
CHITRADURGA NEWS | 23 SEPTEMBER 2025
ಚಿತ್ರದುರ್ಗ: ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಎಸ್‌ಜೆಎಂ ವಿದ್ಯಾಪೀಠದ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಇದನ್ನೂ ಓದಿ: ಪ್ರಧಾನಿ ಮೋದಿ ಜೀವನ ಆಧಾರಿತ ವಸ್ತು ಪ್ರದರ್ಶನ | ಸಂಸದ ಗೋವಿಂದ ಕಾರಜೋಳ ಉದ್ಘಾಟನೆ
ಎಸ್.ಜೆ.ಎಂ.ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿ ಬಹುಮಾನ ವಿತರಿಸಿದರು.
ಈ ವೇಳೆ ಶ್ರೀ ಮುರುಘೇಂದ್ರ ಸ್ವಾಮಿಗಳು, ಎಸ್‌ಜೆಎಂಐಟಿ ಪ್ರಾಚಾರ್ಯ ಡಾ.ಭರತ್ ಪಿ ಬಿ, ಶ್ರೀಬೃಹನ್ಮಠ ಪಿಯು ಕಾಲೇಜಿನ ಪ್ರಾಚಾರ್ಯ ಪಿ ಎಂ ಜಿ ರಾಜೇಶ್, ಡಾ.ಟಿ.ಎಸ್. ನಾಗರಾಜ್, ಡಾ.ರಘುನಾಥ ರೆಡ್ಡಿ, ರವಿಶಂಕರ್, ಪುಷ್ಪವಲ್ಲಿ, ಡಾ.ಸವಿತಾ, ಡಾ.ಈಶ್ವರಪ್ಪ, ಡಾ.ಕುಮಾರಸ್ವಾಮಿ ಕೆ ಮತ್ತಿತರರು ಉಪಸ್ಥಿತರಿದ್ದರು.
ಜಮುರಾ ಕಪ್-2025 ಕ್ರೀಡಾಕೂಟದ ಫಲಿತಾಂಶ:
ಪ್ರೌಢಶಾಲಾ ಮಟ್ಟದ ಬಾಲಕರ ವಿಭಾಗದಲ್ಲಿ ವಾಲಿಬಾಲ್‌ನಲ್ಲಿ ಎಸ್.ಜೆ.ಎಂ.ಪ್ರೌಢಶಾಲೆ, ರಾಮಗಿರಿ-ಪ್ರಥಮ, ಬಸವೇಶ್ವರ ಪ್ರೌಢಶಾಲೆ, ಅಲದಕಟ್ಟಿ ಹಾವೇರಿ-ದ್ವಿತೀಯ, ಎಸ್.ಜೆ.ಎಂ.ಪ್ರೌಢಶಾಲೆ ಬೀರೂರುತೃತೀಯ, ಕಬ್ಬಡಿ- ಎಂಎಂ ಪ್ರೌಢಶಾಲೆ, ಮೋಟೆಬೆನ್ನೂರು-ಪ್ರಥಮ, ಎಸ್.ಜೆ.ಎಂ.ಪ್ರೌಢಶಾಲೆ, ಮತ್ತೋಡು-ದ್ವಿತೀಯ, ಎಸ್.ಜೆ.ಎಂ.ಸಿಬಿಎಸ್ಸಿ-ತೃತೀಯ, ಬಾಲಕಿಯರ ವಿಭಾಗದಲ್ಲಿ ಥ್ರೋಬಾಲ್‌ನಲ್ಲಿ ಎಸ್.ಜೆ.ಎಂ.ಪ್ರೌಢಶಾಲೆ-ಪ್ರಥಮ, ಪ್ರಿಯದರ್ಶಿನಿ ಪ್ರೌಢಶಾಲೆ-ದ್ವಿತೀಯ, ವಿರಕ್ತಮಠ-ತೃತೀಯ, ಕಬ್ಬಡಿಎಸ್.ಜೆ.ಎಂ.ಆಂಗ್ಲಶಾಲೆ-ಪ್ರಥಮ, ಎಸ್.ಜೆ.ಎಂ.ಸಿಬಿಎಸ್ಸಿ-ದ್ವಿತೀಯ, ಎಸ್.ಜೆ.ಎಂ.ಆಂಗ್ಲಶಾಲೆ, ದಾವಣಗೆರೆ-ತೃತೀಯ ಸ್ಥಾನ ಪಡೆದವು.
