
CHITRADURGA NEWS | 09 OCTOBER 2025
ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯಲ್ಲಿ ಬುಧವಾರ ರಾತ್ರಿ ಸುರಿದ ಮಳೆ ವಿವರದನ್ವಯ ಸರಾಸರಿ 18 ಮಿ.ಮೀ ಮಳೆಯಾಗಿದೆ.
ಇದನ್ನೂ ಓದಿ: ಗಗನದಲಿ ಮಳೆಯ ಜೊತೆ ಗುಡುಗಿನ ತನನ | ಜಿಲ್ಲೆಯಲ್ಲಿ ಆರ್ಭಟಿಸಿದ ಮಳೆರಾಯ
ಚಳ್ಳಕೆರೆ ತಾಲ್ಲೂಕಿನಲ್ಲಿ 19.4 ಮಿ.ಮೀ., ಚಿತ್ರದುರ್ಗ ತಾಲ್ಲೂಕು 29 ಮಿ.ಮೀ., ಹಿರಿಯೂರು ತಾಲ್ಲೂಕು 20.4 ಮಿ.ಮೀ., ಹೊಳಲ್ಕೆರೆ ತಾಲ್ಲೂಕು 18.7 ಮಿ.ಮೀ., ಹೊಸದುರ್ಗ ತಾಲ್ಲೂಕು 9.7ಮಿ.ಮೀ. ಹಾಗೂ ಮೊಳಕಾಲ್ಮೂರು ತಾಲ್ಲೂಕಿನಲ್ಲಿ 2.7 ಮಿ.ಮೀ. ಮಳೆಯಾಗಿದೆ.
ಹೋಬಳಿವಾರು ಮಳೆ ವಿವರ:
ಚಳ್ಳಕೆರೆ ತಾಲ್ಲೂಕಿನ ಚಳ್ಳಕೆರೆಯಲ್ಲಿ 16.6 ಮಿ.ಮೀ, ನಾಯಕನಹಟ್ಟಿ 30.3 ಮಿ.ಮೀ, ಪರಶುರಾಂಪುರ 18.1 ಮಿ.ಮೀ, ತಳಕು 15.3 ಮಿ.ಮೀ, ಮಳೆಯಾಗಿದೆ.
ಚಿತ್ರದುರ್ಗ ತಾಲ್ಲೂಕಿನ ಚಿತ್ರದುರ್ಗದಲ್ಲಿ 19.7 ಮಿ.ಮೀ, ಭರಮಸಾಗರ 43 ಮಿ.ಮೀ, ಹಿರೇಗುಂಟನೂರು 30 ಮಿ.ಮೀ, ತುರುವನೂರು 29.3 ಮಿ.ಮೀ, ಮಳೆಯಾಗಿದೆ.
ಹಿರಿಯೂರು ತಾಲ್ಲೂಕಿನ ಹಿರಿಯೂರಿನಲ್ಲಿ 20.3 ಮಿ.ಮೀ,. ಐಮಂಗಲ 14.7 ಮಿ.ಮೀ, ಧರ್ಮಪುರ 21 ಮಿ.ಮೀ, ಜವನಗೊಂಡನಹಳ್ಳಿ 26.6 ಮಿ.ಮೀ ಮಳೆಯಾಗಿದೆ.
ಹೊಳಲ್ಕೆರೆ ತಾಲ್ಲೂಕಿನ ಹೊಳಲ್ಕೆರೆಯಲ್ಲಿ 19.5 ಮಿ.ಮೀ, ಬಿ.ದುರ್ಗ 11.4 ಮಿ.ಮೀ, ರಾಮಗಿರಿ 12.1 ಮಿ.ಮೀ, ತಾಳ್ಯ 28.6 ಮಿ.ಮೀ ಮಳೆಯಾಗಿದೆ.
ಹೊಸದುರ್ಗ ತಾಲ್ಲೂಕಿನ ಹೊಸದುರ್ಗದಲ್ಲಿ 11.3 ಮಿ.ಮೀ, ಮಾಡದಕೆರೆ 14.2 ಮಿ.ಮೀ,, ಮತ್ತೋಡು 7.5 ಮಿ.ಮೀ, ಶ್ರೀರಾಂಪುರ 3.7 ಮಿ.ಮೀ ಮಳೆಯಾಗಿದೆ.
ಮೊಳಕಾಲ್ಮೂರು ತಾಲ್ಲೂಕಿನ ಮೊಳಕಾಲ್ಮೂರಿನಲ್ಲಿ 4.7 ಮಿ.ಮೀ, ದೇವಸಮುದ್ರದಲ್ಲಿ 0.4 ಮಿ.ಮೀ ಮಳೆಯಾಗಿದೆ.
13 ಮನೆಗಳು ಹಾನಿ :
ಮಳೆಯಿಂದಾಗಿ ಜಿಲ್ಲೆಯಾದ್ಯಂತ 13 ಮನೆಗಳು ಭಾಗಶಃ ಹಾನಿಯಾಗಿದ್ದು, 2 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾಗೂ 2 ಹೆಕ್ಟೇರ್ ಕೃಷಿ ಬೆಳೆ ಹಾನಿಯಾಗಿದೆ.
ಇದನ್ನೂ ಓದಿ: ಬೆಂಬಲ ಬೆಲೆಯಡಿ ಹೆಸರುಕಾಳು ಖರೀದಿ
ಚಿತ್ರದುರ್ಗ ತಾಲ್ಲೂಕಿನಲ್ಲಿ 01 ಭಾಗಶಃ ಮನೆಹಾನಿ, ಚಳ್ಳಕೆರೆ ತಾಲ್ಲೂಕಿನಲ್ಲಿ 08 ಭಾಗಶಃ ಮನೆಹಾನಿ ಹಾಗೂ 02 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾಗೂ 02 ಹೆಕ್ಟೇರ್ ಕೃಷಿ ಬೆಳೆ ಹಾನಿಯಾಗಿದೆ. ಹೊಳಲ್ಕೆರೆ ತಾಲ್ಲೂಕಿನಲ್ಲಿ 02 ಭಾಗಶಃ ಮನೆಹಾನಿ ಹಾಗೂ ಹಿರಿಯೂರು ತಾಲ್ಲೂಕಿನಲ್ಲಿ 02 ಮನೆಗಳು ಭಾಗಶ ಹಾನಿಯಾಗಿವೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
