
CHITRADURGA NEWS | 05 DECEMBER 2025
ಚಿತ್ರದುರ್ಗ: ಸಮಾಜದಲ್ಲಿ ಎಲ್ಲಾ ಕಲಹ, ಆತಂಕಗಳಿಗೆ ಮುಖ್ಯ ಕಾರಣ ದ್ವೇಷ. ದ್ವೇಷದಿಂದ ದೇಶವೇ ನಾಶವಾಗುತ್ತದೆ. ಎಷ್ಟೋ ಜನರು ದ್ವೇಷದಿಂದ ಬದುಕನ್ನೇ ನಾಶ ಮಾಡುವಂತಹವರಾಗಿರುತ್ತಾರೆ ಎಂದು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಆಡಳಿತ ಮಂಡಳಿ ಸದಸ್ಯರಾದ ಡಾ.ಬಸವಕುಮಾರ ಸ್ವಾಮಿಗಳು ಹೇಳಿದರು.
ಇದನ್ನೂ ಓದಿ: ರೈತರು ಬೆಳೆದ ಮೆಕ್ಕೆಜೋಳ ಏನು ಮಾಡಬೇಕು MLC ರವಿಕುಮಾರ್ ಸರ್ಕಾರಕ್ಕೆ ಪ್ರಶ್ನೆ
ನಗರದ ಬಸವಕೇಂದ್ರ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿಂದು 35ನೇ ವರ್ಷದ ಹನ್ನೆರಡನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ 14 ಜೋಡಿಗಳ ವಿವಾಹ ನೆರವೇರಿಸಿ ಮಾತನಾಡಿದ ಶ್ರೀಗಳು,
ಶರಣು ಎಂದವರಿಗೆ ಮರಣವಿಲ್ಲ. ಶರಣಾರ್ಥಿ ಎಂಬುದು ಒಬ್ಬ ವ್ಯಕ್ತಿಯ ಮನಸ್ಸಿನಲ್ಲಿ ಕರುಣೆ ಕಾಣುವುದು ಕಷ್ಟ. ಅದಕ್ಕೆ ಸಾಧನೆ ಮಾಡಿರಬೇಕಾಗಿರುತ್ತದೆ. ನಾವೆಲ್ಲ ಬಸವಣ್ಣನವರು ಹೇಳಿರುವಂತೆ ನಾನೆಚ್ಚು ನೀನೆಚ್ಚು ಎಂಬ ಭಾವನೆಯಿಂದ ಹೊರಬರಬೇಕಾಗುತ್ತದೆ. ಪ್ರೀತಿ ವಾತ್ಸಲ್ಯ ಮಮತೆಯನ್ನು ನವ ವಧು-ವರರು ತುಂಬಿಕೊಳ್ಳಿ. ದ್ವೇಷ ಅಸೂಯೆಯಿಂದ ಏನೂ ಸಾಧಿಸಲು ಸಾಧ್ಯವಿಲ್ಲ. ಹಾಗಾಗಿ ಅವುಗಳಿಂದ ಸದಾ ದೂರವಿದ್ದು ನೆಮ್ಮದಿಯಾಗಿರಿ ಎಂದು ಹಿತವಚನ ನುಡಿದರು.
ಹಿಂದಿನ ಕಾಲದ ಜನರು 100ವರ್ಷಕ್ಕು ಹೆಚ್ಚು ಕಾಲ ಬಾಳುತ್ತಿದ್ದರು. ಕಾರಣ ಅವರಲ್ಲಿ ಮಾನವೀಯತೆ, ಮಮತೆ, ಪ್ರೀತಿ ವಾತ್ಸಲ್ಯವಿತ್ತು. ಅವರಲ್ಲಿ ದುಶ್ಚಟಗಳಿರಲಿಲ್ಲ. ಆದರೆ ಇಂದು ದ್ವೇಷ, ಅಸೂಯೆ ತಾಂಡವವಾಡುತ್ತಿದೆ. ದುಶ್ಚಟಗಳು ಹೆಚ್ಚಾಗಿವೆ. ಮಾನವ 50ಕ್ಕು ಕಡಿಮೆ ವಯಸ್ಸಿನಲ್ಲೇ ದುರ್ಮರಣಕ್ಕೆ ಈಡಾಗುತ್ತಿದ್ದಾನೆ.
ಇದನ್ನೂ ಓದಿ: ರೈತರು ಬೆಳೆದ ಮೆಕ್ಕೆಜೋಳ ಏನು ಮಾಡಬೇಕು MLC ರವಿಕುಮಾರ್ ಸರ್ಕಾರಕ್ಕೆ ಪ್ರಶ್ನೆ
ಜಾತಿ ಬೇಧ ನಿವಾರಣೆಗಾಗಿ ಶ್ರೀಮಠದಲ್ಲಿ ಅಂತರ್ಜಾತಿ ವಿವಾಹಗಳನ್ನು ನೆರವೇರಿಸುತ್ತ ಬರಲಾಗಿದೆ. ಈ ಕಾರ್ಯಕ್ರಮದಲ್ಲಿ ಮಾದಿಗ (ವರ) – ವಾಲ್ಮೀಕಿ (ವಧು) ಮತ್ತು ಲಿಂಗಾಯತ (ವರ) – ಕುರುಬ (ವಧು) 2 ಅಂತರ್ಜಾತಿ ಜೋಡಿಗಳ ವಿವಾಹ ನೆರವೇರುತ್ತಿರುವುದು ಸಂತಸ ತಂದಿದೆ. ದೇಶಸೇವೆ, ರಾಷ್ಟ್ರಸೇವೆ ಎಂದರೆ ದುಂದುವೆಚ್ಚದಿಂದ ವಿವಾಹವಾಗದೆ ಈ ರೀತಿಯ ಸಾಮೂಹಿಕವಾಗಿ ವಿವಾಹ ಮಾಡಿಕೊಳ್ಳುವುದಾಗಿದೆ ಎಂದರು.
ದಾವಣಗೆರೆ ವಿರಕ್ತಮಠದ ಡಾ.ಬಸವಪ್ರಭು ಸ್ವಾಮೀಜಿ, ಶಿರಸಂಗಿಯ ಶ್ರೀ ಬಸವ ಮಹಾಂತ ಸ್ವಾಮೀಜಿ, ಹೊಳಲ್ಕೆರೆಯ ಶ್ರೀ ತಿಪ್ಪೇರುದ್ರ ಸ್ವಾಮೀಜಿ ಮಾತನಾಡಿದರು.
ಇದನ್ನೂ ಓದಿ: ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ | OPS ಕುರಿತ ವರದಿ ಸಿದ್ಧ | ಮಾಲತೇಶ್ ಮದ್ದಜ್ಜಿ
ಜಾನಪದ ಕಲಾವಿದ ಗಂಜಿಗಟ್ಟೆ ಕೃಷ್ಣಮೂರ್ತಿ ಜಾನಪದ ಗೀತೆಗಳನ್ನು ಹಾಡಿದರು. ಜಮುರಾ ಕಲಾವಿದರು ವಚನ ಪ್ರಾರ್ಥನೆ ಮಾಡಿದರು. ದರ್ಶನ್ ದೇವರು ಸ್ವಾಗತಿಸಿದರು. ಜ್ಞಾನಮೂರ್ತಿ ನಿರೂಪಿಸಿ ವಂದಿಸಿದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
