
CHITRADURGA NEWS | 21 DECEMBER 2025
ಚಿತ್ರದುರ್ಗ: ನಗರದ ಪಾಶ್ರ್ವನಾಥ ವಿದ್ಯಾಸಂಸ್ಥೆಯ ಆಶ್ರಯದಲ್ಲಿ ಮಕ್ಕಳ ಸಂತೆ ಕಾರ್ಯಕ್ರಮವನ್ನು ಶಾಲಾ ಆವರಣದಲ್ಲಿ ನಡೆಸಲಾಯಿತು.
ಇದನ್ನೂ ಓದಿ: ಅಡಿಕೆ ಧಾರಣೆ | ಡಿಸೆಂಬರ್ 20 | ಭೀಮಸಮುದ್ರ, ಚನ್ನಗಿರಿ, ದಾವಣಗೆರೆ ಅಡಿಕೆ ರೇಟ್
ಇದರಲ್ಲಿ ಮಕ್ಕಳು ಸ್ವಯಂ ಆಗಿ ವಸ್ತುಗಳನ್ನು ಮಾರಾಟ ಮಾಡುವುದರ ಮೂಲಕ, ಗ್ರಾಹಕರನ್ನು ಆಕರ್ಷಿಸಿ ತಮ್ಮ ವಸ್ತುಗಳನ್ನು ಮಾರಾಟ ಮಾಡುತ್ತಿದ್ದು ಕಂಡು ಬಂದಿತು.
ಅಣ್ಣಬನ್ನಿ, ಅಕ್ಕಬನ್ನಿ, ಅಂಕಲ್ ಬನ್ನಿ, ಅಂಟಿಬನ್ನಿ, ತಾತಾಬನ್ನಿ, ಅಜ್ಜಿಬನ್ನಿ ಎಂದು ಕೂಗುತ್ತಾ ತಮ್ಮಲ್ಲಿದ್ದ ವಸ್ತುಗಳನ್ನು ಅವರಿಗೆ ತೋರಿಸಿ ಕಡಿಮೆ ರೇಟು ತೆಗೆದುಕೊಳ್ಳಿ ಎಂದು ದುಬಾಲು ಬೀಳುತ್ತಿದ್ದು ದ್ಯಶ್ಯ ಕಂಡು ಬಂದಿತು.
ಮಕ್ಕಳ ಸಂತೆಯಲ್ಲಿ ಸೋಪ್ಪು, ತರಕಾರಿ, ಬಿಸ್ಕತ್‍ಗಳು, ರವೆ ಉಂಡೆ, ಕಾರ ಮಂಡಕ್ಕಿ, ಗಿರಿಮಿಟ್, ಪಾನಿ ಪೂರಿ, ಸೌಂದರ್ಯ ವರ್ಧಕ ವಸ್ತುಗಳು, ಹಣ್ಣುಗಳು, ಹೂಗಳು, ಕಡ್ಲೇಗಿಡ, ಬಳೆಗಳು, ಹೇರ್ ಪಿನ್, ಕ್ಲಪಿಗಳು, ತಿಕಲಿಗಳು, ಹುರಿದ ಶೇಂಗಾ, ಚಕ್ಕಲಿ, ಹವರೆಕಾಯಿ, ಪಾಪ್‍ಕಾರನ್, ಬಿಸ್ಕತ್, ಸೋಪುಗಳು, ಪೇಸ್ಟ್ ಬ್ರಶ್‍ಗಳು, ಮೋಬೈಲ್ ಚಾರ್ಚರ್ ವೈರ್, ಹಿಯರಿಂಗ್, ಉದಿನಕಡ್ಡಿ, ಪೆನ್ನು, ನೈಲ್ ಪಾಲಿಷ್ ಸೇರಿದಂತೆ ಇತರೆ ವಸ್ತುಗಳ ಮಾರಾಟ ಮಾಡಲಾಯಿತು.
ಇದನ್ನೂ ಓದಿ: ಸುತ್ತೂರು ಜಾತ್ರೆಯ ಪ್ರಚಾರ ರಥ ಚಿತ್ರದುರ್ಗಕ್ಕೆ ಆಗಮನ | ಮುರುಘಾ ಮಠದಲ್ಲಿ ಸ್ವಾಗತ
ಪಾಶ್ರ್ವನಾಥ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಸುರೇಶ್ ಕುಮಾರ್ ಸಿಸೋಡಿಯಾ ಮಾತನಾಡಿ, ಈ ರೀತಿಯಾದ ಕಾರ್ಯಕ್ರಮವನ್ನು ನಮ್ಮ ಶಾಲೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತಿದೆ. ಇದರಲ್ಲಿ ಮಕ್ಕಳು ಕೂಡುವ, ತೆಗೆದುಕೊಳ್ಳುವ ಲೆಕ್ಕಾಚಾರವನ್ನು ಕಲಿಯುವ ಉದ್ದೇಶದಿಂದ ಇದನ್ನು ಮಾಡಲಾಗುತ್ತಿದೆ.
ಈ ರೀತಿಯಾಗಿ ಮಾಡುವುದರಿಂದ ಮಕ್ಕಳಲ್ಲಿ ಗಣಿತದ ಪ್ರಜ್ಞೆ ಬೆಳೆಯುತ್ತಿದೆ. ಜನತೆಯ ನಡುವೆ ಯಾವ ರೀತಿ ವ್ಯವಹಾರ ಮಾಡಬೇಕೆಂಬುದು ತಿಳಿಯುತ್ತದೆ. ನಮ್ಮ ಶಾಲೆಯಲ್ಲಿನ ಎಲ್ ಕೆ.ಜಿ.ಯಿಂದ ಹಿಡಿದು 9 ನೇ ತರಗತಿಯವರೆಗಿನ ಸುಮಾರು 400 ಮಕ್ಕಳು ಈ ಮಕ್ಕಳ ಸಂತೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ ಎಂದರು.
ಇದನ್ನೂ ಓದಿ: ಖಾಸಗಿ ಬಸ್ಸುಗಳಲ್ಲಿ ಕನ್ನಡ ನಾಮಫಲಕ ಹಾಕಿ | ಬಸ್ ನಿಲ್ದಾಣದಲ್ಲಿ ಪ್ರತಿಭಟನೆ
ಪಾಶ್ರ್ವನಾಥ ವಿದ್ಯಾ ಸಂಸ್ಥೆಯ ಸಹಾ ಕಾರ್ಯದರ್ಶಿ ಸುರೇಶ್ ಪಟಿಯಾರ್, ಖಂಜಾಚಿ ರಾಜೇಂದ್ರ ದಲೇಷಾ, ನಿರ್ದೆಶಕರಾದ ಜವೇರಿಲಾಲ್, ಹಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಯರಾದ ನಜೀಮಾ ಸ್ವಾಲೆಹಾ, ಪ್ರೌಢಶಾಲಾ ಮುಖ್ಯೋಪಾಧ್ಯಯರಾದ ಜನಕರೆಡ್ಡಿ ಸೇರಿದಂತೆ ಶಾಲೆಯ ಬೋಧಕ ಮತ್ತು ಭೋದಕೇತರ ಸಿಬ್ಬಂದಿಗಳು ಹಾಜರಿದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