ಪದವಿ ಪೂರ್ವ ಕಾಲೇಜು ಮಟ್ಟದ ಬಾಲಕರ ವಿಭಾಗದ ವಾಲಿಬಾಲ್‌ನಲ್ಲಿ ಎಸ್.ಜೆ.ಎಂ.ಪಿಯು ಕಾಲೇಜು ಚಂದ್ರವಳ್ಳಿ-ಪ್ರಥಮ, ಎಸ್.ಬಿ.ಸಿ.ಪಿಯು ಕಾಲೇಜು, ಗಾರೆಹಟ್ಟಿ -ದ್ವಿತೀಯ, ಎಸ್.ಜೆ.ಎಂ.ಪಿಯು ಕಾಲೇಜು ಹಾವೇರಿ-ತೃತೀಯ, ಕಬ್ಬಡಿಯಲ್ಲಿ ಎಸ್.ಜೆ.ಎಂ.ಪಿಯು ಕಾಲೇಜು ಚಿಕ್ಕಜಾಜೂರು-ಪ್ರಥಮ, ಎಸ್.ಜೆ.ಎಂ.ಇಂಡಿಪೆಂಡೆಂಟ್ ಪಿಯು ಕಾಲೇಜು -ದ್ವಿತೀಯ, ಎಸ್.ಜೆ.ಎಂ.ಪಿಯುಕಾಲೇಜು ಚಂದ್ರವಳ್ಳಿ-ತೃತೀಯ, ಕ್ರಿಕೆಟ್‌ನಲ್ಲಿ ಎಸ್.ಜೆ.ಎಂ.ಇಂಡಿಪೆಂಡೆಂಟ್ ಪಿಯು ಕಾಲೇಜು-ಪ್ರಥಮ, ಎಸ್.ಬಿ.ಸಿ.ಪಿಯು ಕಾಲೇಜು, ಗಾರೆಹಟ್ಟಿ -ದ್ವಿತೀಯ, ಎಸ್.ಜೆ.ಎಂ.ಬಾಪೂಜಿ ಪಿಯುಕಾಲೇಜು, ಭರಮಸಾಗರ-ತೃತೀಯ ಸ್ಥಾನ ಪಡೆದವು.
ಪಿಯು ಬಾಲಕಿಯರ ವಿಭಾಗದ ಥ್ರೋಬಾಲ್‌ನಲಿ ್ಲಎಸ್.ಜೆ.ಎಂ.ಪಿಯುಕಾಲೇಜು ಚಂದ್ರವಳ್ಳಿ-ಪ್ರಥಮ,ಎಸ್.ಜೆ.ಎಂ.ಇಂಡಿಪೆಂಡೆಂಟ್ ಪಿಯು ಕಾಲೇಜು-ದ್ವಿತೀಯ, ಎಸ್.ಬಿ.ಸಿ.ಪಿಯು ಕಾಲೇಜು, ಗಾರೆಹಟ್ಟಿ–ತೃತೀಯ, ಕಬ್ಬಡಿ ಎಸ್.ಜೆ.ಎಂ.ಪಿಯು ಕಾಲೇಜು ರಾಣೆಬೆನ್ನೂರು-ಪ್ರಥಮ, ಎಸ್.ಜೆ.ಎಂ. ಪಿಯು ಕಾಲೇಜು ಹೊಸದುರ್ಗ-ದ್ವಿತೀಯ, ಎಸ್.ಜೆ.ಎಂ.ಪಿಯು ಕಾಲೇಜು ಚಂದ್ರವಳ್ಳಿ-ತೃತೀಯ ಸ್ಥಾನ ಪಡೆದವು.
ಇದನ್ನೂ ಓದಿ: ಶಿಕ್ಷಕರ ಸೇವಾ ಮನೋಭಾವ ವಿದ್ಯಾರ್ಥಿಗಳ ಭವಿಷ್ಯಕ್ಕೆ ದಾರಿದೀಪ | ಡಾ.ಶಿವಮೂರ್ತಿ ಶಿವಾಚಾರ್ಯ ಶ್ರೀ
ಪದವಿ ಕಾಲೇಜು ಮಟ್ಟದ ಪುರುಷರ ವಿಭಾಗದ ವಾಲಿಬಾಲ್‌ನಲ್ಲಿ ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯ-ಪ್ರಥಮ, ಎಸ್.ಜೆ.ಎಂಫಾರ್ಮಸಿ ಕಾಲೇಜು ದ್ವಿತೀಯ, ಎಸ್.ಜೆ.ಎಂ.ಕಾಲೇಜು ಚಂದ್ರವಳ್ಳಿ ತೃತೀಯ, ಕಬ್ಬಡಿಯಲ್ಲಿ ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯ-ಪ್ರಥಮ, ಎಸ್.ಜೆ.ಎಂಫಾರ್ಮಸಿ ಕಾಲೇಜು ದ್ವಿತೀಯ, ಎಸ್.ಜೆ.ಎಂ.ಕಾನೂನು ಮಹಾವಿದ್ಯಾಲಯ-ತ್ರೃತೀಯ, ಕ್ರಿಕೆಟ್ ಎಸ್.ಜೆ.ಎಂಫಾರ್ಮಸಿ ಕಾಲೇಜು ಪ್ರಥಮ ಹಾಗೂ ದ್ವಿತೀಯ ಸ್ಥಾನ ಗಳಿಸಿದರೆ ಮಹಿಳೆಯರ ವಿಭಾಗದಲ್ಲಿ ಥ್ರೋಬಾಲ್‌ನಲ್ಲಿ ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯ-ಪ್ರಥಮ, ಎಸ್.ಜೆ.ಎಂಫಾರ್ಮಸಿ ಕಾಲೇಜು ದ್ವಿತೀಯ, ಎಸ್.ಜೆ.ಎಂ.ಕಾಲೇಜು(ಡೆಂಟಲ್ ಕ್ಯಾಂಪಸ್) ತೃತೀಯ, ಕಬ್ಬಡಿಯಲ್ಲಿಎಸ್.ಜೆ.ಎಂ.ಕಾಲೇಜು ರಾಣೆಬೆನ್ನೂರು -ಪ್ರಥಮ, ಎಸ್‌ಎಂಐಟಿ-ದ್ವಿತೀಯ, ಎಸ್.ಜೆ.ಎಂ.ಕಾನೂನು ಮಹಾವಿದ್ಯಾಲಯ ತ್ರೃತೀಯ ಸ್ಥಾನ ಪಡೆದವರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
