
CHITRADURGA NEWS | 30 NOVEMBER 2025
ಚಿತ್ರದುರ್ಗ: ಕಾಂಗ್ರೆಸ್ ಪಕ್ಷಕ್ಕೆ ವಯಸ್ಸಾಗಿದೆ, ಚಿಕಿತ್ಸೆ ಕೊಟ್ಟರೂ ಅದು ಬದುಕುವುದು ಕಷ್ಟ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ತಿಳಿಸಿದರು.
ಇದನ್ನೂ ಓದಿ: BJP ರೈತ ಮೋರ್ಚಾದಿಂದ ನಾಳೆ ಪ್ರತಿಭಟನೆ

ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದರು ಅವರು, ಬಿಜೆಪಿ ಮುಂದೆ ರಾಜ್ಯದ ಚುನಾವಣೆಯಲ್ಲಿ ಗೆಲ್ಲಲಿದೆ. ದೇಶದಲ್ಲೂ ಗೆಲುವು ಸಾಧಿಸಲಿದೆ. ಕಾಂಗ್ರೆಸ್ ನಿರ್ನಾಮ ಮಾಡಲು ಅಲ್ಲಿನವರೇ ಹುಟ್ಟಿಕೊಂಡಿದ್ದಾರೆ, ಬೇರೆಯವರು ಬೇಕಾಗಿಲ್ಲ ಎಂದು ವಿಶ್ಲೇಷಿಸಿದರು.
ಸಂವಿಧಾನ ರಕ್ಷಕರೆಂದು ಹೇಳಿಕೊಳ್ಳುವ ಹಾಗೂ ಸಂವಿಧಾನವನ್ನು ಕೈಯಲ್ಲಿ ಹಿಡಿದುಕೊಂಡು ಓಡಾಡುವ ಕಾಂಗ್ರೆಸ್ ಪಕ್ಷದ ಪ್ರಧಾನಿ ಇಂದಿರಾ ಗಾಂಧಿಯವರು 1975ರಲ್ಲಿ ಮಾಡಿದ್ದೇನು? ತುರ್ತು ಪರಿಸ್ಥಿತಿ ಹೇರಿ ಎರಡರಿಂದ ಎರಡೂವರೆ ವರ್ಷಗಳ ಕಾಲ ಸಂವಿಧಾನಕ್ಕೆ ಮೂರು ಕಾಸಿನ ಬೆಲೆ ಇಲ್ಲದಂತೆ ಮಾಡಿದ್ದು ಕಾಂಗ್ರೆಸ್ ಪಕ್ಷದವರು ಎಂದು ಆಕ್ಷೇಪಿಸಿದ್ದಾರೆ.
ಇವತ್ತು ತಾವು ಸಂವಿಧಾನ ರಕ್ಷಿಸುವುದಾಗಿ ಭಾಷಣ ಹೊಡೆಯುತ್ತಾರೆ. ನೀವು ಹೇಗೆ ರಕ್ಷಿಸುತ್ತೀರಿ? ರಕ್ಷಿಸಲು ಸಂವಿಧಾನ ಎಲ್ಲಿ ತೊಂದರೆಯಲ್ಲಿ ಸಿಲುಕಿದೆ ಎಂದು ಪ್ರಶ್ನೆಯನ್ನು ಮುಂದಿಟ್ಟರು. ಯಾರು ರಕ್ಷಣೆ ಮಾಡುವುದಾಗಿ ಹೇಳುತ್ತಾರೋ ಅವರೇ ಭಕ್ಷಕರು. ಕಾಂಗ್ರೆಸ್ಸಿಗೆ ಸರಿಯಾದ ನಿಲುವಿಲ್ಲ. ಆ ಪಕ್ಷಕ್ಕೆ ಈ ದೇಶದಲ್ಲಿ ಉಳಿಗಾಲವೂ ಇಲ್ಲ ಎಂದರು.
