕ್ಯಾಲೆಂಡರ್, ಪಾಕೆಟ್ ಕ್ಯಾಲೆಂಡರ್ ಹಾಗು ಡೈರಿಯನ್ನು ಬಿಡುಗಡೆ ಮಾಡಿದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
