
CHITRADURGA NEWS | 09 OCTOBER 2025
ಹೊಳಲ್ಕೆರೆ: ಈರುಳ್ಳಿ ಬೆಲೆ ಕುಸಿತದಿಂದ ಕಂಗಾಲಾಗಿರುವ ತಾಲೂಕಿನ ರಾಮಗಿರಿ, ತಾಳಿಕಟ್ಟೆ, ಗಂಗಸಮುದ್ರ, ಆರ್.ಡಿ. ಕಾವಲ್ ಸೇರಿದಂತೆ ಅನೇಕ ಗ್ರಾಮಗಳ ರೈತರು ತಾಲೂಕಿನ ರಾಮಗಿರಿ ರೈಲ್ವೆ ನಿಲ್ದಾಣದ ಮುಂಭಾಗದ ರಸ್ತೆಗೆ ಈರುಳ್ಳಿ ಸುರಿದು ಗುರುವಾರ ಪ್ರತಿಭಟನೆ ನಡೆಸಿ, ನಾಡಕಚೇರಿ ಉಪತಹಸೀಲ್ದಾರ್ ರಾಮಚಂದ್ರಪ್ಪ ಗೆ ಮನವಿ ಸಲ್ಲಿಸಿದರು.
ಇದನ್ನೂ ಓದಿ: ಜಿಲ್ಲೆಯಲ್ಲಿ ಮಳೆಗೆ 13 ಮನೆ ಹಾನಿ | ಮಳೆಯ ವಿವರ ಇಲ್ಲಿದೆ….
ಇದೇ ವೇಳೆ ಗ್ರಾಪಂ ಸದಸ್ಯ ರವಿಕುಮಾರ್ ಮಾತನಾಡಿ, ತಾಲೂಕಿನಲ್ಲಿ ಮಳೆ ವೈಪರೀತ್ಯದ ನಡುವೆಯೂ ಒಂದಿಷ್ಟು ಈರುಳ್ಳಿ ಫಸಲು ರೈತರ ಕೈಸೇರಿದೆ. ಆದರೆ ಬೆಲೆ ಇಲ್ಲದ ಕಾರಣ ಖರೀದಿದಾರರು ರೈತರ ಬಳಿಗೆ ಆಗಮಿಸುತ್ತಿಲ್ಲ. ಈಗಾಗಲೇ ಬಹುತೇಕ ಎಲ್ಲಾ ರೈತರು ಈರುಳ್ಳಿ ಕಟಾವು ಮಾಡಿ, ಚೀಲಕ್ಜೆ ತುಂಬಿ ಶೆಡ್ ಗಳನ್ನು ನಿರ್ಮಿಸಿಕೊಂಡು ಕಾಯುವಂತಾಗಿದೆ.
ಇದರಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆಕಸ್ಮಿಕವಾಗಿ ಖರೀದಿದಾರರು ಬಂದರು ಕೂಡ ಬಾಯಿಗೆ ಬಂದಂತೆ ಹರಾಜು ಕೇಳುತ್ತಾರೆ.
ಹಾಕಿದ ಬಂಡವಾಳದ ಅರ್ದ ಭಾಗ ಕೂಡ ರೈತರಿಗೆ ಸಿಗುತ್ತಿಲ್ಲ. ರೈತರ ಇಡೀ ವರ್ಷದ ಜೀವನವೇ ಕುಸಿದು ಹೋಗಿದೆ. ಸರಕಾರ ತರಕಾರಿಗಳಿಗೆ ಬೆಂಬಲ ಬೆಲೆ ನೀಡುತ್ತಿಲ್ಲ. ಕಡೇ ಪಕ್ಷ ಈರುಳ್ಳಿಗಾದರೂ ಬೆಂಬಲ ಬೆಲೆ ನೀಡಿ ಖರೀದಿಸಬೇಕು. ರೈತರನ್ನು ಸಂಕಷ್ಟದಿಂದ ಪಾರು ಮಾಡಬೇಕಿದೆ.
