
CHITRADURGA NEWS | 08 December 2025
ಚಿತ್ರದುರ್ಗ: ವಿದ್ಯಾರ್ಥಿಗಳು ಶಿಕ್ಷಣ ಪಡೆದ ನಂತರ ಉದ್ಯೋಗಕ್ಕಾಗಿ ಕಾಯುತ್ತಾ ಕುಳಿತುಕೊಳ್ಳುವ ಬದಲು ಸ್ವಂತ ಉದ್ಯಮ ಆರಂಭಿಸಿ ಮತ್ತೊಬ್ಬರಿಗೆ ಉದ್ಯೋಗ ನೀಡುವಂತಾಗಬೇಕು ಎಂದು ಕೆನರಾ ಬ್ಯಾಂಕ್ ವ್ಯವಸ್ಥಾಪಕ ರಾಘವೇಂದ್ರ ತಿಳಿಸಿದರು.
ಇದನ್ನೂ ಓದಿ: ಉದ್ದ ಜಿಗಿತ | ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಎಲ್.ಎಚ್.ಅಭಿ
ನಗರದ ಎಸ್.ಜೆ.ಎಂ.ಐಟಿ ಕಾಲೇಜಿನಲ್ಲಿ ಸಣ್ಣ ಮತ್ತು ಮಧ್ಯಮ ಉದ್ಯಮ ಅಭಿವೃದ್ದಿ ಇಲಾಖೆ ಹಾಗು ಮೆಕ್ಯಾನಿಕಲ್ ವಿಭಾಗದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಉದ್ಯಮಿತಾ ಜಾಗೃತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಎಂಎಸ್‌ಎಂಇ ಯೋಜನೆಯಡಿ ಉದ್ಯಮ ಆರಂಭಿಸಲು ಬ್ಯಾಂಕುಗಳಿಂದ ಕಡಿಮೆ ಬಡ್ಡಿದರದಲ್ಲಿ ಸಾಲ, ಉತ್ಪಾದನಾ ಸಾಧನಗಳ ಖರೀದಿ, ಉದ್ಯಮ ವಿಸ್ತರಣೆ, ಹೊಸ ಆವಿಷ್ಕಾರಗಳಿಗೆ ಹಣಕಾಸು ಸಹಾಯದಂತಹ ಸೌಲಭ್ಯಗಳನ್ನು ಪಡೆಯಬಹುದು ಎಂದು ವಿವರಿಸಿದರು.
ಪ್ರಾಂಶುಪಾಲ ಡಾ.ಪಿ.ಬಿ.ಭರತ್ ಮಾತನಾಡಿ, ಎಂಎಸ್‌ಎಂಇ ವಲಯ ನಮ್ಮ ದೇಶದ ಅಭಿವೃದ್ಧಿಗೆ ಅತ್ಯಂತ ಮಹತ್ತರ ಪಾತ್ರ ವಹಿಸುತ್ತಿದೆ. ದೇಶದಲ್ಲಿ ಉದ್ಯೋಗಾವಕಾಶಗಳನ್ನು ಹೆಚ್ಚಿಸುವುದು, ನವೀನತೆಗಳಿಗೆ ವೇದಿಕೆ ಒದಗಿಸುವುದು, ನಿರುದ್ಯೋಗ ಸಮಸ್ಯೆಯನ್ನು ನಿವಾರಿಸುವುದು ಮತ್ತು ಗ್ರಾಮೀಣ ಹಾಗೂ ನಗರಗಳ ಆರ್ಥಿಕತೆಯನ್ನು ಸಬಲಗೊಳಿಸುವುದು ಎಂಎಸ್‌ಎಂಇ ಮೂಲ ಉದ್ದೇಶ ಎಂದರು.
