CHITRADURGA NEWS | 25 JANUARY 2026
ಚಿತ್ರದುರ್ಗ: ರಥಸಪ್ತಮಿ ಅಂಗವಾಗಿ ಭಾರತೀಯ ಯೋಗ ಶಿಕ್ಷಣ ಸಂಸ್ಥೆ ವತಿಯಿಂದ ನಗರದ ತುರುವನೂರು ರಸ್ತೆಯ ಶ್ರೀಪ್ರಸನ್ನ ವೆಂಕಟೇಶ್ವರಸ್ವಾಮಿ ದೇವಸ್ಥಾನ ಆವರಣದಲ್ಲಿ ಭಾನುವಾರ ಸೂರ್ಯದೇವರ ಆರಾಧನೆ ಮಾಡಲಾಯಿತು.
ಇದನ್ನೂ ಓದಿ: ಸರ್ಕಾರಿ ಕಲಾ ಕಾಲೇಜು ಆವರಣದಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳ | ಫೆಬ್ರವರಿ 01ಕ್ಕೆ
ಮುಂಜಾನೆ ಸಮಯ 5 ರಿಂದ 7:30 ರವರೆಗೆ ನಡೆದ ಕಾರ್ಯಕ್ರಮದಲ್ಲಿ ಯೋಗ ಸಂಸ್ಥೆಯ ಸದಸ್ಯರು ಹಾಗೂ ಸೂರ್ಯದೇವರ ಉಪಾಸಕರು ಶ್ರದ್ಧಾಭಕ್ತಿಯಿಂದ ಸೂರ್ಯದೇವರಿಗೆ ಪ್ರಿಯವಾದ ಅಗ್ನಿಹೋತ್ರ ಹೋಮ ನಡೆಸಿ, 108 ಸೂರ್ಯ ನಮಸ್ಕಾರ ಪ್ರದರ್ಶನ ಹಾಗೂ ಅರ್ಘ್ಯ ಸಮರ್ಪಿಸಿದರು.
ಈ ವೇಳೆ ಯೋಗ ಪ್ರಚಾರಕ ರವಿ ಕೆ.ಅಂಬೇಕರ್ ಮಾತನಾಡಿ, ಸೂರ್ಯದೇವರ ಆರಾಧನೆಯಿಂದ ಆಯುಷ್ಯ ಆರೋಗ್ಯ, ಸಂಪತ್ತು, ಆತ್ಮವಿಶ್ವಾಸ ದೊರೆಯುತ್ತದೆ, ರಥಸಪ್ತಮಿಯಂದು ಸೂರ್ಯೋದಯದ ಮೊದಲೇ ಬ್ರಹ್ಮ ಮುಹೂರ್ತದಲ್ಲಿ ಎದ್ದು, ಎಕ್ಕದ ಗಿಡದ 7 ಎಲೆಗಳನ್ನು ಅಕ್ಷತೆಯೊಂದಿಗೆ ತಲೆ, ಎರಡು ಭುಜಗಳು, ಬೆನ್ನು, ಎರಡು ತೊಡೆಗಳು ಮತ್ತು ಎರಡು ಕಾಲುಗಳ ಮೇಲಿಟ್ಟುಕೊಂಡು ಸ್ನಾನ ಮಾಡಿ ಸೂರ್ಯೋದಯದ ಸಮಯದಲ್ಲಿ ಅಥವಾ ಒಂದು ಗಂಟೆಯೊಳಗೆ ಸೂರ್ಯನಿಗೆ ನೀರನ್ನು ಅರ್ಘ್ಯವಾಗಿ ಅರ್ಪಿಸುವುದು ಶುಭಪ್ರದವಾಗುತ್ತದೆ.
ಇದನ್ನು ಮಾಡಿದರೆ ಪೂರ್ವ ಜನ್ಮಗಳ ಪಾಪಗಳು ನಿವಾರಣೆಯಾಗಿ, ದುಃಖಗಳು ದೂರವಾಗುತ್ತವೆ ಎಂದು ನಮ್ಮ ಸನಾತನ ಹಿಂದೂ ಧರ್ಮದಲ್ಲಿ ಪ್ರತೀತಿ ಇದೆ ಅದಕ್ಕಾಗಿ ನಮ್ಮ ಹಿರಿಯರು ಪ್ರತಿದಿನ ಈ ಪದ್ಧತಿಯನ್ನು ಅನುಸರಿಸುತ್ತಿದ್ದರು ಈಗಲೂ ಕೆಲ ಮನೆಗಳಲ್ಲಿ ಈ ಪದ್ಧತಿ ಕಾಣಬಹುದಾಗಿದೆ ಎಂದು ವಿವರಿಸಿದರು.
ಇದನ್ನೂ ಓದಿ: 25 ಜನರಿಗೆ ಜೈಲು ಶಿಕ್ಷೆ | ಆಸ್ಪತ್ರೆ ಬಳಿ ಗುಂಪು ಗಲಾಟೆ ಮಾಡಿದ್ದ ಆರೋಪ
ಕಾರ್ಯಕ್ರಮದಲ್ಲಿ 108 ಸೂರ್ಯನಮಸ್ಕಾರ ಪೂರ್ಣಪ್ರದರ್ಶನ ನೀಡಿದ ಯೋಗ ಸಾಧಕರಿಗೆ ಯೋಗ ಅಭಿನಂದನಾಪತ್ರ ನೀಡಿ ಗೌರವಿಸಲಾಯಿತು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