ಇನ್ನೂ ಮನೆ ಮಂದಿಯೆಲ್ಲ ಜಮೀನಿನಲ್ಲಿ ಕೆಲಸ ಮಾಡಿದರೂ ಎಕರೆಗೆ ಕನಿಷ್ಟ. ಐವತ್ತರಿಂದ ಅರವತ್ತು ಸಾವಿರ ಖರ್ಚು ತಗಲುತ್ತಿದೆ. ಹಾಗಾಗಿ ಅನೇಕ ರೈತರು ಈರುಳ್ಳಿ ಕೀಳದೇ ಹೊಲದಲ್ಲಿಯೇ ಬಿಟ್ಟಿದ್ದಾರೆ. ಕೆಲವರು ಗೊಬ್ವರವಾಗಲಿ ಎಂದು ಟ್ರ್ಯಾಕ್ಟರ್ ಹೊಡೆದಿದ್ದಾರೆ. ಇದು ಹೀಗೆ ಆದರೇ ರೈತರು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದರು.
ರೈತ ಹೇಮಂತ್ ಕುಮಾರ್ ಮಾತನಾಡಿ, ನಮ್ಮ ರಾಜ್ಯದ ಈರುಳ್ಳಿ ಬೆಳೆ ಬರುವುದಕ್ಕೂ ಮುನ್ನವೇ ಸರಕಾರ ಮಹಾರಾಷ್ಟ್ರ ದ ಈರುಳ್ಳಿ ಯನ್ನು ಆಮದು ಮಾಡಿಕೊಳ್ಳುತ್ತದೆ. ಹಾಗಾಗಿ ನಮ್ಮ ಈರುಳ್ಳಿ ಗೆ ಬೆಲೆಯೇ ಇಲ್ಲವಾಗುತ್ತದೆ.
ಇದನ್ನೂ ಓದಿ: ಗಗನದಲಿ ಮಳೆಯ ಜೊತೆ ಗುಡುಗಿನ ತನನ | ಜಿಲ್ಲೆಯಲ್ಲಿ ಆರ್ಭಟಿಸಿದ ಮಳೆರಾಯ
ಅಲ್ಲದೆ ಈರುಳ್ಳಿ ಯನ್ನು ಶೇಖರಿಸಿಡಲು ರೈತರಿಗೆ ಯಾವುದೇ ಅನುಕೂಲವಿಲ್ಲ. ಈಗ ಮಳೆ ಆರಂಭವಾಗಿದ್ದು, ಇರುವ ಈರುಳ್ಳಿ ಕೂಡ ಕೊಳೆತು ಹೋಗುವ ಆತಂಕ ರೈತರಲ್ಲಿ ಮನೆ ಮಾಡಿದೆ. ಸಾಲ ಸೂಲ ಮಾಡಿ ಈರುಳ್ಳಿ ಹಾಕಿದ ರೈತರಿಗೆ ಸಂಕಷ್ಟ ಎದುರಾಗಿದೆ ಸರಕಾರ ರೈತರ ನೆರವಿಗೆ ಧಾವಿಸಬೇಕು ಎಂದು ಒತ್ತಾಯಿಸಿದರು.
ರೈತರಾದ ಸಿದ್ದೇಶ್ ಯಾದವ್, ಲೋಕೇಶ್, ಮಾಳಿಗೇರ ಸಿದ್ದಣ್ಣ, ಕುಮಾರಣ್ಣ, ತಾಳಿಕಟ್ಟೆ ಫಳಕ್ ರುದ್ರಸ್ವಾಮಿ, ಪಿಎಸ್ ಐ ಸಚೀನ್, ಮುಖ್ಯ ಪೇದೆ ವಸಂತ್, ರಾಮಗಿರಿ, ಗಂಗಸಮುದ್ರ, ಆರ್ ಡಿ ಕಾವಲ್, ತಾಳಿಕಟ್ಟೆ, ಸೇರಿದಂತೆ ನಾನಾ ಗ್ರಾಮಗಳ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಉಪ ತಹಸೀಲ್ದಾರ್ ರಾಮಚಂದ್ರಪ್ಪ ಗೆ ಮನವಿ ಸಲ್ಲಿಸಿದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