ಇದನ್ನೂ ಓದಿ: ಪೋಲಿಯೊ ಲಸಿಕೆಯಿಂದ ಮಕ್ಕಳು ವಂಚಿತರಾಗದಿರಲಿ | ADC ಬಿ.ಟಿ.ಕುಮಾರಸ್ವಾಮಿ
ಇಂದಿನ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಉದ್ಯೋಗ ಹುಡುಕುವುದಕ್ಕಿಂತ ಮತ್ತೊಬ್ಬರಿಗೆ ಉದ್ಯೋಗ ನೀಡುವವರಾಗೋಣ. ಯುವಜನತೆ ದೇಶದ ಅಭಿವೃದ್ದಿಗೆ ಪ್ರಮುಖ ಬಲವಾಗಿದ್ದು, ಪದವಿಯಲ್ಲಿ ಪಡೆದ ಜ್ಞಾನ, ತಾಂತ್ರಿಕ ಕೌಶಲ್ಯ, ಹಾಗೂ ಸೃಜನಶೀಲತೆಗಳನ್ನು ಬಳಸಿಕೊಂಡು ಸಣ್ಣ ಉದ್ಯಮ ಆರಂಭಿಸಿ ನಿಮ್ಮ ಬದುಕು ಹಾಗೂ ಸಮಾಜ ಸುಧಾರಿಸುವ ಮಹತ್ವದ ಕೆಲಸ ಮಾಡಿ ಎಂದು ತಿಳಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿಮ್ಮ ಈ ಗುರಿ ತಲುಪಲು ಹಲವು ಸಾಲ ಸೌಲಭ್ಯ, ತರಬೇತಿ, ಆವಿಷ್ಕಾರಗಳಿಗೆ ಉತ್ತೇಜನ ನೀಡುತ್ತಿದೆ. ಈ ಮೂಲಕ ವಿದ್ಯಾರ್ಥಿಗಳು ಸ್ವಂತ ಸ್ಟಾರ್ಟಪ್, ಉತ್ಪಾದನಾ ಘಟಕ ಆರಂಭಿಸುವುದರ ಜೊತೆಗೆ ನಿಮ್ಮ ಕ್ಷೇತ್ರಕ್ಕೆ ಹೊಂದುವಂತಹ ವಾಣಿಜ್ಯ ಆವಕಾಶಗಳನ್ನು ಎಂಎಸ್‌ಎಂಇ ಯೋಜನೆಗಳ ಮೂಲಕ ಪಡೆದು ಉದ್ಯಮಶೀಲತೆಯನ್ನು ಬೆಳೆಸಿ ರಾಷ್ಟ್ರ ನಿರ್ಮಾಣದ ಭಾಗವಾಗಿ ಎಂದು ಸಲಹೆ ನೀಡಿದರು.
ಜಿಲ್ಲಾ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಉಪನಿರ್ದೇಶಕ ಮಂಜುನಾಥ್ ಮಾತನಾಡಿ, ರಾಜ್ಯ ಹಾಗೂ ರಾಷ್ಟ್ರದ ಆರ್ಥಿಕ ಶಕ್ತಿಯು ಉದ್ಯೋಗ ಸೃಷ್ಟಿ, ಗ್ರಾಮೀಣ ಅಭಿವೃದ್ಧಿ, ಮತ್ತು ಸ್ಥಳೀಯ ಉತ್ಪಾದನೆಗಳ ಮೇಲೆ ನಿಂತಿದೆ. ಎಂಎಸ್‌ಎಂಇ ಯೋಜನೆಗಳ ಮೂಲಕ ಭದ್ರತೆ ನೀಡದೇ ಸಾಲ ಪಡೆಯುವುದು, ಯಂತ್ರೋಪಕರಣಗಳ ಖರೀದಿ, ತರಬೇತಿ ಮತ್ತು ಮಾರ್ಗದರ್ಶನ, ಹೊಸ ತಂತ್ರಜ್ಷಾನಕ್ಕೆ ನೆರವು ಹಾಗೂ ಉತ್ಪನ್ನಗಳ ಮಾರಾಟದಂತಹ ಸಹಾಯಗಳನ್ನು ಪಡೆಯಬಹುದಾಗಿದೆ ಎಂದರು.
ಇದನ್ನೂ ಓದಿ: ಎಬಿವಿಪಿ ಸಂಘಟಿಸಿರುವ ಭೀಮ ನಮನದ ಪೋಸ್ಟರ್ ಬಿಡುಗಡೆ ಮಾಡಿದ ಜಿಲ್ಲಾಧಿಕಾರಿ
ಎಂಎಸ್‌ಎಂಇ ಸಹಾಯ ನಿರ್ದೇಶಕ ಬೆಂಗಳೂರಿನ ಮಹಮ್ಮದ್ ಫಜಲುಲ್ಲಾ, ದಾವಣಗೆರೆ ಬಾಪೂಜಿ ಪಾಲಿಟೆಕ್ನಿಕ್ ಕಾಲೇಜಿನ ಮಹೇಶ್ವರಪ್ಪ, ಉಪನ್ಯಾಸಕರಾದ ಡಾ.ಬಿ.ಜಿ.ಕುಮಾರಸ್ವಾಮಿ, ಡಾ.ಎಸ್.ಪಿ.ಶಿವಕುಮಾರ್, ಡಾ.ರಾಜೇಶ್ ಇತರರಿದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