ಇದನ್ನೂ ಓದಿ: ಡಿಸೆಂಬರ್ 02 ರಂದು ಭೋವಿ ಅಭಿವೃದ್ಧಿ ನಿಗಮ ಅಧ್ಯಕ್ಷ ಎಂ.ರಾಮಪ್ಪ ಜಿಲ್ಲಾ ಪ್ರವಾಸ
ಬಿಜೆಪಿ ಬಂದರೆ ನಿಮಗೆ ಉಳಿಗಾಲವಿಲ್ಲ, ನೀವು ಹುಷಾರಾಗಿರಿ ಎಂದೊಡನೆ ಮುಸಲ್ಮಾನರು ಪಾಪ ಅವರಿಗೆ ಮತ ಹಾಕುತ್ತಾರೆ. ಬಿಜೆಪಿ ಬರದಂತೆ ನೋಡುವುದಷ್ಟೇ ಅವರ ಕೆಲಸ. ದಲಿತರಿಗೆ ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ರದ್ದು ಮಾಡುತ್ತಾರೆಂದು ತಿಳಿಸುತ್ತಾರೆ. ಯಾರಾದರೂ ಸಂವಿಧಾನ ತೆಗೆಯಲು ಸಾಧ್ಯವೇ ಎಂದು ಕೇಳಿದರು.
ಇದಕ್ಕೆ ಅಪವಾದ ಎಂಬಂತೆ ದೇಶದ ಕಾಂಗ್ರೆಸ್ ಸ್ಥಾನವನ್ನು (ಎಐಸಿಸಿ) ದಲಿತರಿಗೆ ಕೊಟ್ಟಿದ್ದಾರೆ. ಸ್ವಾತಂತ್ರ್ಯ ಹೋರಾಟಕ್ಕಾಗಿ ಮಾಡಿದ ಸಂಘಟನೆ ಕಾಂಗ್ರೆಸ್ಸನ್ನು ವಿಸರ್ಜಿಸಲು ಮಹಾತ್ಮ ಗಾಂಧಿಯವರು ಸೂಚಿಸಿದ್ದರು. ಈಗ ಮಹಾತ್ಮ ಗಾಂಧಿಯವರ ಮಾತನ್ನು ಉಳಿಸಲು ರಾಹುಲ್ ಗಾಂಧಿಯವರು ಬಂದಿದ್ದಾರೆ. ಪರಿಶಿಷ್ಟ ಜಾತಿಯವರಿಗೆ ಎಐಸಿಸಿ ಅಧ್ಯಕ್ಷತೆ ಕೊಟ್ಟು, ಕಾಂಗ್ರೆಸ್ ನಾಶ ಆಯಿತೆಂಬ ಕೆಟ್ಟ ಹೆಸರನ್ನು ಖರ್ಗೆಜೀ ಅವರ ಮೇಲೆ ಹಾಕುತ್ತಾರಲ್ಲಾ ಎಂಬುದೇ ನನ್ನ ಆತಂಕ. ರಾಹುಲ್ ಗಾಂಧಿಯವರೇ ಕಾಂಗ್ರೆಸ್ಸಿಗೆ ಕೊನೆಯ ಮೊಳೆ ಹೊಡೆಯಬೇಕಿತ್ತು ಎಂದು ತಿಳಿಸಿದರು.
ರಾಜ್ಯದಲ್ಲಿ ಯಾರಾದರೂ ಮುಖ್ಯಮಂತ್ರಿ ಆಗಿರಿ; ನಮಗೇನೂ ಚಿಂತೆ ಇಲ್ಲ. ಜನರ ಸಮಸ್ಯೆಗಳಿಗೆ ಪರಿಹಾರ ಕೊಡಿ ಎಂದು ಆಗ್ರಹಿಸಿದರು.
ಇದನ್ನೂ ಓದಿ: ಅಡಿಕೆ ಧಾರಣೆ | ನವೆಂಬರ್ 29 | ಇಂದಿನ ಅಡಿಕೆ ರೇಟ್
ಒಂದು ಬ್ರೇಕ್‍ಫಾಸ್ಟ್ ಮೂಲಕ ಒಡೆದುಹೋದ ಸಂಬಂಧವನ್ನು ಸರಿಪಡಿಸಲಾಗದು. ಹಾಳಾದ ಸಂಬಂಧ ಒಂದು ಬ್ರೇಕ್‍ಫಾಸ್ಟ್ ಮೂಲಕ ಸರಿಹೋಗುತ್ತದೆಯೇ ಎಂದು ಕೇಳಿದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
